ರಾಜಕೀಯ

ಚುನಾವಣೆ ಸಮಯದಲ್ಲಿ ಜೆಡಿಎಸ್ ನಾಯಕರು ಸುರಿಸುವ ಕಣ್ಣೀರಿಗೆ ಕರಗಬೇಡಿ: ಸಿದ್ದರಾಮಯ್ಯ

Shilpa D

ಬೆಂಗಳೂರು: ಚುನಾವಣೆ ಸಮಯಗಳಲ್ಲಿ ಜೆಡಿಎಸ್ ನಾಯಕರುಗಳು ಹರಿಸುವ ಕಣ್ಣೀರಿಗೆ ಕರಗಬೇಡಿ ಎಂದು ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಹಿಂದೊಮ್ಮೆ ಜೆಡಿಎಸ್ ಕಾರ್ಯಕರ್ತರಾಗಿದ್ದ ಸಿದ್ದರಾಮಯ್ಯ, 1994 ರಿಂದ ದೇವೇಗೌಡ ಸಿಎಂ ಆಗಿದ್ದ ವೇಳೆಯಿಂದಲೂ ಕಣ್ಣೀರು ಸುರಿಸುವುದು ಜೆಡಿಎಸ್ ನಾಯಕರಿಗೆ ಹವ್ಯಾಸವಾಗಿಬಿಟ್ಟಿದೆ ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇತ್ತಿಚೆಗೆ  ಮಾಜಿ ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.

ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರಾದಾಯಿಕ ವೈರಿಗಳಾಗಿದ್ದು, ಇಬ್ಬರ ಮಧ್ಯೆ ಬದ್ದ ಹೋರಾಟ ನಡೆಯಲಿದೆ. ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. 

ಇದು ಕಾಂಗ್ರೆಸ್ ನಲ್ಲಿ ಹತಾಶೆ ಮೂಡಿಸಿತ್ತು.  ಜೆಡಿಎಸ್ ಮತ್ತು ಬಿಜೆಪಿಯನ್ನು ಸೋಲಿಸಬೇಕೆಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಜೆಡಿಎಸ್ ಗೆ ಸರ್ಕಾರ ರಚಿಸಲು ಸ್ವಂತ ಸಾಮರ್ಥ್ಯವಿಲ್ಲ ಹೀಗಾಗಿ ಯಾವಾಗಲೂ ಅಧಿಕಾರಕ್ಕೆ ಬರಲು ಬೇರೆ ಪಕ್ಷಗಳನ್ನು ಅವಲಂಬಿಸಬೇಕು.

ಸಿದ್ದರಾಮಯ್ಯ ಹೇಳಿಕೆಯಿಂದ ಈ ಬಾರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂಬುದು ರಾಜಕೀಯ ತಜ್ಞರ ಅಭಿಮತವಾಗಿದೆ.

SCROLL FOR NEXT