ರಾಜಕೀಯ

'ಇಂಡಿಯಾ ಎಂದರೆ ಇಂದಿರಾ: ಕಾಂಗ್ರೆಸ್ ಭಜನಾ ಮಂಡಳಿ ಘೋಷಿಸಿದಾಗಲೇ ಸಂವಿಧಾನದ ಆಶಯ ಮುಕ್ಕಾಗಿ ಹೋಯಿತು'

Shilpa D

ಬೆಂಗಳೂರು: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಈಗ "ಸಂವಿಧಾನ ದಿನಾಚರಣೆ"ಯನ್ನು ಪ್ರತಿ ವರ್ಷ ಆಚರಿಸುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಬಂಧ ಟ್ವೀಟ್  ಸಂವಿಧಾನ ದಿನಾಚರಣೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ ತಮಗಿರುವ ಸಂವಿಧಾನ ವಿರೋಧಿ ಭಾವನೆಯನ್ನು ಜಗಜ್ಜಾಹೀರುಗೊಳಿಸಿದೆ ಸಂವಿಧಾನ ವಿರೋಧಿ ಕಾಂಗ್ರೆಸ್‌ ಎಂದು ಲೇವಡಿ ಮಾಡಿದೆ.

ತಮ್ಮ ಅಧಿಕಾರಕ್ಕೆ ಸಂಚಕಾರ ಬರುತ್ತದೆ ಎಂಬ ಕಾರಣಕ್ಕೆ ಸಂಸತ್ತು, ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆಯನ್ನು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿಕೆ ಮೂಲಕ ತಮ್ಮ‌ ಕಪಿ ಮುಷ್ಠಿಯಲ್ಲಿ ಬಂಧಿಸಿದ್ದರು. ದೇಶದ ಸಂವಿಧಾನದ‌ ಮೇಲೆ ನಡೆದ ಅತಿ ದೊಡ್ಡ ಹಲ್ಲೆ ಎಂದರೆ ತುರ್ತು ಪರಿಸ್ಥಿತಿ ಹೇರಿಕೆ ಎಂದು ಟೀಕಿಸಿದೆ.

ತುರ್ತು ಪರಿಸ್ಥಿತಿಯ ಮೂಲಕ ಸಂವಿಧಾನಕ್ಕೆ  ನಕಲಿ ಗಾಂಧಿ ಕುಟುಂಬ ಅವಮಾನ ಮಾಡಿತ್ತು.  ಹಾಗಾದರೆ ಯಾರು ಸಂವಿಧಾನ ವಿರೋಧಿ?  ಯಾರು ಅಂಬೇಡ್ಕರ್‌ ವಿರೋಧಿ?  ಅಂಬೇಡ್ಕರ್‌ ರಚಿತ ಸಂವಿಧಾನವನ್ನು ಕತ್ತಲ ಕೋಣೆಯಲ್ಲಿಟ್ಟಿದ್ದು ಯಾರು? ಉತ್ತರ ಒಂದೇ, ಕಾಂಗ್ರೆಸ್‌, ಕಾಂಗ್ರೆಸ್‌, ಕಾಂಗ್ರೆಸ್ ಎಂದು ಹೇಳಿದೆ.

ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ ಎಂದು ಕಾಂಗ್ರೆಸ್ ಭಜನಾ ಮಂಡಳಿ ಘೋಷಣೆ ಮೊಳಗಿಸಿದಾಗಲೇ ಸಂವಿಧಾನದ ಆಶಯ ಮುಕ್ಕಾಗಿ ಹೋಯಿತು. ಈಗ ಕಾಂಗ್ರೆಸ್ ಅಧಿಕಾರ, ಜನರ ವಿಶ್ವಾಸಗಳನ್ನೆರಡನ್ನೂ ಕಳೆದುಕೊಂಡಿದೆ. ಆದರೂ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದ  ಸಂವಿಧಾನ ವಿರೋಧಿ ಕಾಂಗ್ರೆಸ್‌ ಸಂವಿಧಾನ ದಿನಾಚರಣೆಯನ್ನು ವಿರೋಧಿಸಿದೆ.

SCROLL FOR NEXT