ಕುಮಾರಸ್ವಾಮಿ 
ರಾಜಕೀಯ

ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಸ್ಥಾನ ಕೊಡದಿರುವುದು ಕುಟುಂಬ ರಾಜಕಾರಣದ ಭಾಗವೇ?

ವಿಧಾನಪರಿಷತ್ತಿನ ಚುನಾವಣೆ ಮತ್ತೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಆರೋಪ- ಪ್ರತ್ಯಾರೋಪ ಬಿರುಸುಗೊಂಡು ರಾಜಕೀಯ ಪಕ್ಷಗಳ ನಡುವೆ ಟ್ವೀಟ್ ವಾರ್ ಬಹಳ ಸುದ್ದಿಗೆ ಗುದ್ದು ಕೊಡುತ್ತಿದೆ.

ಬೆಂಗಳೂರು: ವಿಧಾನಪರಿಷತ್ತಿನ ಚುನಾವಣೆ ಮತ್ತೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಆರೋಪ- ಪ್ರತ್ಯಾರೋಪ ಬಿರುಸುಗೊಂಡು ರಾಜಕೀಯ ಪಕ್ಷಗಳ ನಡುವೆ ಟ್ವೀಟ್ ವಾರ್ ಬಹಳ ಸುದ್ದಿಗೆ ಗುದ್ದು ಕೊಡುತ್ತಿದೆ.

ಮಾನ್ಯ ಹೆಚ್ ಡಿ ಕುಮಾರಸ್ವಾಮಿಯವರೇ ನಿಮ್ಮ ಪಕ್ಷದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷರ ಚಿತ್ರಕ್ಕೇ ಜಾಗವಿಲ್ಲ. ಅವರು ನಿಮ್ಮ ಕುಟುಂಬದವರಲ್ಲ ಎಂಬ ಕಾರಣಕ್ಕಾಗಿ ಈ ದ್ವೇಷವೇ? ಇದೂ ಸಹ ಕುಟುಂಬ ರಾಜಕಾರಣದ ಭಾಗವೇ? ಇದು ಮಿಷನ್‌ ಕುಟುಂಬ ರಾಜಕಾರಣವಲ್ಲವೇ? ಎಂದು ರಾಜ್ಯ ಬಿಜೆಪಿ ಮಾಜಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದೆ.

ಬಿಜೆಪಿ ಕುಟುಂಬ ರಾಜಕಾರಣ ಕುರಿತಂತೆ ನಿನ್ನೆ ಜೆಡಿಎಸ್ ಮಾಡಿದ್ದ ಟ್ವೀಟ್ ಗೆ ಖಡಕ್ ಉತ್ತರಿ ನೀಡಿರುವ ಬಿಜೆಪಿ, ಕುಮಾರಸ್ವಾಮಿ ಅವರೇ, ಜಾತ್ಯತೀತ ಜನತಾ ದಳ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಯಾರ ಕುಟುಂಬಕ್ಕೆ ನೀಡಿದ್ದೀರಿ? ಎಂದು ಪ್ರಶ್ನಿಸಿದೆ.

ರಾಜ್ಯ ಅಧ್ಯಕ್ಷ ಸ್ಥಾನದಲ್ಲಿ ಸುದೀರ್ಘ ಅವಧಿಗೆ ಇದ್ದಿದ್ದು ಯಾರ ಕುಟುಂಬ? ಎಂದು ಪ್ರಶ್ನಿಸಿದೆ. ಕುಮಾರಸ್ವಾಮಿ ಅವರೇ, ಜೆಡಿಎಸ್‌ಗೆ ಅಧಿಕಾರ ಸಿಗುತ್ತದೆ ಎಂದು ಸ್ಪಷ್ಟವಾದ ಕ್ಷಣದಿಂದ ನಿಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ನೀವೇ ಯಾಕೆ ಆಯ್ಕೆಯಾಗುತ್ತೀರಿ? ಪಕ್ಷಕ್ಕಾಗಿ ದುಡಿಮೆ ಮಾಡಿದವರಿಗೆ ಸ್ವಲ್ಪ ಅವಕಾಶ ಕೊಡಬಹುದಲ್ಲವೇ!? ಎಂದು ಬಿಜೆಪಿ ತಿರುಗೇಟು ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ