ರಾಜಕೀಯ

ಸಂಸದ ಭಗವಾನ್ ಖೂಬಾಗೆ ಸಚಿವ ಸ್ಥಾನ: ನಿರ್ಲಕ್ಷ್ಯಕ್ಕೊಳಗಾಗಿದ್ದ ಕಲ್ಯಾಣ ಕರ್ನಾಟಕ್ ಫುಲ್ ಖುಷ್!

Shilpa D

ಬೆಳಗಾವಿ: ಬೀದರ್ ಸಂಸದ ಭಗವಾನ್ ಖೂಬಾ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿರುವುದು ನಿರ್ಲಕ್ಷ್ಯಗೊಂಡ ಕಲ್ಯಾಣ ಕರ್ನಾಟಕ ಭಾಗದ ಜನರ ಮನಸ್ಸನ್ನು ಸಂತೋಷಗೊಳಿಸಿದೆ.

ಕರ್ನಾಟಕ ಕಾಂಗ್ರೆಸ್ ನ ಪ್ರಮುಖ ರಾಜಕಾರಣಿಗಳಾದ ದಿವಂಗತ ಧರ್ಮಸಿಂಗ್ ಮತ್ತು ಈಶ್ವರ ಖಂಡ್ರೆ ಅವರನ್ನು ಸೋಲಿಸಿದ ಕಾರಣ ಭಗವಾನ್ ಖೂಬಾ ಅವರಿಗೆ ನೀಡಿದ ಉಡುಗೊರೆ ಇದು ಎಂದು ಹೇಳಲಾಗುತ್ತಿದೆ.

ಕೇಂದ್ರ ಬಿಜೆಪಿ ನಾಯಕತ್ವವು ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಯತ್ನಗಳನ್ನು ಮರೆಮಾಚುತ್ತಿರುವ ಸಮಯದಲ್ಲಿ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯವನ್ನು ಸಮಾಧಾನಪಡಿಸುವ ಕೇಂದ್ರದ ಕಾರ್ಯತಂತ್ರವಾಗಿ ಖೂಬಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಸುರೇಶ್ ಅಂಗಡಿ ಅವರ ಸ್ಥಾನಕ್ಕೆ ಖೂಬಾ ಅವರೇ ಸೂಕ್ತ ಮತ್ತು ಪ್ರಬಲ ನಾಯಕ ಎಂದು ಕೇಂದ್ರ ಮುಖಂಡರು ಮನಗಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಖೂಬಾ ಬೀದರ್ ನಿಂದ ಮೊದಲ ಬಾರಿಗೆ ಆಯ್ಕೆಗೊಂಡು ಕೇಂದ್ರ ಸಂಪುಟ ಸೇರಿದ್ದಾರೆ.   ಬೀದರ್‌ನ ಏಳು ಬಾರಿಯ ಸಂಸದರಾಗಿದ್ದ, ದಿವಂಗತ ರಾಮಚಂದ್ರ ವೀರಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರಲಿಲ್ಲ,

ಸದ್ಯ ಖೂಬಾ ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಯಾವ ಖಾತೆ ನೀಡಲಿದ್ದಾರೆ ಎಂಬ ಬಗ್ಗೆ ಎಲ್ಲರೂ ಪ್ರಧಾನ ಮಂತ್ರಿಯವರ ನಿರ್ಧಾರದ ಮೇಲೆ ಗಮನ ಹರಿಸಿದ್ದಾರೆ.

ದಶಕಳಿಂದಲೂ ಅಭಿವೃದ್ಧಿ ಸೇರಿದಂತೆ ಎಲ್ಲಾ ರೀತಿಯಿಂದಲೂ ನಿರ್ಲಕ್ಷ್ಯಕ್ಕೊಳಪಟ್ಟಿದ್ದ ಕಲ್ಯಾಣ ಕರ್ನಾಟಕಕ್ಕೆ ಖೂಬಾ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರಿಂದ ಸಂತಸಗೊಂಡಿದ್ದಾರೆ. ಈ ಭಾಗದಲ್ಲಿ ಉಳಿದಿರುವ ಪ್ರಮುಖ ಯೋಜನೆಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಸಂಸದ ಬಿವೈ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಊಹಿಸಲಾಗಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಖೂಬಾ ಅವರನ್ನು ಪರಿಗಣಿಸಿದ್ದಾರೆ.

SCROLL FOR NEXT