ರಾಜಕೀಯ

ಬಯಸಿದ್ದು ಪುತ್ರನಿಗೆ, ಟಿಕೆಟ್ ಸಿಕ್ಕಿದ್ದು ತಾಯಿಗೆ; ಒಲ್ಲದ ಮನಸ್ಸಿನಿಂದ ಶಿರಾದಿಂದ ಅಮ್ಮಾಜಮ್ಮ ಕಣಕ್ಕೆ

Shilpa D

ತುಮಕೂರು: ಮುಂದಿನ ಮೂರು ವರ್ಷಗಳ ಕಾಲ ಶಿರಾ ದಲ್ಲಿ ಜೆಡಿಎಸ್ ಶಾಸಕರೇ ಇರುತ್ತಾರೆ, ಪಕ್ಷ ಯಾವ ವಿಶ್ವಾಸದ ಮೇಲೆ ನನ್ನನ್ನು ಕಣಕ್ಕಿಳಿಸಿದೆಯೋ ಅದನ್ನು ನಾನು ಪೂರ್ಣಗೊಳಿಸುತ್ತೇನೆ ಎಂದು ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಾ ಹೇಳಿದ್ದಾರೆ.

ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅಮ್ಮಾಜಮ್ಮ ಅವರಿಗೆ ಇಷ್ಟವಿರಲಿಲ್ಲ , ತಮ್ಮ ಪುತ್ರ ಬಿ.ಎಸ್ ಸತ್ಯಪ್ರಕಾಶ್ ಅವರಿಗೆ ಟಿಕೆಟ್ ಬಯಸಿದ್ದರು.  ಸತ್ಯಪ್ರಕಾಶ್ ಅವರಿಗೆ ರಾಜಕೀಯ ಅನುಭವವಿದ್ದು  ಶಿರಾ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದಾರೆ.

7ನೇ ತರಗತಿ ವರೆಗೂ ಓದಿರುವ 60 ವರ್ಷದ ಅಮ್ಮಾಜಮ್ಮ ತಮ್ಮ ಪತಿಗಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.  2018ರ ವಿಧಾನಸಭೆ ಚುನಾವಣೆಯಲ್ಲಿ ಪುತ್ರ ಸತ್ಯಪ್ರಕಾಶ್ ಜೊತೆ ಸೇರಿ ಪ್ರಚಾರ ಮಾಡಿದ್ದರು. ಕುಂಚಿಟಿಗ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಸತ್ಯನಾರಾಯಣ ಅವರ ಮಗಳು ಸತ್ಯಕಲಾ ಚಿಕ್ಕನಹಳ್ಳಿ ಜಿಲ್ಲಾ ಪಂಚಾಯತ್ ಚುನಾವಣೆಗೆ 2015 ರಲ್ಲಿ ಸ್ಪರ್ಧಿಸಿದ್ದರು, ಆ ವೇಳೆ ಕೂಡ ಅಮ್ಮಾಜಮ್ಮ ಪ್ರಚಾರದಲ್ಲಿ ಭಾಗವಹಿಸಿದ್ದರು.

ಪತಿಯ ಸಾವಿನ ನಂತರ ಅನುಕಂಪದ ಆಧಾರದ ಮೇಲೆ ಮತ ದೊರೆಯಲಿವೆ ಎಂಬ ಕಾರಣಕ್ಕೆ ಜೆಡಿಎಸ್ ಅಮ್ಮಾಜಮ್ಮ ಅವರಿಗೆ ಟಿಕೆಟ್ ನೀಡಿದೆ. ಇವರ ವಿರುದ್ಧ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಬಿಎಸ್ ಮೂಡಲಗಿರಿಯಪ್ಪ ಪುತ್ರ ಡಾ.ರಾಜೇಶ್ ಗೌಡ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಆದರೆ ವಿಚಿತ್ರವೆದರೇ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಟಿಬಿ ಜಯಚಂದ್ರ ಅವರನ್ನು ಸೋಲಿಸಲರು ರಾಜೇಶ್ ಗೌಡ ಮತ್ತು ಅವರ ತಂದೆ  ಜೆಡಿಎಸ್ ಪರವಾಗಿ ಕೆಲಸ ಮಾಡಿದ್ದರು. ಹಾಗಾಗಿ ಎಲ್ಲಾ ಪರಿಸ್ಥಿತಿಗಳು ಸತ್ಯನಾರಾಯಣ ಪರವಾಗಿದ್ದವು, ಆದರೆ ಸದ್ಯ ಅಮ್ಮಾಜಮ್ಮ ಕಣಕ್ಕಿಳಿದಿದ್ದಾರೆ, ಪರಿಸ್ಥಿತಿ 2018 ರಂತೆ ಇಲ್ಲ, ಸದ್ಯ ಯಾರ ಬೆಂಬಲವೂ ಇಲ್ಲ.

SCROLL FOR NEXT