ರಾಜಕೀಯ

ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗಾ?: ಡಾ.ಕೆ ಸುಧಾಕರ್

Vishwanath S

ಚಿಕ್ಕಬಳ್ಳಾಪುರ: ನಾನು ಅಲ್ಪಾಸಂಖ್ಯಾತ ಎಂಬ ಕಾರಣಕ್ಕೆ ಡ್ರಗ್‌ ವಿಚಾರದಲ್ಲಿ ಟಾರ್ಗೆಟ್‌ ಮಾಡಲಾಗಿದೆ ಎಂಬ ಜಮೀರ್ ಅಹಮದ್ ಹೇಳಿಕೆಗೆ ತಿರುಗೇಟು ನೀಡಿದ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್‌, ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗಾ? ಅದೇನು ಅವರ ಐಡಿ ಕಾರ್ಡಾ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಪ್ರಶ್ನಿಸಿದರು. 

ನಗರದಲ್ಲಿಂದು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಲ್ಪ ಸಂಖ್ಯಾತ ಎನ್ನೋದು ರಕ್ಷಣೆಯ ಟ್ಯಾಗ್ ಅಲ್ಲ. ಅದೇನು ಐಡಿನಾ? ನಾನು ನನ್ನ ಜಾತಿ ಹೇಳಿಕೊಂಡು ಐಡಿ ಇಟ್ಟುಕೊಳ್ಳಬೇಕಾ? ಡ್ರಗ್ ದಂಧೆಯಲ್ಲಿ ತಪ್ಪಿತಸ್ಥರು ಯಾವ ಜನಾಂಗ, ಜಾತಿಯವರೇ ಆಗಲಿ ಶ್ರೀಮಂತರೇ ಇರಲಿ, ಬಡವರೇ ಇರಲಿ ಪಕ್ಷಾತೀಯ ಹಾಗೂ ಜಾತ್ಯಾತೀತವಾಗಿ ಬಿಜೆಪಿ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಡ್ರಗ್‌ ವಿಷಯವನ್ನು ಬಿಜೆಪಿ‌ ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಹಿಂದಿನ ಸರಕಾರ ಡ್ರಗ್ ಮಾಫಿಯಾ ವಿರುದ್ಧ ಏಕೆ ಕ್ರಮ ವಹಿಸಲಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದರು.

ನಮ್ಮ ಸರಕಾರ ಡ್ರಗ್ ದಂಧೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಯಾರೇ ಪ್ರಭಾವಿ ವ್ಯಕ್ತಿ ಇದ ರಲ್ಲಿ ಭಾಗಿಯಾಗಿದ್ದರು ಮುಲಾಜಿಲ್ಲದೇ ಕ್ರಮ ವಹಿಸುತ್ತೇವೆ. ಈಗಾಗಲೇ ಮುಖ್ಯಮಂತ್ರಿ ಗಳು ಹಾಗೂ ಗೃಹಸಚಿ ವರು ದೊಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದರು.

SCROLL FOR NEXT