ರಾಜಕೀಯ

ಶರದ್ ಪವಾರ್ ಜೊತೆಗೆ ರಾಹುಲ್ ಕೈ ಜೋಡಿಸಬೇಕು: ಶಿವಸೇನಾ ಹೇಳಿಕೆಗೆ ದಿನೇಶ್ ಗುಂಡೂರಾವ್ ಬೆಂಬಲ

Nagaraja AB

ಬೆಂಗಳೂರು: ಕೇಂದ್ರದ ಆಡಳಿತಾರೂಢ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ವಿರೋಧಪಕ್ಷಗಳನ್ನು ಒಂದುಗೂಡಿಸಲು ಎನ್ ಸಿಪಿ ಮುಖ್ಯಸ್ಥ ಶರದ್ ಯಾದವ್ ಅವರೊಂದಿಗೆ ರಾಹುಲ್ ಗಾಂಧಿ ಕೈ ಜೋಡಿಸಬೇಕೆಂಬ ಶಿವಸೇನಾ ಹೇಳಿಕೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ದಿನೇಶ್ ಗುಂಡೂರಾವ್ ಶುಕ್ರವಾರ ಬೆಂಬಲಿಸಿದ್ದು, ಅಗತ್ಯ ಎಂದಿದ್ದಾರೆ.

ಈ ವಿಚಾರವನ್ನು ಮುಂದೆ ಕೊಂಡೊಯ್ಯಲು ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ಸಂಪರ್ಕದಲ್ಲಿರುತ್ತಾರೆ ಎಂಬ ಖಚಿತತೆಯನ್ನು ಗೋವಾ, ತಮಿಳುನಾಡು ಮತ್ತು ಪುದುಚೇರಿ ಎಐಸಿಸಿ ಉಸ್ತುವಾರಿಯಾಗಿರುವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಎನ್ ಸಿಪಿ ಕಳೆದ 20 ವರ್ಷಗಳಿಂದಲೂ ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳಾಗಿವೆ. ಆದ್ದರಿಂದ ನಮ್ಮಗಳ ನಡುವೆ ಉತ್ತಮ ಬಾಂಧವ್ಯವಿದೆ. ರಾಹುಲ್ ಗಾಂಧಿ ಮತ್ತು ಶರದ ಪವಾರ್  ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿದ್ದಾರೆ ಎಂಬ ಖಾತ್ರಿ ಇರುವುದಾಗಿ ಎಂದು ದಿನೇಶ್ ಗುಂಡೂರಾವ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 ಇದು ಅಗತ್ಯವಾಗಿದೆ ಮತ್ತು ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ನನಗೆ ಖಾತ್ರಿಯಿದೆ. ಶಿವಸೇನೆ ಹೇಳಿದ್ದನ್ನು ನಾನು ಸ್ವಾಗತಿಸುತ್ತೇನೆ. ಇದು ಒಳ್ಳೆಯ ಸಲಹೆಯಾಗಿದೆ ಎಂದು ಕರ್ನಾಟಕದ ಮಾಜಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಆರ್ ಗುಂಡು ರಾವ್ ಅವರ ಪುತ್ರ ರಾವ್ ಹೇಳಿದರು.

ಎಲ್ಲಾ ಪ್ರತಿಪಕ್ಷಗಳನ್ನು ಒಂದುಗೂಡಿಸಲು ಶರದ್ ಪವಾರ್ ಅವರೊಂದಿಗೆ ರಾಹುಲ್ ಗಾಂಧಿ ಕೈ ಜೋಡಿಸಬೇಕೆಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಗುರುವಾರ ಹೇಳಲಾಗಿತ್ತು.

SCROLL FOR NEXT