ರಾಜಕೀಯ

'ಎಲ್ಲರೂ ಕುಸ್ತಿ ಅಖಾಡದಲ್ಲಿದ್ದಾರೆ, ಒಬ್ಬನ ಚಡ್ಡಿ ಇನ್ನೊಬ್ಬನ ಕೈಯಲ್ಲಿದೆ, ಯಾರು ಯಾರನ್ನು ಬೆತ್ತಲೆ ಮಾಡುತ್ತಾರೋ ಗೊತ್ತಿಲ್ಲ'

Shilpa D

ಬೆಳಗಾವಿ: ಕಾಂಗ್ರೆಸ್‌ ನಾಯಕರ ಮುಖ್ಯಮಂತ್ರಿ ಕನಸು ತಿರುಕನ ಕನಸಿನಂತಾಗಿದೆ ಎಂದು ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಅವ್ರು ಗೆದ್ದು ಬರಬೇಕಲ್ಲ. ಗೆದ್ದರೂ ಒಂದಾಗಬೇಕಲ್ಲ? ಎಲ್ಲರೂ ಕುಸ್ತಿ ಅಖಾಡದಲ್ಲಿದ್ದಾರೆ. ಒಬ್ಬನ ಚಡ್ಡಿ ಇನ್ನೊಬ್ಬನ ಕೈಯಲ್ಲಿದೆ. ಯಾರು ಯಾರನ್ನು ಬೆತ್ತಲೆ ಮಾಡುತ್ತಾರೋ ಗೊತ್ತಿಲ್ಲ. ಕುಸ್ತಿಯನ್ನು ನೋಡೋಣ’. – ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ‘ಮುಂದಿನ ಮುಖ್ಯಮಂತ್ರಿ’ ಚರ್ಚೆ ಬಗ್ಗೆ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿ ಇನ್ನಷ್ಟು ಹೀನಾಯವಾಗಲಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ- ಪರಮೇಶ್ವರ ಸೇರಿ ಮೂರು ಪ್ರಬಲ ಗುಂಪುಗಳಿವೆ.

ಇದರ ನಡುವೆ ಶಾಮನೂರು ಶಿವಶಂಕರಪ್ಪ ಅವರು ನನಗೂ 91 ವಯಸ್ಸಾಗಿದೆ. ನಾನು ಏಕೆ ಮುಖ್ಯಮಂತ್ರಿಯಾಗಬಾರದು ಎನ್ನುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿಗರದ್ದು ಮುಖ್ಯಮಂತ್ರಿ ಹುದ್ದೆ ಎಂಬುದು ತಿರುಕನ ಕನಸಾಗಿದ್ದು, ಅದು ನನಸಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

SCROLL FOR NEXT