ರಾಜಕೀಯ

ವಿಧಾನ‌ ಪರಿಷತ್ ನಲ್ಲಿ ಬಿಜೆಪಿ ಸಾಮರ್ಥ್ಯ 37ಕ್ಕೆ ಏರಿಕೆ, ಕಾಂಗ್ರೆಸ್ -26, ಜೆಡಿಎಸ್ 11 ಸದಸ್ಯರ ಬಲ, ಕುತೂಹಲ ಕೆರಳಿಸಿದ ಸಭಾಪತಿ ಸ್ಥಾನ

Srinivasamurthy VN

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲದ ಹೋರಾಟದ ನಡುವೆಯೂ ಆಢಳಿತಾರೂಢ ಕಮಲ ಪಡೆ ಪರಿಷತ್ ನಲ್ಲಿ ಬಹುಮತ ಪಡೆಯುವಲ್ಲಿ ಸಫಲವಾಗಿದೆ.

ಹೌದು.. ಇಂದು ಪ್ರಕಟವಾದ ಪರಿಷತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 11 ಸ್ಥಾನಗಳಿಸಿದರೆ, ಕಾಂಗ್ರೆಸ್ ಕೂಡ 11 ಸ್ಥಾನಗಳಿಸಿದೆ. ಜೆಡಿಎಸ್ 2 ಮತ್ತು ಇತರರು 1 ಸ್ಥಾನದಲ್ಲಿ ಜಯಗಳಿಸಿದೆ. ಈ ಫಲಿತಾಂಶದ ಮೂಲಕ ವಿಧಾನ ಪರಿಷತ್ ನಲ್ಲಿ ಬಿಜೆಪಿ ಬಹುಮತ ಪಡೆದಂತಾಗಿದೆ.  ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಪರಿಷತ್ತಿನಲ್ಲಿ ಒಟ್ಟು 37 ಸ್ಥಾನಗಳಿಗೆ ಏರಿಕೆಯಾಗಿದೆ. ಹೀಗಾಗಿ ಪರಿಷತ್‌ನಲ್ಲಿ ಸಂಪೂರ್ಣ ಬಹುಮತ ಪಡೆದಿದೆ.

75 ಸದಸ್ಯ ಬಲದ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ 26 ಮತ್ತು ಜೆಡಿಎಸ್ 11 ಸದಸ್ಯರನ್ನು ಪರಿಷತ್ ನಲ್ಲಿ ಹೊಂದಿದೆ. ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಸಂಪೂರ್ಣ ಬಹುಮತ ಪಡೆದಿವೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ವಿಧಾನ ಪರಿಷತ್ನಲ್ಲಿ ಸಭಾಪತಿ ಹುದ್ದೆಯನ್ನು ಜೆಡಿಎಸ್ ಗೆ ಮತ್ತು ಉಪಸಭಾಪತಿ ಹುದ್ದೆಯನ್ನು ಬಿಜೆಪಿ ಹಿಡಿದಿವೆ. ಒಂದು ಸಭಾಪತಿ ಹುದ್ದೆ ಇದೆ.

ಇಂದು ನಡೆದ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ವಿಧಾನಪರಿಷತ್ತಿನಲ್ಲಿ ಸಂಪೂರ್ಣ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಸಭಾಪತಿ ಹುದ್ದೆಯನ್ನು ತನಗೆ ಬಿಟ್ಟುಕೊಡುವಂತೆ ಬಿಜೆಪಿ ಕೇಳುವ ಸಾಧ್ಯತೆ ಇದೆಯಾದರೂ, ಹಾಲಿ ಸಭಾಪತಿಯಾಗಿರುವ ಜೆಡಿಎಸ್ ನ ಬಸವರಾಜ ಹೊರಟ್ಟಿ ಅವರನ್ನು ಮುಂದುವರಿಸುತ್ತದೆಯೇ ಎನ್ನುವುದು ಕುತೂಹಲ ಕೆರಳಿಸಿದೆ.
 

SCROLL FOR NEXT