ರಾಜಕೀಯ

ಉಪಚುನಾವಣೆಗೆ ರಣತಂತ್ರ: ಪ್ರತಿ ವಾರ್ಡ್, ಪಂಚಾಯ್ತಿಗೆ ಒಬ್ಬೊಬ್ಬ ಶಾಸಕರು, ನಾಯಕರ ನೇಮಕ - ಡಿಕೆಶಿ

Vishwanath S

ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರತಿ ವಾರ್ಡ್ ಹಾಗೂ ಪಂಚಾಯ್ತಿಗೆ ಒಬ್ಬೊಬ್ಬ ಶಾಸಕ, ಎಂಎಲ್ ಸಿ, ಹಿರಿಯ ನಾಯಕರನ್ನು ಉಸ್ತುವಾರಿ ಯಾಗಿ ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಎರಡು ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಮಾಧ್ಯಮಗ ಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎರಡೂ ಕ್ಷೇತ್ರದ ಪ್ರತಿ ವಾರ್ಡ್ ಹಾಗೂ ಪಂಚಾಯ್ತಿಗೆ ನಾಯಕರ ನೇಮಕ ಮಾಡಲಾಗಿದೆ. ಕಾರ್ಯಕರ್ತರಿಗೂ ಬೂತ್ ಮಟ್ಟದ ಜವಾಬ್ದಾರಿ ನೀಡಲಾಗಿದೆ. ಅವರೆಲ್ಲರೂ ಸೇರಿ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.

ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಪ್ರಸ್ತಾಪಿಸಿದಾಗ, ಅವರು ಅನುಭವಸ್ಥರು ಹಾಗೂ ಹಿರಿಯರಿದ್ದಾರೆ. ಅವರ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ಚುನಾವಣೆ ಮಾಡಲಿ' ಎಂದರು. 

ಇನ್ನು ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ನಾನು ಯಾರನ್ನೂ ನಿಂದಿಸಿಲ್ಲ. ನಿಂದಿಸುವುದೂ ಇಲ್ಲ. ನಾನು ಒಳ್ಳೆಯದು ಮಾಡಿದ್ದರೆ ದೇವರು ನನಗೆ ಒಳ್ಳೆಯದು ಮಾಡಲಿ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ನೀಡಲಿ. ಅದನ್ನು ಅನುಭವಿಸಲು ಸಿದ್ಧ ಎಂದು ಎಚ್.ಡಿ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ.

SCROLL FOR NEXT