ರಾಜಕೀಯ

ಉಪ ಚುನಾವಣಾ ಕಣದಲ್ಲಿ ಹೊಸಬರ ಜಿದ್ದಾಜಿದ್ದಿನ ಹೋರಾಟ!

Shilpa D

ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣಾ ಕಣದಲ್ಲಿ ಆರು ಮಂದಿ ಅಭ್ಯರ್ಥಿಗಳಿದ್ದು ಹೆಚ್ಚಿನವರು 
ಹೊಸಬರಾಗಿದ್ದಾರೆ. ಎರಡು ಕ್ಷೇತ್ರಗಳ ಚುನಾವಣೆಗೆ ಮೂರು ಪಕ್ಷಗಳ ಆರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಆರು ಮಂದಿಯಲ್ಲಿ ಐವರು ಹೊಸಬರಾಗಿದ್ದಾರೆ, ಪಕ್ಷಕ್ಕೂ ಮತ್ತು ರಾಜಕೀಯಕ್ಕೆ ಹೊಸಬರಾಗಿದ್ದಾರೆ. ಬದ್ಧತೆಗಳನ್ನು ಪೂರೈಸುವುದರಿಂದ ಹಿಡಿದು ಅನುಕಂಪದ ಅಲೆ ಮೇಲೆ ಮತ ಗಳಿಸಲು ಅಭ್ಯರ್ಥಿಗಳು ಮುಂದಾಗಿದ್ದಾರೆ.ಈ ಚುನಾವಣೆಯಲ್ಲಿ ಹೊಸ ತಂತ್ರಗಳನ್ನು ಬಳಸಲು ಮೂರು ಪಕ್ಷಗಳು ಮುಂದಾಗಿವೆ.

ಆರ್ ಆರ್ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಚುನಾವಣೆ ಮತ್ತು ರಾಜಕೀಯಕ್ಕೆ ಹೊಸಬರಲ್ಲ, ಇದೇ ಕ್ಷೇತ್ರದಿಂದ ಈ ಮೊದಲು ಸ್ಪರ್ಧಿಸಿ ಗೆದ್ದಿದ್ದರು,ಆದರೆ ಈ ಮೊದಲು ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸುತ್ತಿದ್ದಾರೆ.

ಆರ್ ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಗೆಲ್ಲುವ ವಿಶ್ವಾಸದಲ್ಲಿದ್ದಾರೆ, ಪಕ್ಷದಿಂದ ಕಣಕ್ಕಿಳಿಯಲು ಯಾವುದೇ ಅಭ್ಯರ್ಥಿ ಇಲ್ಲದಿದ್ದಾಗ ಕುಸುಮಾ ಹೆಸರು ಅಂತಿಮವಾಯಿತು. ಹಲವು ವರ್ಷಗಳಿಂದ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಲು ಕುಸುಮಾ ತಂದೆ ಹನುಮಂತರಾಯಪ್ಪ ಕಾಯುತ್ತಿದ್ದರು,  ಆದರೆ ಮುನಿರತ್ನ ಅವರ ಹಣ ಮತ್ತು ತೋಳ್ಬಲಕ್ಕೆ ಸವಾಲು ಹಾಕಲು ಕುಸುಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ,  ಕುಸುಮಾ ವಿದ್ಯಾವಂತೆ, ಸ್ವತಂತ್ರ್ಯ ಮಹಿಳೆಯಾಗಿದ್ದಾರೆ. ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿಯಾಗಿರುವ ಕುಸುಮಾ ಅತಿ ಚಿಕ್ಕ ವಯಸ್ಸಿನಲ್ಲೇ ಪತಿ ಕಳೆದುಕೊಂಡಿದ್ದಾರೆ.

2018ರ ಚುನಾವಣೆಯಲ್ಲಿನ ವೈಫಲ್ಯದದಿಂದ ಅನುಭವಿಸಿದ ಅವಮಾನದಿಂದ  ಹೊರಬರಲು ಹಾಗೂ ತಳಮಟ್ಟದ ಕಾರ್ಯಕರ್ತರಿಗೆ ಜೆಡಿಎಸ್ ಮನ್ನಣೆ ನೀಡುತ್ತದೆ ಎಂಬುದನ್ನು ಮನದಟ್ಟು ಮಾಡಲು ಮುಂದಾಗಿರುವ ವರಿಷ್ಠರು ಕೃಷ್ಣಮೂರ್ತಿ ಅವರನ್ನು ಕಣಕ್ಕಿಳಿಸಿದೆ.

ಕೃಷ್ಣಮೂರ್ತಿ ಸ್ಥಳೀಯ ಕಾರ್ಯಕರ್ತರಾಗಿದ್ದು,  ಬಿಬಿಎಂಪಿ ಯ ನಾಮ ನಿರ್ದೇಶಿತ ಸದಸ್ಯರಾಗಿದ್ದಾರೆ.  ಅವರು ಕೂಡ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಶಿರಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರಿಗೂ ಕೂಡ ಇದು ಮೊದಲ ಚುನಾವಣೆ, ಅನುಕಂಪದ ಮೇಲೆ ಮತ ಪಡೆಯಲು ಜೆಡಿಎಸ್ ಬಯಸಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ರಾಜೇಶ್ ಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಪ್ರಯತ್ನಿಸಿತ್ತು, ಆದರೆ ಸಫಲವಾಗಲಿಲ್ಲ, ರಾಜೇಶ್ ಗೌಡ ಬಿಜೆಪಿ ಟಿಕೆಟ್ ನಿಂದ ಕಣಕ್ಕಿಳಿದಿದ್ದಾರೆ.ಅದಾದ ನಂತರ ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಜೆಡಿಎಸ್ ಮನವೊಲಿಸಿತು, ಆದರೆ ಅಮ್ಮಾಜಮ್ಮ ಅವರು ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ
ಬಯಸಿದ್ದರು. 

ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ 10ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮೊದಲ ಬಾರಿಗೆ ಉಪ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.  

SCROLL FOR NEXT