ರಾಜಕೀಯ

ಯಾರೋ ಎಲ್ಲಿಗೋ ಹೋಗಿ ಬಂದರೆ ನನಗೇನು?: ನಾಯಕತ್ವ ಬದಲಾವಣೆ ಚಟುವಟಿಕೆ ಬಗ್ಗೆ ಸಿಎಂ ಕೆಂಡಾಮಂಡಲ!

Shilpa D

ಬೆಂಗಳೂರು: ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

'ನನ್ನ ಮುಂದೆ ಇರುವುದು ಕೋವಿಡ್ ನಿರ್ವಹಣೆ ಮಾತ್ರ. ಅದರ ನಿಯಂತ್ರಣ ಹಾಗೂ ನಿರ್ವಹಣೆ ಕೆಲಸಕ್ಕೆ ಮಾತ್ರ ಆದ್ಯತೆ' ಎಂದು ಯಡಿಯೂರಪ್ಪ ಗರಂ ಆಗಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು ಕೊರೋನಾ ನಿಯಂತ್ರಿಸುವುದು, ಜನಹಿತ ಕಾಪಾಡೋದು ನನ್ನ ಆದ್ಯತೆ ಎಂದರು.‌ ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದರು ಅಂದರೆ, ಅವರಿಗೆ ಉತ್ತರ ಕೊಟ್ಟು ಕಳಿಸಿದಾರಲ್ಲ ಎಂದು ಪರೋಕ್ಷವಾಗಿ ಸಚಿವ ಸಿ.ಪಿ ಯೋಗೀಶ್ವರ್ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಶಾಸಕಾಂಗ ಸಭೆ ಕರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದನ್ನು ನಿಮ್ಮ ಜೊತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ' ಎಂದರು. ಮೇಕೆ ದಾಟು ವಿಚಾರಕ್ಕೆ ಸಂಬಂಧಿಸಿದಂತೆ ಚೆನ್ನೈ ಹಸಿರು ಪೀಠ ಸಮಿತಿ ರಚನೆ ಮಾಡಿರುವ ವಿಚಾರದಲ್ಲಿ ಮಾತನಾಡಿ, ಈ ಕುರಿತಾಗಿ ಚರ್ಚೆ ಮಾಡುತ್ತೇವೆ. ಅದನ್ನು ತಡೆಯೋಕೆ ಏನು ಮಾಡಬೇಕೋ ಮಾಡುತ್ತೇವೆ. ಹೈಕೋರ್ಟ್ ಮೊರೆ ಹೋಗ್ತಿವಿ, ಸುಪ್ರೀಂ ಕೋರ್ಟ್‌ಗೆ ಕೂಡ ಹೋಗುತ್ತೇವೆ ಎಂದು ಹೇಳಿದರು.

SCROLL FOR NEXT