ರಾಜಕೀಯ

ಡ್ರಗ್ಸ್ ದಂಧೆಯ ಮೂಲ ನೈಟ್ ಬಾರ್'ಗಳು: ಮಾಜಿ ಸಿಎಂ ಕುಮಾರಸ್ವಾಮಿ

Manjula VN

ಬೆಂಗಳೂರು: ಡ್ರಗ್ಸ್ ದಂಧೆಯ ಮೂಲ ನೈಟ್ ಬಾರ್ ಹಾಗೂ ನೈಟ್ ಕ್ಲಬ್ ಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿರುವ ಹೈಎಂಡ್ ನೈಟ್ ಕ್ಲಬ್ ಗಳೇ ಡ್ರಗ್ಸ್ ದಂಧೆಯ ಮೂಲವಾಗಿದ್ದು, ನಗರದಲ್ಲಿರುವ ಬಹುತೇಕ ಕ್ಲಬ್ ಗಳಲ್ಲಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರೇ ಬಂಡವಾಳ ಹೂಡಿರುವವರಾಗಿದ್ದಾರೆಂದು ಹೇಳಿದ್ದಾರೆ. 

ಪಶ್ಚಿಮದಲ್ಲಿರುವ ಬಹಳಷ್ಟು ನಗರಗಳು ಕ್ಯಾಸಿನೊಗಳನ್ನು ಹೊಂದಿವೆ. ಆದರಿಲ್ಲಿ ಡ್ಯಾನ್ಸ್ ಬಾರ್ ಗಳು ಹಾಗೂ ನೈಟ್ ಕ್ಲಬ್ ಗಳೇ ಡ್ರಗ್ಸ್ ದಂಧೆಯ ಮೂಲವಾಗಿವೆ. ಈ ಕ್ಲಬ್ ಗಳು ಬೆಳಗಿನ ಜಾವ 3 ಗಂಟೆಯವರೆಗೂ ತೆರೆದಿರುತ್ತವೆ. ಇವೇ ಡ್ರಗ್ಸ್ ಮಾಫಿಯಾದ ಮೂಲವಾಗಿದೆ. ಈ ಕ್ಲಬ್ ಗಳ ಹಿಂದೆ ಹಲವು ರಾಜಕೀಯ ನಾಯಕರು ಹಾಗೂ ಹಿರಿಯ ಅಧಿಕಾರಿಗಳಿದ್ದಾರೆಂದು ತಿಳಿಸಿದ್ದಾರೆ. 

ಡ್ರಗ್ಸ್ ಮಾಫಿಯಾದ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡಿದರೆ ಉಪಯೋಗವಿಲ್ಲ. ಯಾರ ಬಗ್ಗೆ ಚರ್ಚೆ ಮಾಡುವುದು? ಕೇವಲ ಸಿನಿಮಾ ನಟ ನಟಿಯರಿಗೆ ಸೀಮಿತವಾಗಿದೆಯಾ? ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಕೇವಲ ಕಣ್ಣೊರೆಸುವ ತಂತ್ರವಷ್ಟೇ. ಮುಂದಿನ 15 ದಿನಗಳಲ್ಲಿ ಪ್ರಕರಣ ತನಿಖೆ ಕೋಲ್ಡ್ ಸ್ಟೋರೇಜ್'ಗೆ ಹೋಗಲಿದೆ. ಪ್ರಕರಣದ ಕುರಿತು ಸರ್ಕಾರ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. 

SCROLL FOR NEXT