ರಾಜಕೀಯ

ಬಿಜೆಪಿ ಹೊರದಬ್ಬಲು ಜಾತ್ಯತೀತ ಪಕ್ಷಗಳು ಒಂದಾಗಬೇಕು: ಮಲ್ಲಿಕಾರ್ಜುನ ಖರ್ಗೆ

Nagaraja AB

ಬೆಂಗಳೂರು: ಬಿಜೆಪಿ ವೇಗಕ್ಕೆ ಬ್ರೆಕ್ ಹಾಕಲು ದೇಶ ಹಾಗೂ ರಾಜ್ಯದಲ್ಲಿ  ಜಾತ್ಯತೀತ ಪಕ್ಷಗಳು ಒಂದುಗೂಡಬೇಕು  ಎಂದು  ರಾಜ್ಯಸಭೆಯ ವಿರೋಧದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ  ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನ ಗೆದ್ದಿದೆ, ಆದರೆ ಕೇವಲ  23 ಸ್ಥಾನ ಗಳಿಸಿರುವ  ಬಿಜೆಪಿ ಅಧಿಕಾರ ಹಿಡಿಯಲು  ಸಲ್ಲದ  ಮಾರ್ಗ ಅನುಸರಿಸುತ್ತಿದೆ. ತಾವು ಖುದ್ಧಾಗಿ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಬೆಂಬಲದ ವಿಚಾರ ಮಾತನಾಡಿರುವುದಾಗಿ ಹೇಳಿದರು. 

ಜನಾಭಿಪ್ರಾಯದ ಪ್ರಕಾರ ಅಧಿಕಾರ ಹಿಡಿಯಲು ಕಾಂಗ್ರೆಸ್ ಗೆ  ಮಾತ್ರ ಅವಕಾಶವಿದೆ. ಬಿಜೆಪಿಯವರೆ  ಮೇಯರ್ ಆಗಲಿದ್ದಾರೆ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. 

ಪಾಲಿಕೆ ಚುನಾವಣೆಯಲ್ಲಿ ಹಿನ್ನಡೆಗೆ ಕಾಂಗ್ರೆಸ್​​- ಜೆಡಿಎಸ್​ ನಾಯಕರ ಶೀತಲ ಸಮರ ಕಾರಣ ಎಂಬ ವಿಚಾರವನ್ನು ಅಲ್ಲಗಳೆದ  ಖರ್ಗೆ, ನಾವು ಸಿದ್ಧಾಂತದ ಮೇಲೆ ಬಂದವರು. ಹಾಗಾಗಿಯೇ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕೈಜೋಡಿಸಿದ್ದೇವೆ, ನಮ್ಮಲ್ಲಿ ಯಾವುದೇ ಜಗಳವೂ ಇಲ್ಲ ಏನೂ ಇಲ್ಲ. ನಮ್ಮಲ್ಲಿ ಒಡಕು ಮೂಡಿಸಬೇಡಿ‌ ಎಂದರು.

SCROLL FOR NEXT