ರಾಜಕೀಯ

ಯಡಿಯೂರಪ್ಪ ಮತ್ತೆ ಕೆಜೆಪಿಗೆ, ಬೊಮ್ಮಾಯಿ ಸರ್ಕಾರ ಶೀಘ್ರದಲ್ಲಿಯೇ ಪತನ: ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್

Nagaraja AB

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಮತ್ತು ಪ್ರಬಲ ಲಿಂಗಾಯಿತ ನಾಯಕ ಬಿಎಸ್ ಯಡಿಯೂರಪ್ಪ 2012ರ ರಾಜಕೀಯ ಎಪಿಸೋಡ್ ನ್ನು ಪುನರಾವರ್ತಿಸಲಿದ್ದಾರೆಯೇ? ಯಡಿಯೂರಪ್ಪ ಮುಂಬರುವ ದಿನಗಳಲ್ಲಿ ಬಿಜೆಪಿ ತೊರೆದು ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ) ಮತ್ತೆ ಕಟ್ಟಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

20211ರಲ್ಲಿ ಗಂಭೀರ ಭ್ರಷ್ಟಾಚಾರ ಆರೋಪದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ  ಯಡಿಯೂರಪ್ಪ 2012ರಲ್ಲಿ ಕೆಜೆಪಿಯನ್ನು ಸೇರಿದ್ದರು. ಬಿಜೆಪಿಗೆ ವೋಟುಗಳನ್ನು ಕಡಿತ ಮಾಡುವಲ್ಲಿ ಕೆಜೆಪಿ ಯಶಸ್ವಿಯಾಗಿತ್ತು. 2014ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿ ಕೆಜೆಪಿಯನ್ನು ವಿಲೀನಗೊಳಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ರತ್ನಾಕರ್ ಸುದ್ದಿಗಾರರಿಗೆ ಹೇಳಿದರು.

ಬಿಜೆಪಿ ಕೇಂದ್ರಿಯ ನಾಯಕರು ಮತ್ತೆ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದ್ದಾರೆ. ಅವರನ್ನು ಮತ್ತೆ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಅವರ ಕೇಂದ್ರದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಯಡಿಯೂರಪ್ಪ ಮತ್ತೆ ಕೆಜೆಪಿಗೆ ಸೇರ್ಪಡೆಯಾಗಲಿದ್ದು, ಬಸವರಾಜ ಬೊಮ್ಮಾಯಿ ಶೀಘ್ರದಲ್ಲಿಯೇ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

SCROLL FOR NEXT