ನಂಜಾವಧೂತ ಸ್ವಾಮೀಜಿ ಭೇಟಿ ಮಾಡಿದ ಜಯಚಂದ್ರ 
ರಾಜಕೀಯ

ಶಿರಾ ಉಪಚುನಾವಣೆ: ಸ್ವಾಮೀಜಿ ಭೇಟಿ ಮಾಡಿದ ಜಯಚಂದ್ರ; ಬಿಜೆಪಿಯಿಂದ ಸಣ್ಣ ಸಮುದಾಯಗಳ ಮತ ಬೇಟೆ

ಶಿರಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿ ಕುಂಚಟಿಗ ಒಕ್ಕಲಿಗ ಸ್ವಾಮೀಜಿ ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆದರು.

ತುಮಕೂರು: ಶಿರಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿ ಕುಂಚಟಿಗ ಒಕ್ಕಲಿಗ ಸ್ವಾಮೀಜಿ ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆದರು.

ಮಾಜಿ ಸಚಿವ ಎಚ್ ಆಂಜನೇಯ ಜಯಚಂದ್ರ ಪರ ಪ್ರಚಾರ ನಡೆಸಿ ದಲಿತ ಸಮುದಾಯದ ಜೊತೆ ಸಭೆ ನಡೆಸಿದರು. 

ಇನ್ನು ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಚನೆ ಮೇರೆಗೆ ಬಿಜೆಪಿ ಮಾಜಿ ವಕ್ತಾರ ಹಾಗೂ ಮಡಿವಾಳ ಸುಮದಾಯದ ಪ್ರಮುಖ ಮುಖಂಡ  ರಘು ಕೌಟಿಲ್ಯ ಶಿರಾಗೆ ಭೇಟಿ ನೀಡಿ ಸಣ್ಣ ಸಣ್ಣ ಸಮುದಾಯಗಳ ಜೊತೆ ಸಭೆ ನಡೆಸಿದರು.

ಕಾಯಕ ಸಮುದಾಯ ಶಿರಾದ ಮತ ಬ್ಯಾಂಕ್ ಆಗಿದೆ. ಆದರೆ ಚುನಾವಣಾ ಫಲಿತಾಂಶದಲ್ಲಿ ಮಹತ್ವದ ಪಾತ್ರ ವಹಿಸಲಿದೆ, ಭಾನುವಾರ ವಿಜಯೇಂದ್ರ ಸಮ್ಮುಖಧಲ್ಲಿ ಹಲವು ಮಂದಿ ಬಿಜೆಪಿ ಸೇರಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾ ದೇವಿ ಅವರ ವರ್ಷದ ತಿಥಿ ಅಂಗವಾಗಿ ವಿಜಯೆಂದ್ರ ಅವರು ಶಿರಾ ಉಪಚುನಾವಣೆ ಪ್ರಚಾರದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಮಂಗಳವಾರದಿಂದ ಮತ್ತೆ ಪ್ರಚಾರ ಕಾರ್ಯಕ್ಕೆ ಆಗಮಿಸಲಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲ ಗೆಹ್ಲೋಟ್!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!