ಸುಮಲತಾ ಅಂಬರೀಶ್-ಎಚ್ ಡಿ ಕುಮಾರಸ್ವಾಮಿ 
ರಾಜಕೀಯ

ಜೆಡಿಎಸ್ ನಲ್ಲಿ ಪ್ರಜ್ವಲ್ ರೇವಣ್ಣ ಒಬ್ಬರೇ ಆಶಾಕಿರಣ; ಅವರಿಂದ ಎಚ್ ಡಿಕೆ ಸಂಸ್ಕಾರ ಕಲಿಯಲಿ: ಸುಮಲತಾ

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಷ್ಟಪಟ್ಟು ಕಟ್ಟಿರುವ ಪಕ್ಷವನ್ನು ಉಳಿಸಲು ಇರುವ ಒಂದೇ ಒಂದು ಆಶಾಕಿರಣವೆಂದರೆ ಸಂಸದ ಪ್ರಜ್ವಲ್‌ ರೇವಣ್ಣ. ಅವರನ್ನು ನೋಡಿ ಸಂಸ್ಕಾರ ಎಂದರೇನು ಎಂಬುದನ್ನು ಕಲಿಯಿರಿ.

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಷ್ಟಪಟ್ಟು ಕಟ್ಟಿರುವ ಪಕ್ಷವನ್ನು ಉಳಿಸಲು ಇರುವ ಒಂದೇ ಒಂದು ಆಶಾಕಿರಣವೆಂದರೆ ಸಂಸದ ಪ್ರಜ್ವಲ್‌ ರೇವಣ್ಣ. ಅವರನ್ನು ನೋಡಿ ಸಂಸ್ಕಾರ ಎಂದರೇನು ಎಂಬುದನ್ನು ಕಲಿಯಿರಿ’ ಎಂದು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್‌ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಕೆಆರ್‌ಎಸ್‌ ಅಣೆಕಟ್ಟು ಸುರಕ್ಷತೆ ವಿಷಯವಾಗಿ ಸಂಸದೆ ಸುಮಲತಾ ಅಂಬರೀಶ್‌ ಮತ್ತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನಡುವೆ ಉಲ್ಬಣಿಸಿದ ಮಾತಿನ ಸಮರ ಈಗ ವೈಯಕ್ತಿಕ ಕೆಸರೆರಚಾಟಕ್ಕೆ ಬಂದು ನಿಂತಿದೆ.

ಮಾಜಿ ಪ್ರಧಾನಿ ಮಗನಾಗಿ ಮತ್ತು ಮಾಜಿ ಸಿಎಂ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರ ಸಣ್ಣತನ ಅವರ ಮಾತಿನಲ್ಲೇ ಪುಷ್ಟೀಕರಿಸುತ್ತದೆ’ ಎಂದು ಸುಮಲತಾ ಅಂಬರೀಶ್‌ ಗುಡುಗಿದ್ದಾರೆ. ಭ್ರಷ್ಟಾಚಾರ ಇರುವ ಕಡೆ ಎಚ್‌.ಡಿ. ಕುಮಾರಸ್ವಾಮಿ ಪ್ರತ್ಯಕ್ಷರಾಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ದೇವೇಗೌಡರ ಪ್ರಬುದ್ಧ ರಾಜಕಾರಣಕ್ಕೆ ಹೋಲಿಸಿದ ಸುಮಲತಾ, ಪ್ರಜ್ವಲ್‌ ರೇವಣ್ಣ ಅವರನ್ನು ನೋಡಿ ಎಚ್‌ಡಿಕೆ ಕಲಿಯುವುದು ತುಂಬಾ ಇದೆ. ರಾಜ್ಯದಲ್ಲಿ ಜೆಡಿಎಸ್‌ ಉಳಿದರೆ ಅದು ಪ್ರಜ್ವಲ್‌ ಅವರಿಂದ ಮಾತ್ರ ಎಂದು ಹೇಳುವ ಮೂಲಕ ನಿಖಿಲ್‌ ಮತ್ತು ಎಚ್‌ಡಿಕೆ ಪಕ್ಷನಿಷ್ಠತೆ ಪ್ರಶ್ನಿಸಿದರು. ನಿಖಿಲ್‌ ಮತ್ತು ದೇವೇಗೌಡರು ಸೋತಿದ್ದು ಕುಮಾರಸ್ವಾಮಿ ಅವರ ವರ್ತನೆಯಿಂದಲೇ ಎಂದು ಆರೋಪಿಸಿದರು.

ಪ್ರಜ್ವಲ್‌ ರೇವಣ್ಣ ಅವರನ್ನು ಸಂಸತ್‌ನಲ್ಲಿ ಗಮನಿಸಿದ್ದೇನೆ. ಅಲ್ಲಿ ಮಾತನಾಡುವಾಗ ಅವರು ನಡೆದುಕೊಳ್ಳುವ ರೀತಿ, ಮಾತನಾಡುವುದು, ಗೌರವ ನೀಡುವುದನ್ನು ಗಮನಿಸಿದರೆ ಜೆಡಿಎಸ್‌ನಲ್ಲಿ ಒಂದು ಆಶಾಕಿರಣ ಇದೆ ಎನ್ನಿಸುತ್ತದೆ. ಕುಮಾರಸ್ವಾಮಿ ವಯಸ್ಸಿನಲ್ಲಿ ಆತನಿಗಿಂತ ದೊಡ್ಡವರಾಗಿದ್ದರೂ ಮಾತನಾಡುವುದನ್ನು ಕಲಿಯಬೇಕು. ತಪ್ಪುಗಳನ್ನು ತಿದ್ದಿಕೊಳ್ಳಲು ಚಿಕ್ಕವರಾದೇನು, ದೊಡ್ಡವರಾದೇನು? ಚಿಕ್ಕವರು ಹೇಳುವುದು ಸರಿ ಎನಿಸಿದರೆ ಅದನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಸುಮಲತಾ ತೀಕ್ಷ್ಣವಾಗಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!