ಸಂಸದ ಜಿ.ಎಸ್ ಬಸವರಾಜು-ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ 
ರಾಜಕೀಯ

ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕಾ...: ಬಿಜೆಪಿ ಸಂಸದ ಜಿಎಸ್ ಬಸವರಾಜು, ಗುಬ್ಬಿ ಶಾಸಕ ಶ್ರೀನಿವಾಸ್ ವಾಕ್ಸಮರ

ಅನುದಾನದ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿಯೇ ಬಿಜೆಪಿ ಸಂಸದ ಜಿಎಸ್ ಬಸವರಾಜು ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ನಡುವೆ ತೀವ್ರ ವಾಕ್ಸಮರವೇ ನಡೆದಿದೆ.

ತುಮಕೂರು: ಅನುದಾನದ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿಯೇ ಬಿಜೆಪಿ ಸಂಸದ ಜಿಎಸ್ ಬಸವರಾಜು ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ನಡುವೆ ತೀವ್ರ ವಾಕ್ಸಮರವೇ ನಡೆದಿದೆ.

ತುಮಕೂರು ಜಿಲ್ಲೆಗೆ 550 ಕೋಟಿ ಅನುದಾನದ ವಿಚಾರದಲ್ಲಿ ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರಿಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವಾಜ್ ಹಾಕಿದ್ದಾರೆ. ಗುಬ್ಬಿ ತಾಲೂಕಿನ ಚೇಳೂರು ಸಮೀಪದ ಸಿ.ನಂದಿಹಳ್ಳಿ ಗ್ರಾಮದಲ್ಲಿ ನಡೆದ ಬೆಸ್ಕಾಂ ವಿದ್ಯುತ್ ಎಂಎಸ್‍ಎಸ್ ಸ್ಟೇಷನ್ ಉದ್ಘಾಟನೆಯ  ವೇಳೆ ಇಬ್ಬರು ನಾಯಕರ ನಡುವೆ ಜಟಾಪಟಿ ನಡೆದಿದೆ. 

ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ಮೀಸಲಿಟ್ಟಿದೆ ಎಂದು ಸಭೆಯಲ್ಲಿ ಜಿಎಸ್ ಬಸವರಾಜು ಹೇಳಿದರು. ಈ ವೇಳೆ ರೊಚ್ಚಿಗೆದ್ದ ಗುಬ್ಬಿ ಶ್ರೀನಿವಾಸ್, 550 ಕೋಟಿ ನಿಮ್ ತಾತ ತಂದಿದ್ನಾ..? 550 ಕೋಟಿ ಎಲ್ ತಂದಿದ್ದೀರಿ ತೋರಿಸ್ರಿ..ರೈತರಿಗೆ ಸುಳ್ಳು ಹೇಳ್ತಿಯಾ, ನಿಮ್  ಯೋಗ್ಯತೆಗೆ ಇಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತೀಯಾ..? ವಯಸ್ಸಾಗಿದೆ ಈಗಲಾದ್ರೂ ಸುಳ್ಳು ಹೇಳೋದನ್ನ ನಿಲ್ಲಿಸು ಎಂದು ಏಕವಚನದಲ್ಲಿಯೇ ಮಾತಿಗಿಳಿದರು.

ಈ ವೇಳೆ ಇಲ್ಲದ ವಿಚಾರವನ್ನು ಮಾತಾಡಬೇಡ ನೀನು. ನೀನು ಅಯೋಗ್ಯ ನನ್ಮಗ ಎಂದು ಬಸವರಾಜು ಕಿಡಿಕಾರಿದರು. ಇಬ್ಬರೂ ನಾಯಕರು ಬೈದಾಡಿಕೊಂಡ ವಿಡಿಯೋ ಇದೀಗ ರಾಜಕೀಯ ವಲಯದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ