ರಾಜಕೀಯ

ಮಸ್ಕಿ: ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡಗೆ ಮುಖಭಂಗ, 30 ಸಾವಿರ ಅಂತರದಿಂದ ಗೆದ್ದ 'ಕೈ' ಅಭ್ಯರ್ಥಿ ಬಸವನಗೌಡ

Vishwanath S

ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಗೆ ಸೋಲು ಕಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಬಸವನಗೌಡ ತುರುವಿಹಾಳ 86,222 ಮತಗಳನ್ನು ಪಡೆದಿದ್ದರೆ ಪ್ರತಾಪ್ ಗೌಡ ಪಾಟೀಲ್ 55,581 ಮತಗಳನ್ನು ಪಡೆದಿದ್ದು ಈ ಮೂಲಕ ಬಸನಗೌಡ ಬರೋಬ್ಬರಿ 30, 666 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರು ತಮ್ಮ ಸೋಲು ಖಚಿತ ಎಂದು ಗೊತ್ತಾಗುತ್ತಿದ್ದಂತೆ ಹೊರ ನಡೆದಿದ್ದರು. 

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ತಾವು ಮಾಡಿದ್ದರೂ ಜನರು ಬೆಲೆ ಕೊಟ್ಟಿಲ್ಲ, ನಿರೀಕ್ಷಿತ ಮತಗಟ್ಟೆಗಳಲ್ಲಿಯೂ ತಮ್ಮ ಪರ ಮತಗಳು ಬಂದಿಲ್ಲ, ಜನ ಹೀಗೆ ಯಾಕೆ ಮಾಡಿದ್ದಾರೆ ಎಂದು ಗೊತ್ತಾಗುತ್ತಿಲ್ಲ, ಕ್ಷೇತ್ರದಲ್ಲಿ ವಿರೋಧಿ ಅಲೆ ಎದ್ದಿರುವುದು ಗೊತ್ತಾಗುತ್ತಿದೆ ಎಂದು ಬೇಸರದಿಂದಲೇ ಹೇಳಿದರು.

ಇನ್ನು ಬಸವನಗೌಡ ತುರವಿಹಾಳ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಶುಭಾಶಯ ತಿಳಿಸಿದ್ದಾರೆ. 

SCROLL FOR NEXT