ರಮೇಶ್ ಕುಮಾರ್ 
ರಾಜಕೀಯ

ಶಾಸನಸಭೆಯಲ್ಲಿ ಎಂತಹ ಮೇಲ್ಪಂಕ್ತಿ ಹಾಕಿ ಬಿಟ್ಟಿರಿ! ವಿದ್ವತ್ ಕೇವಲ ಪೊಳ್ಳು ಭಾಷಣಕ್ಕೆ ಸೀಮಿತ; ತಿಪ್ಪೆ ಸಾರಿಸುವ ಕ್ಷಮೆ ನಿಮಗೆ ಭೂಷಣವೇ?

ಅತ್ಯಾಚಾರ ಕುರಿತು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರು ಸದನದಲಲ್ಲಿ ಆಡಿರುವ ಮಾತಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.

ಬೆಂಗಳೂರು : ಅತ್ಯಾಚಾರ ಕುರಿತು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರು ಸದನದಲಲ್ಲಿ ಆಡಿರುವ ಮಾತಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಅತ್ಯಾಚಾರದ ಬಗ್ಗೆ ರಮೇಶ್ ಕುಮಾರ್ ಅವರು ಕೀಳಾಗಿ ಮಾತನಾಡುವಾಗ ಮಹಿಳಾ ಸದಸ್ಯರೂ ಉಪಸ್ಥಿತರಿದ್ದರು. ಉಚಿತ – ಅನುಚಿತ ಪ್ರಜ್ಞೆ ಇಲ್ಲದೇ ಆಡುವ ಮಾತುಗಳು ಕ್ಷಮೆಗೆ ಅರ್ಹವೇ? ರಮೇಶ್‌ ಕುಮಾರ್‌ ಅವರೇ, ತಿಪ್ಪೇ ಸಾರಿಸುವ ಕ್ಷಮೆ ನಿಮ್ಮಂಥವರಿಗೆ ಭೂಷಣವೇ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಮಾನ್ಯ ರಮೇಶ್ ಕುಮಾರ್ ಅವರೇ, ಶಾಸನಸಭೆಯಲ್ಲಿ ಎಂತಹ ಮೇಲ್ಪಂಕ್ತಿ ಹಾಕಿ ಬಿಟ್ಟಿರಿ! ಮಹಿಳೆಯರ ಗೌರವದ ಬಗ್ಗೆ ಸದನದಲ್ಲಿ ಈ ರೀತಿ ಮಾತನಾಡಿದ್ದು ಸೂಕ್ತವೇ? ಕಿರಿಯರಿಗೆ ಮೇಲ್ಪಂಕ್ತಿ ಹಾಕಬೇಕಿದ್ದ ನೀವು ಇಂಥ ಕೀಳು ಅಭಿರುಚಿಯ ಮಾತನಾಡಿದ್ದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನಿಸಿದೆ.

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಆಡುಮಾತಿನ ಅರ್ಥವನ್ನು ರಮೇಶ್ ಕುಮಾರ್ ಅವರಿಗೆ ಹೇಳಿ ಕೊಡಬೇಕಿಲ್ಲ. ಮಹಿಳೆಯರ ಬಗ್ಗೆ ಸಂವೇದನಾ ರಹಿತವಾಗಿ ಆಡಿದ ಮಾತುಗಳು ಕ್ಷಮೆಗೂ ಅರ್ಹವಲ್ಲ. ನಿಮ್ಮ ವಿದ್ವತ್ ಕೇವಲ ಪೊಳ್ಳು ಭಾಷಣಕ್ಕೆ ಸೀಮಿತವಾದಂತಿದೆ.

ಮಹಿಳೆಯರ ಗೌರವದ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕ ರಮೇಶ್ ಕುಮಾರ್ ಅವರು ತೀರಾ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್ ಹೊಂದಿರುವ ಒಳಮನಸ್ಸಿನ ಅಭಿವ್ಯಕ್ತಿ. ರಮೇಶ್ ಕುಮಾರ್ ಅವರು ಅದಕ್ಕೊಂದು ದೃಷ್ಟಾಂತ ಮಾತ್ರ‌. ಮಹಿಳೆಯರ ಬಗ್ಗೆ ಕಾಂಗ್ರೆಸ್ಸಿಗರ ದೃಷ್ಟಿಕೋನವೇ ಇಷ್ಟು ಎಂದು ಟೀಕಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT