ಪ್ರಹ್ಲಾದ್ ಜೋಶಿ 
ರಾಜಕೀಯ

ಸಮರ್ಥರು ಎಂದು ಹೇಳಿಕೊಂಡವರಲ್ಲೇ ಬಡಿದಾಟವಾಗುತ್ತಿದೆ: ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು

ಬಿಜೆಪಿಯಲ್ಲಿ ಸಮರ್ಥನಾಯಕರಿಲ್ಲ.. ಹೀಗಾಗಿ ನಾಯಕತ್ವ ಬದಲಾವಣೆ ಮಾಡಿಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಸಮರ್ಥರು ಎಂದು ಹೇಳಿಕೊಂಡವರಲ್ಲೇ ಬಡಿದಾಟವಾಗುತ್ತಿದೆ ಎಂದು ಹೇಳಿದೆ.

ಹುಬ್ಬಳ್ಳಿ: ಬಿಜೆಪಿಯಲ್ಲಿ ಸಮರ್ಥನಾಯಕರಿಲ್ಲ.. ಹೀಗಾಗಿ ನಾಯಕತ್ವ ಬದಲಾವಣೆ ಮಾಡಿಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಸಮರ್ಥರು ಎಂದು ಹೇಳಿಕೊಂಡವರಲ್ಲೇ ಬಡಿದಾಟವಾಗುತ್ತಿದೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ಮಾಡಿದ್ದಾರೆ. 'ಸಮರ್ಥರು ಎಂದು ಹೇಳಿಕೊಂಡು ಅವರಲ್ಲೆ ಬಡಿದಾಟವಾಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ  ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಆದ್ಯತೆ ಕೋವಿಡ್ ನಿವಾರಣೆ , ದೇಶದ ಆರ್ಥಿಕತೆ ಕಡೆಗೆ ಮಾತ್ರ ಎಂದು ಅವರು ಹೇಳಿದರು.

ಹುಬ್ಬಳ್ಳಿಯಲ್ಲಿದ್ದಾಗ ದೆಹಲಿಯಲ್ಲಿದ್ದಾಗ ಸಚಿವರು ಭೇಟಿಯಾಗುತ್ತಾರೆ. ಆದರೆ ರಾಜ್ಯ ರಾಜಕೀಯದ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ದೆಹಲಿಗೆ ಮೊನ್ನೆ ಕೆಲವರು ಬಂದಿದ್ದರು. ಆದರೆ ದೆಹಲಿಯಲ್ಲಿ ನನ್ನನ್ನು ಯಾರೂ ಭೇಟಿಯಾಗಿಲ್ಲ. ಅವರು ಎಲ್ಲಿ ಹೋದ್ರು, ಯಾರನ್ನ ಭೇಟಿಯಾಗಿದ್ದರೋ ಗೊತ್ತಿಲ್ಲ ಎಂದು  ಹೇಳಿದರು.

ಅಂತೆಯೇ ವಯಸ್ಸಿನ ಕಾರಣಕ್ಕಾಗಿ ಯಡಿಯೂರಪ್ಪರವರನ್ನು ಹುದ್ದೆಯಿಂದ ಇಳಿಸಬೇಕೆಂಬ ಒತ್ತಡ ಸರಿಯಲ್ಲ ಎಂದೂ ಜೋಶಿ ಅಭಿಪ್ರಾಯಪಟ್ಟರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!