ಸಿಎಂ ಬಸವರಾಜ ಬೊಮ್ಮಾಯಿ 
ರಾಜಕೀಯ

ಇಂದು ಸಂಜೆ ಸಿಎಂ ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿ ಶಾಸಕರಿಗೆ ಭೋಜನಕೂಟ: ಕುತೂಹಲ ಕೆರಳಿಸಿದ ರಾಜಕೀಯ ನಡೆ

ಆಪರೇಷನ್ ಹಸ್ತದ ಗುಸುಗುಸು ಸುದ್ದಿ ಕೇಳಿಬರುತ್ತಿರುವುದರ ಮಧ್ಯೆ ಬುಧವಾರ ಸಾಯಂಕಾಲ ತಮ್ಮ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕರು ಮತ್ತು ಸಚಿವರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ.

ಬೆಂಗಳೂರು: ಆಪರೇಷನ್ ಹಸ್ತದ ಗುಸುಗುಸು ಸುದ್ದಿ ಕೇಳಿಬರುತ್ತಿರುವುದರ ಮಧ್ಯೆ ಬುಧವಾರ ಸಾಯಂಕಾಲ ತಮ್ಮ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕರು ಮತ್ತು ಸಚಿವರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ.

ನಿನ್ನೆ ಬೆಳಗ್ಗೆ ಶಾಸಕಾಂಗ ಸಭೆ ಏರ್ಪಡಿಸಿದ್ದ ಮುಖ್ಯಮಂತ್ರಿಗಳು ಇಂದು ಸಾಯಂಕಾಲ ಭೋಜನ ಕೂಟ ಏರ್ಪಡಿಸಿದ್ದು ಎಲ್ಲಾ ಬಿಜೆಪಿ ಶಾಸಕರುಗಳನ್ನು ಆಹ್ವಾನಿಸಿದ್ದಾರೆ. ಶಾಸಕರ ಎಲ್ಲಾ ಕೆಲಸಗಳನ್ನು ಮಾಡಿಕೊಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಸಂಜೆ 7 ಗಂಟೆಗೆ ಔತಣಕೂಟ ಏರ್ಪಡಿಸಲಾಗಿದೆ. ಔತಣಕೂಟ ನೆಪದಲ್ಲಿ ಶಾಸಕರನ್ನು ಮುಖತಃ ಭೇಟಿ ಮಾಡಿ ಅವರ ಜೊತೆ ಚರ್ಚೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯೋಚನೆಯಲ್ಲಿ ಸಿಎಂ ಇದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯ 20 ಶಾಸಕರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ಮಾತುಗಳು ಒಂದೆಡೆ ಕೇಳಿಬರುತ್ತಿದೆ. ಶಾಸಕರ ಕ್ಷೇತ್ರಗಳಲ್ಲಿ ಕೆಲಸಗಳು ಆಗುತ್ತಿಲ್ಲ, ಸರ್ಕಾರದಿಂದ ಸರಿಯಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ, ಪಕ್ಷದಲ್ಲಿ, ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ, ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮಾಯಿಯವರ ನಾಯಕತ್ವ, ಯಡಿಯೂರಪ್ಪನವರ ನಾಯಕತ್ವ ಕಡೆಗಣನೆ ಹೀಗೆ ಹತ್ತು ಹಲವು ಅಸಮಾಧಾನ, ಸಮಸ್ಯೆಗಳು ಬಿಜೆಪಿ ಶಾಸಕರನ್ನು ಕಾಡುತ್ತಿರುವಾಗ ಇಂದಿನ ಸಿಎಂ ಬೊಮ್ಮಾಯಿ ಅವರ ಭೋಜನಕೂಟ ಮಹತ್ವ ಪಡೆದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ರಾಮ ಮಂದಿರ ಟ್ರಸ್ಟ್‌ CEO ಹುದ್ದೆಗೆ ಬರೋಬ್ಬರಿ 5,200 ಅರ್ಜಿ; ಸಂದರ್ಶನಕ್ಕೆ ಕೇವಲ 20 ಅಭ್ಯರ್ಥಿಗಳು ಆಯ್ಕೆ!

ಬೆಂಗಳೂರು: ತಾಜ್‌ ಹೋಟೆಲ್‌ನಲ್ಲಿ ಘೋರ ಕೃತ್ಯ; ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆಗೈದು ತಂದೆ ಆತ್ಮಹತ್ಯೆಗೆ ಯತ್ನ!

17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತಬ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ

Video: ಬಿಡದಿ ಟೌನ್‌ಶಿಪ್; ಮಧು ಬಂಗಾರಪ್ಪ ಜೊತೆ ಪಿಸುಮಾತು ವಿವಾದ; ಬಿ.ವೈ ವಿಜಯೇಂದ್ರ ಸ್ಪಷ್ಟನೆ