ಶ್ರೀನಿವಾಸ ಮಾನೆ 
ರಾಜಕೀಯ

ಹಾನಗಲ್ ದಂಗಲ್: ಶ್ರೀನಿವಾಸ ಮಾನೆ ಗೆಲುವಿಗೆ ಕಾರಣವೇನು? ಉದಾಸಿ ಕುಟುಂಬಸ್ಥರಿಗೆ ಟಿಕೆಟ್ ನೀಡದ್ದು ಬಿಜೆಪಿ ಸೋಲಿಗೆ ಕಾರಣ!

 ಹಾನಗಲ್ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅಭೂತ ಪೂರ್ವ ಗೆಲುವು ಸಾಧಿಸಿದ್ದಾರೆ.

ಹುಬ್ಬಳ್ಳಿ:  ಹಾನಗಲ್ ಉಪಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅಭೂತ ಪೂರ್ವ ಗೆಲುವು ಸಾಧಿಸಿದ್ದಾರೆ.

ಶ್ರೀನಿವಾಸ ಮಾನೆ ಅವರ ಗೆಲುವಿಗೆ ಅವರ ವರ್ಚಸ್ಸು, ಸ್ಥಳೀಯರ ಜೊತೆ ನಿಕಟ ಸಂಪರ್ಕ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಒಗ್ಗಟ್ಟಿನ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಹಾನಗಲ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬೀಡು ಬಿಟ್ಟು ನಿರಂತರ ಪ್ರಚಾರ ನಡೆಸಿದ್ದರೂ ಕಾಂಗ್ರೆಸ್ ಗೆಲುವನ್ನು ತಡೆಯಲಾಗಲಿಲ್ಲ.

2018ರಲ್ಲಿ ಸಿ ಎಂ ಉದಾಸಿ ವಿರುದ್ಧ ಸೋತರೂ ಮಾನೆ ಹಾನಗಲ್‌ನಲ್ಲಿಕಾಂಗ್ರೆಸ್ ಗೆಲುವಿನ ವಿಶ್ವಾಸವಿತ್ತು.  ಹುಬ್ಬಳ್ಳಿಯವರೇ ಆಗಿದ್ದರೂ ಮಾನೆ ಮೂರು ವರ್ಷಗಳ ಕಾಲ ಕಣಕ್ಕಿಳಿದು ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು.

ಧಾರವಾಡ, ಗದಗ ಹೊರತುಪಡಿಸಿ ಹಾವೇರಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರಾಗಿ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರು. ಆದಾಗ್ಯೂ, ಮೊದಲ ಮತ್ತು ಎರಡನೆಯ ಕೋವಿಡ್ -19 ಅಲೆಗಳ ಸಮಯದಲ್ಲಿ ಜನರ ಬಗ್ಗೆ ಅವರ ಕಾಳಜಿಯು ಜನರಿಗೆ ಮೆಚ್ಚುಗೆಯಾಗಿತ್ತು ಹಾಗೂ ಅವರ ಕಾರ್ಯಗಳನ್ನು ಪಕ್ಷವು ಹೈಲೈಟ್ ಮಾಡಿತು.

ಸರ್ಕಾರದ ಪರಿಹಾರ ಕ್ರಮಗಳು ಮತ್ತು ಉಚಿತ ಲಸಿಕಾ ಯೋಜನೆ ಬಿಂಬಿಸುವ ಮೂಲಕ ಬಿಜೆಪಿ ಇದನ್ನು ಎದುರಿಸಲು ಪ್ರಯತ್ನಿಸಿದರೂ, ಕೇಸರಿ ಪಕ್ಷವು ಮತದಾರರನ್ನು ಮನವೊಲಿಸುವಲ್ಲಿ ವಿಫಲವಾಯಿತು.

ಇದರ ಜೊತೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆಯೂ ಕೂಡ ಸೋಲಿಗೆ ಕಾರಣವಾಯಿತು. ಉದಾಸಿ ಕುಟುಂಬಸ್ಥರಿಗೆ ಟಿಕೆಟ್ ನೀಡದ್ದು ಸ್ಥಳೀಯ ನಾಯಕರಲ್ಲಿ ಅಸಮಾಧಾನ ಉಂಟು ಮಾಡಿತ್ತು.  ಜೊತೆಗೆ ಶಿವರಾಜ ಸಜ್ಜನರ್ ಹೊರಗಿನವರು ಎಂಬುದು ಪ್ರುಮುಖ ಅಂಶವಾಗಿತ್ತು.

ಇದಲ್ಲದೆ, ಸಂಗೂರ್ ಸಕ್ಕರೆ ಕಾರ್ಖಾನೆಯ ಕಳಪೆ ಆರ್ಥಿಕ ಸ್ಥಿತಿಗೆ ಅವರೇ ಕಾರಣ ಎಂದು ಆರೋಪ ಮಾಡಲಾಯಿತು. ಇದರ ಜೊತೆಗೆ ಈ ಬಾರಿ ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡಿತ್ತು.

ಆದರೆ ಬಿಜೆಪಿ ಪ್ರಚಾರದಲ್ಲಿ ಕೇಂಗ್ರ ಸಚಿವರು ಸೇರಿದಂತೆ ಹಲವು ಸ್ಟಾರ್ ಪ್ರಚಾರಕರನ್ನು ಕರೆ ತಂದರೂ  ಒಗ್ಗಟ್ಟು ಕಾಣಲಿಲ್ಲ.  ಇದಕ್ಕೂ ಮಿಗಿಲಾದ ಮತ್ತೊಂದು ಅಂಶವೆಂದರೇ ಮಾಜಿ ಸಿಎಂ ಯಡಿಯೂರಪ್ಪ ಅವರ ಭಾಷಣ ಮತ್ತು ಬಾಡಿ ಲಾಂಗ್ವೇಜ್ ಹೆಚ್ಚಿನದಾಗಿ ಪ್ರೇರೇಪಿಸಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಹಾನಗಲ್ ಕ್ಷೇತ್ರ ಬಿಜೆಪಿಯ ಸಾಂಪ್ರಾದಾಯಕವಾದ ಕ್ಷೇತ್ರವಲ್ಲ, ಉದಾಸಿ ಅವರ ವರ್ಚಸ್ಸಿನಿಂದ ಬಿಜೆಪಿ ಹಾನಗಲ್ ನಲ್ಲಿ ಗೆಲುವು ಸಾಧಿಸಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಪಕ್ಷಕ್ಕೆ ಒಲವು ತೋರಲಿದೆ ಎಂದು ಬಿಜೆಪಿ ಭಾವಿಸಿತ್ತು, ಆದರೆ  ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್  ಪಾಲಾಗಿವೆಎಂದು ಫಲಿತಾಂಶ ಸಾಬೀತುಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್