ಸಚಿವ ಈಶ್ವರಪ್ಪ 
ರಾಜಕೀಯ

ಕುರುಬ ಸಮುದಾಯದ ಈಶ್ವರಪ್ಪಗೆ ಸಿಎಂ ಸ್ಥಾನ ನೀಡುವಂತೆ ಒಬಿಸಿ ನಾಯಕರ ಆಗ್ರಹ

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಬರೀ ಲಿಂಗಾಯತ, ಒಕ್ಕಲಿಗ ಸಮುದಾಯದವರಿಗೆ ಇಲ್ಲಿಯವರೆಗೂ ನೀಡುತ್ತಾ ಬಂದಿದ್ದು, ಈಗಲಾದರೂ ಸಿಎಂ ಹುದ್ದೆಯನ್ನು ಕುರುಬ ಸಮುದಾಯಕ್ಕೆ ಮೀಸಲಿಟ್ಟು, ಕುರುಬ ಸಮುದಾಯದ....

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಬರೀ ಲಿಂಗಾಯತ, ಒಕ್ಕಲಿಗ ಸಮುದಾಯದವರಿಗೆ ಇಲ್ಲಿಯವರೆಗೂ ನೀಡುತ್ತಾ ಬಂದಿದ್ದು, ಈಗಲಾದರೂ ಸಿಎಂ ಹುದ್ದೆಯನ್ನು ಕುರುಬ ಸಮುದಾಯಕ್ಕೆ ಮೀಸಲಿಟ್ಟು, ಕುರುಬ ಸಮುದಾಯದ ನಾಯಕ, ಸಚಿವ ಕೆ.ಎಸ್.ಈಶ್ವರಪ್ಪಗೆ ನೀಡಬೇಕೆಂದು ಹಿಂದುಳಿದ ವರ್ಗಗಳ ಸಮುದಾಯದ ನಾಯಕರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಕುರುಬ,ಈಡಿಗ,ಕೋಳಿ, ಮಾಳಿ, ಸವಿತಾ ಸಮಾಜದ ನಾಯಕರು ಕುರುಬ ಸಮುದಾಯದ ನಾಯಕ ಮುಕುಡಪ್ಪ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಾಯಿತು.

ಮುಕುಡಪ್ಪ ಮಾತನಾಡಿ, ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಬೇಕು. ಒಂದು ವೇಳೆ ಬದಲಾವಣೆ ಮಾಡಿದರೆ ಈಶ್ವರಪ್ಪಗೆ ಅವಕಾಶ ಕೊಡಬೇಕು. ಈಶ್ವರಪ್ಪನವರನ್ನು ಸಿಎಂ ಮಾಡಬೇಕು. ಒಕ್ಕಲಿಗ ಸಮುದಾಯದಿಂದ ಡಿ.ವಿ.ಸದಾನಂದಗೌಡರು ಆಗಿದ್ದರು, ಜಗದೀಶ್ ಶೆಟ್ಟರ್ ಕೂಡ ಸಿಎಂ ಆಗಿದ್ದಾರೆ ಎಂದರು.

ಬಿಜೆಪಿಯಲ್ಲಿ ಯಡಿಯೂರಪ್ಪನವರಷ್ಟೇ ಈಶ್ವರಪ್ಪ ಹಿರಿಯರಾಗಿದ್ದು, ಈಶ್ವರಪ್ಪನವರಿಗೆ ಸಿಎಂ ಸ್ಥಾನ ಕೊಡಬೇಕು. 20 ವರ್ಷ ಲಿಂಗಾಯತರು ಸಿಎಂ ಆಗಿದ್ದಾರೆ, 18 ವರ್ಷ ಒಕ್ಕಲಿಗರು ಸಿಎಂ ಆಗಿದ್ದಾರೆ. ಕುರುಬರು 5 ವರ್ಷ ಮಾತ್ರ ಸಿಎಂ ಆಗಿದ್ದರು ಎಂದು ಕಾಂಗ್ರೆಸ್‌ ನಿಂದ ಸಿದ್ದರಾಮಯ್ಯನವರನ್ನು ಸಿಎಂ ಮಾಡಲಾಗಿತ್ತು ಎಂಬುದನ್ನು ಪರೋಕ್ಷವಾಗಿ ಒತ್ತಿ ಹೇಳಿದ ಮುಕುಡಪ್ಪ ಬಿಜೆಪಿಯಲ್ಲಿ ಕುರುಬ ಸಮುದಾಯದಿಂದ ಈಶ್ವರಪ್ಪಗೆ ಸಿಎಂ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.

ಕೋಲಿ ಸಮಾಜದ ಮುಖಂಡ ತಿಪ್ಪಣ್ಣ ರೆಡ್ಡಿ ಮಾತನಾಡಿ, ರಾಷ್ಟ್ರಪತಿಗಳು ದಲಿತರು. ರಾಜ್ಯದ ರಾಜ್ಯಪಾಲರು ದಲಿತರು. 41 ಜನರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೊಟ್ಟಿದ್ದಾರೆ. ಎಸ್ಸಿ, ಎಸ್ಟಿ ಒಬಿಸಿಯವರು ಆಗಿದ್ದಾರೆ. ಇಲ್ಲಿಯೂ ಒಬಿಸಿಯ ಈಶ್ವರಪ್ಪನವರಿಗೆ ಅವಕಾಶ ಕೊಡಬೇಕು. ಬರಿ ಎರಡೇ ಸಮುದಾಯಕ್ಕೆ ಯಾಕೆ ಸಿಎಂ ಸ್ಥಾನ ಕೊಡಬೇಕು. ಲಿಂಗಾಯತ, ಒಕ್ಕಲಿಗರಿಗೆ ಮಾತ್ರ ಏಕೆ? ಕುರುಬರು ಹಿಂದುಳಿದ ಸಮುದಾಯದವರು. ಅದಕ್ಕೆ ಕುರುಬ ಸಮುದಾಯದ ಈಶ್ವರಪ್ಪಗೆ ಕೊಡಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bus Fire: ಆಂಧ್ರ ಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಹೈದರಾಬಾದ್-ಬೆಂಗಳೂರು ಖಾಸಗಿ ಬಸ್ ನಲ್ಲಿ ಭೀಕರ ಬೆಂಕಿ ಅವಘಡ: ಕನಿಷ್ಠ 20 ಮಂದಿ ಸಾವು-Video

ಕರ್ನೂಲ್ ಬಸ್ ದುರಂತ: ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ-ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ, 2 ಲಕ್ಷ ರೂ. ಪರಿಹಾರ ಘೋಷಣೆ

ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್‌ ಸೇರಿ ಬೆಂಗಳೂರಿನ ಹೊರ ವಲಯದ ಮತ್ತಷ್ಟು ಪ್ರದೇಶಗಳು GBA ವ್ಯಾಪ್ತಿಗೆ; DCM ಡಿ.ಕೆ ಶಿವಕುಮಾರ್

ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥಸಂಚಲನ: ಜಿಲ್ಲಾಡಳಿತ ಅನುಮತಿ ಕೋರಿದ RSS

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ: ಅನುಮತಿ ನಿರ್ಧಾರ ಕಲಬುರಗಿ ಜಿಲ್ಲಾಧಿಕಾರಿಗೆ ಬಿಟ್ಟದ್ದು; ಗೃಹ ಸಚಿವ

SCROLL FOR NEXT