ಸಂದೇಶ್ ನಾಗರಾಜ್ ಮತ್ತು ಕಾಂತರಾಜ್ 
ರಾಜಕೀಯ

ಜೆಡಿಎಸ್  'ಬಂಧ' ಕಳಚಿಕೊಳ್ಳುತ್ತಿರುವ ಹಿರಿ ತಲೆಗಳು! ಹೋಗೊರೆಲ್ಲಾ ಹೋಗಲಿ, ನಮ್ಮಲ್ಲಿ ಬದಲಿ ನಾಯಕರಿದ್ದಾರೆ: ಎಚ್ ಡಿಕೆ ಕಿಡಿ

ನಾಲ್ಕು ದಿನಗಳ ಜನತಾ ಪರ್ವ 1.0 ಕಾರ್ಯಾಗಾರದಿಂದ ಪ್ರಾರಂಭಿಸಿ, ಪಕ್ಷದ ಪುನರುಜ್ಜೀವನಕ್ಕಾಗಿ ಜೆಡಿಎಸ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ, ಇದೇ ವೇಳೆ ಹಲವು ಹಿರಿಯ ನಾಯಕರು ಪಕ್ಷ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ. 

ಬೆಂಗಳೂರು: ನಾಲ್ಕು ದಿನಗಳ ಜನತಾ ಪರ್ವ 1.0 ಕಾರ್ಯಾಗಾರದಿಂದ ಪ್ರಾರಂಭಿಸಿ, ಪಕ್ಷದ ಪುನರುಜ್ಜೀವನಕ್ಕಾಗಿ ಜೆಡಿಎಸ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ, ಇದೇ ವೇಳೆ ಹಲವು ಹಿರಿಯ ನಾಯಕರು ಪಕ್ಷ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ. 

ಹಲವರು ಪಕ್ಷ ತೊರೆಯಲು ಮುಂದಾಗಿರುವುದಕ್ಕೆ ತಲೆ ಕೆಡಿಸಿಕೊಳ್ಳದ ಜೆಡಿಎಸ್ ಹೊಸ ನಾಯಕರ ಮುಂದಾಳತ್ವದಲ್ಲಿ ಹೋಗುವ ವಿಶ್ವಾಸದಲ್ಲಿದೆ, ತುಮಕೂರು, ಕೋಲಾರ ಮತ್ತು ಮೈಸೂರು ಶಾಸಕರು ಜೆಡಿಎಸ್ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ,

ಜನವರಿ ಮೊದಲ ವಾರದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳಿಂದ 25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆಗೆ ಮುಂಚಿತವಾಗಿ ಜೆಡಿಎಸ್ ನ ಇಬ್ಬರು ಹಾಲಿ ಕೌನ್ಸಿಲ್ ಸದಸ್ಯರು ಹೊರಹೋಗುವ ಸಾಧ್ಯತೆಯಿದೆ.

ನಾನು ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಂದೇಶ್ ನಾಗರಾಜ್ ಹೇಳಿದ್ದು, ಅವರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ. ಮತ್ತೊಬ್ಬ ಜೆಡಿಎಸ್ ಎಂಎಲ್‌ಸಿ ಬಿಇಎಂಎಲ್ ಕಾಂತರಾಜ್, ನಾನು ಅಸೆಂಬ್ಲಿಗೆ ಸ್ಪರ್ಧಿಸಲು ಬಯಸಿದ್ದೆ ಮತ್ತು ತುರುವೇಕೆರೆಯಿಂದ ಕಣಕ್ಕಿಳಿಯುವಂತೆಮನವಿ ಮಾಡಿಕೊಂಡೆ, ಆದರೆ ಪಕ್ಷವು  ನನ್ನನ್ನು ಪರಿಗಣಿಸದೇ ಎಮ್‌ಟಿ ಕೃಷ್ಣಪ್ಪ ಅವರಿಗೆ ಮಣೆ ಹಾಕಿತು ಎಂದಿದ್ದಾರೆ, ಅವರು ಕೂಡ ಶೀಘ್ರದಲ್ಲೇ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ.

ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾದ ಇನ್ನಿಬ್ಬರು ಜೆಡಿಎಸ್ ಎಂಎಲ್‌ಸಿಗಳಲ್ಲಿ ಒಬ್ಬರಾದ ಸಿಆರ್ ಮನೋಹರ್ ಅವರ ಶ್ರೀಮಂತ ಕೌನ್ಸಿಲ್ ಸದಸ್ಯರಲ್ಲಿ ಒಬ್ಬರಾಗಿ ಮುಂದುವರಿಯುವ ನಿರೀಕ್ಷೆಯಿದೆ. ಮತ್ತೊಬ್ಬ ಸದಸ್ಯ ಅಪ್ಪಾಜಿ ಗೌಡ ಮಾತನಾಡಿ, ನಾನು ಎಲ್ಲಿಯೂ ಹೋಗುವುದಿಲ್ಲ, ನಾನು ಜೆಡಿಎಸ್‌ನಲ್ಲಿಯೇ ಇರುತ್ತೇನೆ ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು "ಹೈಕಮಾಂಡ್ ನನಗೆ ಏನು ನಿರ್ದೇಶನ ನೀಡುತ್ತದೆಯೋ ಅದನ್ನು ಮಾಡುತ್ತೇನೆ, ಅವರು ಬಯಸಿದರೇ ನಾನು ಖಂಡಿತ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.  ಹೋದವರ ಬದಲಿಗೆ ಪಕ್ಷದಲ್ಲಿ ಬೇರೆ ಅಭ್ಯರ್ಥಿಗಳನ್ನು ಸಿದ್ಧ ಮಾಡಿದ್ದೇವೆ ಎಂದಿದ್ದಾರೆ.

ಸಂದೇಶ್ ನಾಗರಾಜ್ ವಿಷಯಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಇದು ನನಗೆ ಹಲವು ವರ್ಷಗಳಿಂದ ತಿಳಿದಿದೆ, ಇದು ನನಗೆ ಹೊಸತಲ್ಲ, ಅವರಿಗೆ ವಯಸ್ಸಾಗಿದೆ, ಹಲವು ಆರೋಗ್ಯ ಸಮಸ್ಯೆಗಳಿವೆ, ಹೀಗಿದ್ದರೂ ಅವರನ್ನು ಎರಡು ಬಾರಿ ಕೌನ್ಸಿಲ್ ಗೆ ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ,

ಬಿಇಎಂಎಲ್ ಕಾಂತರಾಜ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರಿಗೂ ಪಕ್ಷಕ್ಕೂ ಸಂಬಂಧವಿಲ್ಲ, ನಾವು ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇವೆ, ಮೈಸೂರು, ಮಂಡ್ಯ, ಕೋಲಾರ, ತುಮಕೂರು ಮತ್ತು ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಜೆಡಿಎಸ್ ಪ್ರಬಲವಾಗಿದ್ದು 5-6 ಸೀಟು ಗೆಲ್ಲಲಿವೆ ಎಂದು ಹೇಳಿದ್ದಾರೆ. ಇಬ್ಬರು ಎಂಎಲ್ ಸಿಗಳು ಪತ್ರ ತೊರೆದರೇ ನಾವು 5-6 ಸೀಟು ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ. ಜೆಡಿಎಸ್ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಬಲವಾಗಿದೆ ಹೀಗಾಗಿ ನಾಲ್ಕು ಸೀಟು ಗೆದ್ದಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT