ರಾಜಕೀಯ

ಕಮಿಷನ್ ರೂಪದಲ್ಲಿ ಹೆಣ್ಣು, ಹಣ; ಬಿಜೆಪಿ ಆಡಳಿತದಲ್ಲಿ ‘ಮಂಚ’ವೂ ಲಂಚದ ರೂಪ ಪಡೆದಿದೆ: ಕಾಂಗ್ರೆಸ್

Lingaraj Badiger

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಲಂಚ-ಮಂಚದ ಸರ್ಕಾರ ಎಂದು ಪ್ರತಿಪಕ್ಷ ಕಾಂಗ್ರೆಸ್ ಗುರುವಾರ ಕಟುವಾಗಿ ಟೀಕೆ ಮಾಡಿದೆ.

ಈ ಕುರಿತು  @BJP4Karnataka ಎಂಬ ಟ್ಯಾಗಿನೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರದ ಕಮಿಷನ್ ಭ್ರಷ್ಟಾಚಾರದ ವಿರಾಟ್ ರೂಪದಲ್ಲಿ ಹೆಣ್ಣು, ಹಣ, ಹೆಂಡಗಳೂ ಸ್ಥಾನ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಶಾಸಕರ ಖರೀದಿ, ಸಿಡಿಗಳ ಮೂಲಕವೇ ಅಧಿಕಾರಕ್ಕೆ ಬಂದ ಬಿಜೆಪಿಯದ್ದು “ಲಂಚ-ಮಂಚದ ಸರ್ಕಾರ” ಎನ್ನವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ಆಡಳಿತದಲ್ಲಿ ‘ಮಂಚ’ವೂ ಲಂಚದ ರೂಪ ಪಡೆದಿದೆ ಎಂದು ಆಪಾದಿಸಿದೆ.

ಗುತ್ತಿಗೆದಾರರಷ್ಟೇ ಅಲ್ಲ, ಬಡ ಪೌರ ಕಾರ್ಮಿಕರೂ ಸಹ ರಾಜ್ಯ ಸರ್ಕಾರದ ಕಮಿಷನ್ ದಾಹದ ಬಲಿಪಶುಗಳಾಗಿದ್ದಾರೆ. 
ಒಂದೆಡೆ ಸಾಲು ಸಾಲು ನೇಮಕಾತಿ ಅಕ್ರಮಗಳು, ಮತ್ತೊಂದೆಡೆ ವ್ಯವಸ್ಥೆಯ ಎಲ್ಲಾ ಸ್ಥರಗಳಲ್ಲೂ ಕಮಿಷನ್ ಲೂಟಿ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.

ಇನ್ನೊಮ್ಮೆ ಅಧಿಕಾರ ಸಿಗದು, ಈಗಲೇ ಸಾಧ್ಯವಾದಷ್ಟು ಬಾಚಿಕೊಳ್ಳೋಣ ಎಂಬ ಹಪಹಪಿತನವೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.

SCROLL FOR NEXT