ರಾಜಕೀಯ

ಬೆಳಗಾವಿ ಅಧಿವೇಶನದಲ್ಲಿ ಎಸ್ಆರ್ ಪಾಟೀಲ್​ ವಿದಾಯ ಭಾಷಣ; 2 ದಶಕಗಳ ನಂತರ ಮೇಲ್ಮನೆಯಿಂದ ಹೊರನಡೆದ ಮುತ್ಸದ್ದಿ

Shilpa D

ಬೆಳಗಾವಿ: ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್​ ವಿದಾಯ ಭಾಷಣ ಮಾಡಿದ್ದಾರೆ. ಪಕ್ಷದ ನಿಷ್ಠಾವಂತ ನಾಯಕನಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಅವರು ಶುಕ್ರವಾರ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿದ್ದಾರೆ. ಎರಡು ದಶಕಗಳ ನಂತರ ಮೇಲ್ಮನೆಗೆ ವಿದಾಯ ಹೇಳಲಿದ್ದಾರೆ. ಅವರ ಅಧಿಕಾರಾವಧಿ ಜನವರಿ 5ಕ್ಕೆ ಕೊನೆಗೊಳ್ಳಲಿದೆ.

ವಿಶೇಷವಾಗಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಪ್ರಾಧಿಕಾರದ ಬಗ್ಗೆ ವಿಶೇಷ ಒಲವು ಹೊಂದಿದ್ದರು.  ತಮ್ಮ ಕೊನೆಯ ದಿನವೂ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸುವ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.

ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವ ಧೀಮಂತರು ಮತ್ತು ಯುವ ಶಾಸಕರಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಹೊಗಳಿದ್ದಾರೆ.

ಸೆಂಬರ್ 10 ರಂದು ನಡೆದ ಪರಿಷತ್ ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ಕಿರಿಯ ಸಹೋದರ ಸುನೀಲಗೌಡ ಪಾಟೀಲ ಅವರಿಗಾಗಿ ವಿಜಯಪುರ-ಬಾಗಲಕೋಟದ ಉಭಯ ಕ್ಷೇತ್ರವನ್ನು ಎಸ್ ಆರ್ ಪಾಟೀಲ್ ಬಿಟ್ಟು ಕೊಟ್ಟಿದ್ದರು.

ಎಸ್ ಆರ್ ಪಾಟೀಲ್ ಅವರಿಗೆ ಪಕ್ಷದ ಟಿಕೆಟ್ ಕೈ ತಪ್ಪಿದ್ದು ಅಚ್ಚರಿ ಮೂಡಿಸಿದೆ.  ಸಿದ್ದರಾಮಯ್ಯ ಆಡಳಿತದಲ್ಲಿ ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ನಿರ್ವಹಿಸಿದ್ದ ಎಸ್ ಆರ್ ಪಾಟೀಲ್ ಬಂಡಾಯವೇಳಲಿಲ್ಲ.

ಜೂನ್ 2022 ರಲ್ಲಿ ಏಳು ಸ್ಥಾನಗಳು ಖಾಲಿಯಾಗಲಿದೆಸ ಆಗ ವಿಧಾನಸಭೆಯಿಂದ ಮತ್ತೊಮ್ಮೆ ಕೌನ್ಸಿಲ್‌ಗೆ ಆಯ್ಕೆಯಾಗುವ ಅವಕಾಶವಿದೆ. ಒಂದು ವೇಳೆ ಆಗಲೂ ಅವರಿಗೆ ಅವಕಾಶ ನೀಡದಿದ್ದರೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಿರುವುದರಿಂದ, 2023 ರಲ್ಲಿ ತಮ್ಮ ತವರು ಕ್ಷೇತ್ರ ಬಿಳಗಿಯಿಂದ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೇಳಬಹುದು ಎಂದು ಅವರ ಬೆಂಬಲಿಗರೊಬ್ಬರು ಹೇಳಿದರು.

2018ರ ವಿಧಾನ ಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಕೆಲವು ಸ್ಥಾನ ದೊರೆತಿತ್ತು, ಕಾಂಗ್ರೆಸ್‌ ಕಳಪೆ ಪ್ರದರ್ಶನದಿಂದಾಗಿ ಎಸ್ ಆರ್  ಪಾಟೀಲ್‌ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಡಾ ಜಿ ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಾದಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತೆರವು ಮಾಡಿದರು, ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಲಿಂಗಾಯತ ನಾಯಕ ಎಸ್ ಆರ್ ಪಾಟೀಲ್ ಅವರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದರು.

SCROLL FOR NEXT