ಮೈಸೂರಿನಲ್ಲಿ ಪ್ರಚಾರ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಮತ್ತಿತರರು 
ರಾಜಕೀಯ

ವಿಧಾನಪರಿಷತ್ ಚುನಾವಣೆ: ಮೂರು ಜಿಲ್ಲೆಗಳಲ್ಲಿ ಪ್ರಚಾರ ಆರಂಭಿಸಿದ ಬಿಎಸ್ ಯಡಿಯೂರಪ್ಪ 

 ಡಿಸೆಂಬರ್ 10 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗಾಗಿ  ಮೈಸೂರು- ಚಾಮರಾಜನಗರ ಹಾಗೂ ಮಂಡ್ಯ ಮತ ಕ್ಷೇತ್ರದಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಚಾರ ನಡೆಸಿದರು. 

ಮೈಸೂರು: ಡಿಸೆಂಬರ್ 10 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗಾಗಿ  ಮೈಸೂರು- ಚಾಮರಾಜನಗರ ಹಾಗೂ ಮಂಡ್ಯ ಮತ ಕ್ಷೇತ್ರದಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಚಾರ ನಡೆಸಿದರು. 

ಮೊದಲಿಗೆ ಮಂಡ್ಯದಲ್ಲಿ ಸ್ಥಳೀಯ ಸಂಸ್ಥೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ, ತಾನು ಮಂಡ್ಯದ ಮಗ ಎಂಬ ಹೆಮ್ಮೆಯಿದೆ ಎಂದರು. 

 ಬಿಜೆಪಿ ಅಭ್ಯರ್ಥಿ ಎಂಸಿ ಮಂಜು ಪರವಾಗಿ ಪ್ರಚಾರ ನಡೆಸಿದ ಯಡಿಯೂರಪ್ಪ, ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಕ್ಕರೂ ಅವರು ಗೆಲ್ಲುತ್ತಾರೆ ಎಂಬ ಊಹೆ ಇತ್ತು. ಆದರೆ, ಅದು ಇದೀಗ ಬದಲಾಗಿದೆ.  ರಾಜ್ಯದಲ್ಲಿ ಒಂದು ಅಥವಾ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೆಂಬ ವಿಶ್ವಾಸ ಹಳೆಯ ಪಕ್ಷಕ್ಕೆ ಇಲ್ಲ. 26 ರಾಜ್ಯಗಳಲ್ಲಿ ಉಸಿರಾಟವನ್ನು ಕಾಂಗ್ರೆಸ್ ನಿಲ್ಲಿಸಿದೆ. ಮುಂದಿನ ಚುನಾವಣೆಯೊಳಗೆ ಕರ್ನಾಟಕದಲ್ಲಿಯೂ ಉಸಿರಾಡುವುದನ್ನು ನಿಲ್ಲಿಸಲಿದೆ ಎಂದರು.

ಮೈಸೂರಿನ ರಾಜೇಂದ್ರ ಕಾನ್ವೆಷನ್ ಹಾಲ್ ಹಾಗೂ ಚಾಮರಾಜನಗರ ಜಿಲ್ಲೆಯ ಸಂತೇಮಾರನಹಳ್ಳಿಯಲ್ಲಿ ಸಭೆ ನಡೆಸಿದ ಯಡಿಯೂರಪ್ಪ, ಮೈಸೂರು- ಚಾಮರಾಜನಗರ ಮತ ಕ್ಷೇತ್ರದ ಅಭ್ಯರ್ಥಿ ರಘು ಕೌಟಿಲ್ಯ ಅವರನ್ನು ಬೆಂಬಲಿಸುವಂತೆ ಕೋರಿದರು. ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಅವರು ಮನವಿ ಮಾಡಿದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕ್‌ನ ಐದು ಎಫ್-16 ಎಸ್ಕಾರ್ಟ್; Video ನೋಡಿ

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ; ಲೆಬನಾನ್ ಕದನ ವಿರಾಮ, ಸ್ವತ್ತುಗಳ ಬಿಡುಗಡೆ ಪ್ರಮುಖ ಅಜೆಂಡಾ; Video

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

IPL 2026: RCB ಸೋಲಿಸಿದ RRಗೆ ಬಿಗ್ ಶಾಕ್, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಬ್ಬಂದಿ, BCCI ಶಿಕ್ಷೆ..! Video

SCROLL FOR NEXT