ರಾಜಕೀಯ

ಲಾಕ್ಡೌನ್ ನಿರ್ಧಾರ ತೆಗೆದುಕೊಂಡಿದ್ದೇ ಆದರೆ, ಸರ್ಕಾರ ಬಡವರಿಗೆ ಸಹಾಯ ಮಾಡಬೇಕು: ಶಾಸಕ ಕೃಷ್ಣ ಭೈರೇಗೌಡ

Manjula VN

ಬೆಂಗಳೂರು: ಲಾಕ್ಡೌನ್ ನಿರ್ಧಾರ ಕೈಗೊಂಡಿದ್ದೇ ಆದರೆ, ಸರ್ಕಾರ ಬಡ ಕುಟುಂಬಗಳಿಗೆ ರೂ.25 ಸಾವಿರ ನೀಡಬೇಕೆಂದು ಶಾಸಕ ಕೃಷ್ಣ ಭೈರೇಗೌಡ ಅವರು ಒತ್ತಾಯಿಸಿದ್ದಾರೆ. 

ಕೊರೋನಾ ಪರಿಸ್ಥಿತಿ ಕುರಿತಂತೆ ನಿನ್ನೆಯಷ್ಟೇ ನಿನ್ನೆಯಷ್ಟೇ ಕಂದಾಯ ಸಚಿವ ಅಶೋಕ್ ನಡೆಸಿದ ಸಭೆಯಲ್ಲಿ ಶಾಸಕರು, ಸಂಸದರು, ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಅವರು, ಸರ್ಕಾರದ ಯಾವುದೇ ನಿರ್ಧಾರವನ್ನೂ ನಾವು ವಿರೋಧಿಸುವುದಿಲ್ಲ. ಆದರೆ, ಲಾಕ್ಡೌನ್ ನಿರ್ಧಾರ ಕೈಗೊಂಡಿದ್ದೇ ಆದರೆ, ಬಡವರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುಲು ರೂ.25 ಸಾವಿರ ಹಣವನ್ನು ನೀಡಬೇಕು ಎಂದು ಹೇಳಿದ್ದಾರೆ. 

ಶಾಸಕರು ಆಗ್ರಹಗಳಿಗೆ ಪ್ರತಿಕ್ರಿಯೆ ನೀಡಿದ ಆರ್ ಅಶೋಕ್ ಅವರು, ಕಳೆದ ಬಾರಿ ಸೋಂಕಿತರು ಮನೆಯಲ್ಲಿ ಐಸೋಲೇಷನ್ ಆಗಿದ್ದರೆ ನಿತ್ಯ ದೂರವಾಣಿ ಕರೆ ಮಾಡಿ ವೈದ್ಯಕೀಯ ಸಲಹೆ ನೀಡಲಾಗುತ್ತಿತ್ತು. ಪಾಸಿಟಿವ್ ಇದ್ದವರು ಹೊರಗಡೆ ಓಡಾಡದಂತೆ ಸೀಲ್ ಹಾಕಲಾಗುತ್ತಿತ್ತು. ಈ ಬಾರಿಯೂ ಅಂತಹ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಇನ್ನು ಬಿಯು ನಂಬರ್ ಸಮಸ್ಯೆಯಾಗುತ್ತಿದೆ. ಕೊರೋನಾ ಪಾಸಿಟಿವ್ ಬಂದ 8-10 ಗಂಟೆಗೆ ಬಿಯು ನಂಬರ್ ಬರುತ್ತಿದೆ ಎಂದೂ ದೂರಿದ್ದಾರೆ. 

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದ್ದು, ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿಕೊಂಡು ಕೂಡಲೇ ಬಿಯು ನಂಬರ್ ನೀಡಲು ವ್ಯವಸ್ಥೆ ಮಾಡಲು ತಿಳಿಸಿದ್ದೇವೆ. ಉಳಿದಂತೆ ಐಸಿಯು ಸಮಸ್ಯೆ, ಆಕ್ಸಿಜನ್ ಸಮಸ್ಯೆ, ರೆಮ್'ಡಿಸಿವಿರ್ ಸಮಸ್ಯೆ ಸೇರಿದಂತೆ ಎಲ್ಲವನ್ನೂ ಪರಿಹರಿಸಲು ಕ್ರಮ ಕೈಗೊಳ್ಳಲಾವುದು ಎಂದು ಭರವಸೆ ನೀಡಿದ್ದಾರೆ. 

ಬೆಂಗಳೂರಿನಲ್ಲಿ ಶವ ಸಂಸ್ಕಾರಕ್ಕೆ ಸಮಸ್ಯೆಗಳಾಗುತ್ತಿರುವ ಕುರಿತಂತೆಯೂ ಶಾಸಕರು ಗಮನ ಸೆಳೆದಿದ್ದಾರೆ. ಚಿತಾಗಾರಗಳ ಬಳಿ ಸಾವು ನಿಲ್ಲುವುದನ್ನು ತಪ್ಪಿಸಲು ಹಗಲು-ರಾತ್ರಿ ದಿನದ 24 ಗಂಟೆಯೂ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗುವುದು. ಇನ್ನು ಹಾಲಿ ಇರುವ ಚಿತಾಗಾರಗಳ ಜೊತೆಗೆ ಖಾಲಿ ಪ್ರದೇಶದಲ್ಲಿ ಕಟ್ಟಿಗೆಗಳಿಂದ ಸುಡಲು ಹೆಚ್ಚುವರಿ ವ್ಯವಸ್ಥೆ ಮಾಡಲು ಆದೇಶಿಸಲಾಗಿದೆ ಎಂದು ತಿಳಿಸಿದರು. 

SCROLL FOR NEXT