ಸುಬಾಷ್ ಚಂದ್ರ ಬೋಸ್ 
ರಾಜಕೀಯ

ದೇಶಕ್ಕೆ ಜೀವ ಕೊಟ್ಟ ನಿಮ್ಮವರ ಲೆಕ್ಕ ಹೇಳಿ, ಹಾಗೆಯೇ ಬೋಸ್- ಸಾವರ್ಕರ್‌ ಅವರನ್ನು ದ್ವೇಷಿಸಿದ್ದೇಕೆ ಹೇಳಿ?

ಸುಭಾಷ್ ಚಂದ್ರ ಬೋಸ್ ಅವರ ಹೆಸರಿನಲ್ಲಿರುವ ಯೋಜನೆ ಎಷ್ಟು, ನಕಲಿ ಗಾಂಧಿ ಪರಿವಾರದ ಸದಸ್ಯರ ಹೆಸರಿನಲ್ಲಿರುವ ಯೋಜನೆ ಎಷ್ಟು ಎಂಬ ಬಿಜೆಪಿ ಪ್ರಶ್ನೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಬೆಂಗಳೂರು: ಸುಭಾಷ್ ಚಂದ್ರ ಬೋಸ್ ಅವರ ಹೆಸರಿನಲ್ಲಿರುವ ಯೋಜನೆ ಎಷ್ಟು, ನಕಲಿ ಗಾಂಧಿ ಪರಿವಾರದ ಸದಸ್ಯರ ಹೆಸರಿನಲ್ಲಿರುವ ಯೋಜನೆ ಎಷ್ಟು ಎಂಬ ಬಿಜೆಪಿ ಪ್ರಶ್ನೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರದೇಶ ಕಾಂಗ್ರೆಸ್ ಸಮಿತಿ ಹರಿಹಾಯ್ದಿದೆ, ಬಿಜೆಪಿಗೆ ಇತಿಹಾಸ ಪುರುಷರಿಲ್ಲ, ಇರುವ ಪುರುಷರಿಗೆ ಇತಿಹಾಸವಿಲ್ಲ, ಸುಭಾಷ್ ಚಂದ್ರ ಬೋಸ್‌ರನ್ನ ಕಾಂಗ್ರೆಸ್ಸಿಗರು ಎನ್ನಲು ಸಾಕ್ಷಿ ಬೇಕಿಲ್ಲ, ಅವರು ಕಾಂಗ್ರೆಸ್ಸಿಗರಲ್ಲ ಎಂದು ತಿರುಚಲು ನಿಮ್ಮಿಂದ ಸಾದ್ಯವೂ ಇಲ್ಲ ಎಂದು ಬಿಜೆಪಿಗೆ ಕಾಂಗ್ರೆಸ್ ಚಾಟಿ ಬೀಸಿದೆ.
.
ದೇಶಕ್ಕೆ ಜೀವ ಕೊಟ್ಟ ನಿಮ್ಮವರ ಲೆಕ್ಕ ಹೇಳಿ ಹಾಗೆಯೇ ಬೋಸ್ ಸಾವರ್ಕರ್‌ನನ್ನು ದ್ವೇಷಿಸಿದ್ದೇಕೆ ಹೇಳಿ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ. ಸ್ವಾತಂತ್ರದ ನಂತರ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ನೂರಾರು ಜಾತಿ, ಭಾಷೆಗಳು, ಹಲವು ಧರ್ಮ ಸಂಸ್ಕೃತಿಗಳಿದ್ದರೂ ಏಕತೆಯನ್ನ ಕಾಪಾಡಿಕೊಂಡು, ಪ್ರಜಾಪ್ರಭುತ್ವವನ್ನ ಉಳಿಸಿಕೊಂಡು ಬಂದಿದ್ದು ಕಾಂಗ್ರೆಸ್. ಆಗೇನಾದರು ಬಿಜೆಪಿ ಕೈಗೆ ಆಡಳಿತ ಸಿಕ್ಕಿದ್ದಿದ್ದರೆ ದೇಶದ ಸ್ಥಿತಿ ಅಫಘಾನಿಸ್ತಾನಕ್ಕಿಂತ ಭಿನ್ನವಾಗಿರುತ್ತಿರಲಿಲ್ಲ ಎಂದು ಲೇವಡಿ ಮಾಡಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel