ರಾಜಕೀಯ

ವಿಧಾನಮಂಡಲ ಅಧಿವೇಶನ: ಶಾಸಕರೊಂದಿಗೆ ಕುಳಿತುಕೊಳ್ಳಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ವೈ!

Nagaraja AB

ಬೆಂಗಳೂರು: ಸೆಪ್ಟೆಂಬರ್ 13ರಿಂದ  ಹತ್ತು ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಲು ರಾಜ್ಯ ಸಂಪುಟ ಸಭೆಯಲ್ಲಿ ಗುರುವಾರ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಮೊದಲ ಅಧಿವೇಶನವಾದರೆ, ಎಲ್ಲರ ಕಣ್ಣು ಇದೀಗ ಬಿ.ಎಸ್. ಯಡಿಯೂರಪ್ಪ ಅವರತ್ತ ನಟ್ಟಿದೆ.

ಸದ್ಯ ಮಾಲ್ಡೀವ್ಸ್ ನಲ್ಲಿ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿರುವ ಬಿ.ಎಸ್. ಯಡಿಯೂರಪ್ಪ ಆಗಸ್ಟ್ ಕೊನೆಯ ವಾರದಲ್ಲಿ ರಾಜ್ಯಕ್ಕೆ ಮರಳುವ ನಿರೀಕ್ಷೆಯಿದೆ. ಬೊಮ್ಮಾಯಿ ಅವರ ಚೊಚ್ಚಲ ಅಧಿವೇಶನದ ಭಾಗವಾಗಿ ಸಾಂಕೇತಿಕವಾಗಿ ಯಡಿಯೂರಪ್ಪ ಭಾಗವಹಿಸುವ ಸಾಧ್ಯತೆಯಿದ್ದರೂ ಅವರು ಅಧಿವೇಶನದಿಂದ ದೂರ ಉಳಿಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ನಂಬರ್-1 ಆಸನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರಮಿಸಿಕೊಂಡ ನಂತರ ಸದನದ ನಾಯಕರಿಗಾಗಿ ಇರುವ ಖಜಾನೆ ಬೆಂಜ್ ಗಳಲ್ಲಿ ಶಾಸಕರೊಂದಿಗೆ ಯಡಿಯೂರಪ್ಪ ಕುಳಿತುಕೊಳ್ಳಲಿದ್ದಾರೆ. ಖಜಾನೆ ಬೆಂಚ್ ನ ಮೊದಲ ಸಾಲಿನ ಆಸನಗಳು ಮಂತ್ರಿಗಳಿಗೆ ಮೀಸಲಾಗಿದ್ದರೆ, ಉಳಿದ ಆಸನಗಳನ್ನು ಹಿರಿತನದಂತೆ ಶಾಸಕರಿಗೆ ನೀಡಲಾಗುತ್ತದೆ.

ಶಾಸಕರಾಗಿ ಎಷ್ಟು ಬಾರಿ ಚುನಾಯಿತರಾಗಿದ್ದಾರೆ ಎಂಬುದನ್ನು ಹಿರಿತನಕ್ಕಾಗಿ ಪರಿಗಣಿಸಲಾಗುತ್ತದೆ. ಒಂದು ವೇಳೆ ಶಾಸಕರು ಜೇಷ್ಠತೆಯನ್ನು ಹಂಚಿಕೊಂಡರೆ, ನಾಲ್ಕು ಜನರು ಐದು ಬಾರಿ ಶಾಸಕರಾಗಿದ್ದರೆ, ವರ್ಣಮಾಲೆಯ ಕ್ರಮದಲ್ಲಿ ಆಸನಗಳನ್ನು ಹಂಚಿಕೆ ಮಾಡುತ್ತೇವೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಂಟು ಬಾರಿ ಶಾಸಕರಾಗಿರುವ ಮತ್ತು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ  ಹಿರಿತನ ವಿಷಯದಲ್ಲಿ, ಅವರು ಖಜಾನೆ ಬೆಂಚುಗಳ ಎರಡನೇ ಅಥವಾ ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುವುದನ್ನು ಖಚಿತಪಡಿಸುತ್ತವೆ. ಆದಾಗ್ಯೂ, ಕೆಲ ಸಂದರ್ಭಗಳಲ್ಲಿ ಮುಖಂಡನಿಗಾಗಿ ಪಕ್ಷ ನಿರ್ದಿಷ್ಟ ಆಸನವನ್ನು ಕೇಳಿಕೊಂಡು ಸ್ಪೀಕರ್ ಅನುಮೋದನೆ ನೀಡಿದರೆ, ನಂತರ ಆದೇ ರೀತಿಯಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಂತವರ ವಿಚಾರದಲ್ಲಿಯೂ ಅಂತಹ ವಿನಂತಿಗಳನ್ನು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯದ ಸಿಬ್ಬಂದಿ ತಿಳಿಸಿದ್ದಾರೆ.

ಗುರುವಾರ ಸಂಜೆಯವರೆಗೂ ಅಂತಹ ನಿರ್ದಿಷ್ಟ ಆಸನಕ್ಕಾಗಿ ಯಾವುದೇ ಮನವಿ ಬಂದಿಲ್ಲ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಯಾವುದೇ ಸಚಿವ ಖಾತೆ ಹೊಂದಿರಲಿಲ್ಲ ಮತ್ತು ಖಜಾನೆ ಬೆಂಚಿನ ಕೊನೆಯಲ್ಲಿ ಸಾಲಿನಲ್ಲಿ ಬಾಗಿಲಿನ ಹತ್ತಿರವಿರುವಂತೆ ಆಸನವನ್ನು ಕೇಳಿಕೊಂಡಿದ್ದರು. ನಿರ್ಗಮನಕ್ಕೆ ಹತ್ತಿರವಾಗಿರುವ ಕೊನೆಯ ಸಾಲಿನ ಸೀಟು ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ವೀಪ್ ಗಳಿಗೆ ಮೀಸಲಾಗಿರುತ್ತದೆ.

SCROLL FOR NEXT