ರಾಜಕೀಯ

ಮಹಾನ್ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯನವರೇ ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ತಿಳಿಸಿಕೊಡಲಿ: ಪ್ರತಾಪ ಸಿಂಹ

Sumana Upadhyaya

ಮೈಸೂರು: ಬಿಟ್ ಕಾಯಿನ್ ಅವ್ಯವಹಾರ ಕೇಸು ರಾಜ್ಯದಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ಮಧ್ಯೆ ತೀವ್ರ ವಾಕ್ಸಮರ ಮತ್ತು ಪರಸ್ಪರ ಕೆಸರೆರಚಾಟಕ್ಕೆ ವಿಷಯವಾಗಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಹಣಕಾಸು ಸಚಿವರಾಗಿದ್ದಾಗ ಹದಿಮೂರು ಬಾರಿ ಬಜೆಟ್ ಮಂಡಿಸಿದ್ದರು. ರಾಜ್ಯ ಬಜೆಟ್​ ಮಂಡಿಸಿರುವ ಹಿರಿಯ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರು,  ಅವರೇ ಬಿಟ್ ಕಾಯಿನ್ ಅಂದ್ರೇನು, ಅದರ ವ್ಯವಹಾರ ಹೇಗೆ ನಡೆಯುತ್ತೆ, ವಹಿವಾಟು ಕ್ರಮ ಹೇಗೆ, ಎಜೆನ್ಸಿ ಎಲ್ಲಿದೆ ಎಂಂಬುದನ್ನು ತಿಳಿಸಿಕೊಡಲಿ ಎಂದು ಸವಾಲು ಹಾಕಿದ್ದಾರೆ.

ಬಿಟ್‌ ಕಾಯಿನ್ ಹಗರಣದ ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ಉಲ್ಲೇಖವಾಗಿದೆ. ಬಿಜೆಪಿ ವಿರುದ್ಧ ಆರೋಪಿಸಿ ಕಾಂಗ್ರೆಸ್‌ನವರೇಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ? ಅವರಿವರ ಹೆಸರನ್ನು ಯಾಕೆ ತೇಲಿ ಬಿಡುತ್ತಿದ್ದೀರಾ? ಬಿಟ್ ಕಾಯಿನ್ ಅಂದ್ರೇನು, ಅದರ ವ್ಯವಹಾರ ಹೇಗೆ? ಇದರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿವರಿಸಲಿ. ಅಷ್ಟಕ್ಕೂ ಬಿಟ್ ಕಾಯಿನ್ ಅವ್ಯವಹಾರ ನಡೆದಿದ್ದು ಈಗಿನ ಬೊಮ್ಮಾಯಿ ಸರ್ಕಾರದಲ್ಲಿ ಅಲ್ಲ, ಹಿಂದಿನ ಸಿದ್ದರಾಮಯ್ಯ ಸರ್ಕಾರವಿರುವಾಗ ಎಂದರು.

ಬೊಮ್ಮಾಯಿ 2023ಕ್ಕೂ ಮುಖ್ಯಮಂತ್ರಿ ಆಗೋದು ಖಚಿತ. ಬೊಮ್ಮಾಯಿ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಮೊದಲು ಈ ರೀತಿ ತಂತ್ರಗಾರಿಕೆಯನ್ನ ಮಾಡೋದು ಬಿಡಿ ಎಂದರು.

ಬಿಟ್ ಕಾಯಿನ್ ಪ್ರಕರಣ ಕಾಂಗ್ರೆಸ್ ಕೊರಳು ಸುತ್ತಿಕೊಳ್ಳುತ್ತದೆ: ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಧ್ಯಮಗಳ ಮೂಲಕ ನಿರೀಕ್ಷಣಾ ಜಾಮೀನು ಹಾಕುತ್ತಿದೆ. ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಿದರೆ ಕಾಂಗ್ರೆಸ್ ನವರೇ ಇದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಚಾರ್ಚ್ ಶೀಟ್ ನಲ್ಲಿ ಕಾಂಗ್ರೆಸ್ ಮುಖಂಡರ ಮಕ್ಕಳ ಹೆಸರು ಉಲ್ಲೇಖವಾಗಿದೆ. ಹೀಗಾಗಿ ಕಾಂಗ್ರೆಸ್ ನವರಿಗೆ ಭಯ ಉಂಟಾಗಿ ನಿರೀಕ್ಷಣಾ ಜಾಮೀನು ಹಾಕುತ್ತಿದ್ದಾರೆ ಎಂದು ಟೀಕಿಸಿದರು. 

SCROLL FOR NEXT