ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ವಿಮಾನಯಾನ ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಮಾದಕವಸ್ತು ಪರೀಕ್ಷಾ ನಿಯಮಗಳನ್ನು ಕಠಿಣಗೊಳಿಸಲು ಡಿಜಿಸಿಎ ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಡೆಸುತ್ತಿದೆ
File photo
ಸಂಗ್ರಹ ಚಿತ್ರ
Updated on

ನವದೆಹಲಿ: ವಿಮಾನಯಾನ ಸುರಕ್ಷತೆಯನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪೈಲಟ್‌ಗಳ ಮಾದಕವಸ್ತು ಪರೀಕ್ಷಾ ನಿಯಮಗಳನ್ನು ಕಠಿಣಗೊಳಿಸಲು ಚಿಂತನೆ ನಡೆಸಿದೆ.

ಸದ್ಯ ಒಟ್ಟು ಪೈಲಟ್‌ಗಳ ಪೈಕಿ ಶೇ.10ರಷ್ಟು ಮಂದಿಗೆ ಯಾದೃಚ್ಛಿಕವಾಗಿ ಡ್ರಗ್‌ ಟೆಸ್ಟ್‌ ನಡೆಸಲಾಗುತ್ತಿದ್ದು, ಇನ್ಮುಂದೆ ವರ್ಷವಿಡೀ ಯಾವುದೇ ಸಮಯದಲ್ಲಿ ಎಲ್ಲ ವಾಣಿಜ್ಯ ಪೈಲಟ್‌ಗಳನ್ನೂ ಯಾದೃಚ್ಛಿಕ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಗಳಿವೆ. ಈ ಕುರಿತು ಡಿಜಿಸಿಎ ಈಗಾಗಲೇ ಸಂಬಂಧಪಟ್ಟ ಪಾಲುದಾರರೊಂದಿಗೆ ಸಮಾಲೋಚನೆ ನಡೆಸುತ್ತಿದೆ.

ಎಲ್ಲಾ ವಾಣಿಜ್ಯ ಪೈಲಟ್‌ಗಳಿಗೆ ವರ್ಷಪೂರ್ತಿ ಯಾದೃಚ್ಛಿಕ ಮನೋವೈದ್ಯಕೀಯ ವಸ್ತು ಪರೀಕ್ಷೆ ನಡೆಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮ್‌ಮೋಹನ್‌ ನಾಯ್ಡು ಮಂಗಳವಾರ ತಿಳಿಸಿದ್ದಾರೆ.

ವಿಮಾನಯಾನ ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ಮಾದಕವಸ್ತು ಪರೀಕ್ಷಾ ನಿಯಮಗಳನ್ನು ಕಠಿಣಗೊಳಿಸಲು ಡಿಜಿಸಿಎ ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಸದ್ಯದ ನಿಯಮಗಳ ಪ್ರಕಾರ ಒಟ್ಟು ಪೈಲಟ್‌ಗಳ ಪೈಕಿ ಶೇ.10ರಷ್ಟು ಮಂದಿಗೆ ಮಾದಕವಸ್ತು ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಡಿಜಿಸಿಎ ಈಗ ವಿವಿಧ ಪಾಲುದಾರರೊಂದಿಗೆ ಚರ್ಚಿಸುತ್ತಿದೆ. ನಮ್ಮ ಕಡೆಯಿಂದ ಇರುವ ಒಂದು ಅಭಿಪ್ರಾಯವೆಂದರೆ, ವರ್ಷಪೂರ್ತಿ ಎಲ್ಲ ಪೈಲಟ್‌ಗಳನ್ನೂ ಯಾವುದೇ ಸಮಯದಲ್ಲಿ ಯಾದೃಚ್ಛಿಕವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂಬುದು. ಈ ಕುರಿತು ಎಲ್ಲ ಪಾಲುದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕಿದೆ ಎಂದು ತಿಳಿಸಿದ್ದಾರೆ.

File photo
ದೆಹಲಿ-ಇಂದೋರ್ AI Express ವಿಮಾನದಲ್ಲಿ ಎಂಜಿನ್ ದೋಷ; PAN-PAN ಕರೆ ಮಾಡಿದ ಪೈಲಟ್; ಸುರಕ್ಷಿತವಾಗಿ ಲ್ಯಾಂಡಿಂಗ್

ಫುಕೆಟ್‌-ದೆಹಲಿ ಮಾರ್ಗದ ಏರ್‌ ಇಂಡಿಯಾ ವಿಮಾನವೊಂದು ಏಕಾಏಕಿ ಎತ್ತರ ಕಳೆದುಕೊಂಡ ಘಟನೆ ಬಳಿಕ ಪೈಲಟ್‌ಗಳ ಮಾದಕವಸ್ತು ಸೇವನೆಯ ಸಾಧ್ಯತೆ ಕುರಿತು ಚರ್ಚೆ ತೀವ್ರಗೊಂಡಿದೆ.

ಆ ಘಟನೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ವಿಮಾನದ ಕ್ಯಾಪ್ಟನ್‌ ಗಾಂಜಾ ಸೇವಿಸಿರುವುದು ಪತ್ತೆಯಾಗಿತ್ತು ಎಂದು ವರದಿಯಾಗಿದೆ.

ಸದ್ಯ ಪೈಲಟ್‌ಗಳಿಗೆ ಯಾದೃಚ್ಛಿಕ ಆಧಾರದ ಮೇಲೆ ಮಾದಕವಸ್ತು ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಭವಿಷ್ಯದಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ರೂಪಿಸುವ ಕುರಿತು ಡಿಜಿಸಿಎ ಸಮಾಲೋಚನೆ ನಡೆಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಈ ಮಾದಕವಸ್ತು ಪರೀಕ್ಷೆಯನ್ನು ನಡೆಸಲು ಹಲವು ಮಾರ್ಗಗಳಿವೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರ ಬಳಿಕ ಪೈಲಟ್‌ಗಳ ಮನೋಪ್ರಚೋದಕ ವಸ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಈ ನಡುವೆ ಏರ್‌ ಇಂಡಿಯಾ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಗಳು ತಮ್ಮ ಎಲ್ಲ ಪೈಲಟ್‌ಗಳಿಗೆ ಕಡ್ಡಾಯ ಮನೋಪ್ರಚೋದಕ ವಸ್ತುಗಳ ಪರೀಕ್ಷೆಯನ್ನು ಆರಂಭಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com