ರಾಜಕೀಯ

ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಶರೀಫ್ ಬಾಬು ವಿರುದ್ಧ ಎಫ್ ಐಆರ್ ದಾಖಲು

Nagaraja AB

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಾಳೆ ನಡೆಯಲಿರುವ ಚುನಾವಣೆಗೆ ಬೆಂಗಳೂರು ನಗರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಶರೀಫ್ ಬಾಬು ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಯಲಹಂಕದ ತಹಸೀಲ್ದಾರ್ ದೂರಿನ ಅನ್ವಯ ಈ ಎಫ್ ಐಆರ್  ದಾಖಲಾಗಿದೆ

ಯೂಸುಫ್ ಶರೀಫ್ ಬಾಬು, ನನ್ನನ್ನು ಗೆಲ್ಲಿಸಿದರೆ ರೂ. 5,000, 10 ಸಾವಿರ, 50 ಸಾವಿರ , ಒಂದು ಲಕ್ಷ ಜೀವ ವಿಮೆ ಲೆಕ್ಕದಲ್ಲಿ ತಲಾ 5 ಲಕ್ಷ ರೂ ಹಣ ಕೊಡುವುದಾಗಿ ಬಹಿರಂಗವಾಗಿ ಮತದಾರರಿಗೆ ಹೇಳುತ್ತಿದ್ದಾರೆ. ಈ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿರುವುದಾಗಿ ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ.

 ಈ ಮಧ್ಯೆ ಯೂಸೂಫ್ ಶರೀಫ್ ಮತ್ತಿತರ ಅಧಿಕಾರಿಗಳ 115 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಆರೋಪಿಸಿದ್ದು, ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಎಸಿಬಿ ಮತ್ತು ಬಿಎಂಟಿಎಫ್ ಗೆ ದಾಖಲೆ ಸಹಿತ ದೂರು ನೀಡಿದ್ದಾರೆ. 

SCROLL FOR NEXT