ರಾಜಕೀಯ

ಹನುಮ ಮಾಲಾಧಾರಣೆ ಮಾಡಿದ ಮಾಜಿ ಸಚಿವ ಜನಾರ್ಧನ ರೆಡ್ಡಿ: ರಾಜಕೀಯ ಬದುಕಿನ ಎರಡನೇ ಅಧ್ಯಾಯ ಆರಂಭಿಸಲು ನಿರ್ಧಾರ?

Manjula VN

ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಅವರು ಹನುಮ ಮಲಾಧಾರಣೆ ಮಾಡಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಈ ಬೆಳವಣಿಗೆಯು ರೆಡ್ಡಿ ತಮ್ಮ ರಾಜಕೀಯ ಬದುಕಿನ ಎರಡನೇ ಅಧ್ಯಾಯ ಆರಂಭಿಸುತ್ತಿದ್ದಾರೆಂಬ ವದಂತಿಗಳನ್ನು ಹುಟ್ಟುಹಾಕಿದೆ.

ಕೊಪ್ಪಳದ ಗಂಗಾವತಿ ಬಳಿಯ ಅಂಜನಾದ್ರಿ ಬಳಿಯ ಪಂಪಾ ಸರೋವರದಲ್ಲಿ ಹನುಮ‌ ಮಾಲಾಧಾರಣೆ ಮಾಡಿದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು, ಕೇಸರಿ ವಸ್ತ್ರ ತೊಟ್ಟು ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಅಲ್ಲದೇ ಪಂಪಾ ಸರೋವರದ ಬಳಿ ಬೆಳಿಗ್ಗೆ ವಿಶೇಷ ಪೂಜೆಯ ನಂತರ ಹನುಮಮಾಲಾಧಾರಣೆ ಕೈಗೊಂಡರು. ಬಳಿಕ ಹನುಮ ಮಾಲಾಧಾಯಿಗಳ ಬೃಹತ್ ಯಾತ್ರೆಯಲ್ಲಿ ಭಾಗಿಯಾಗಿದರು.

ಈ ನಡುವೆ ಹಲವು ವರ್ಷಗಳಿಂದ ಸಕ್ರೀಯ ರಾಜಕಾರಣದಿಂದ ದೂರ ಉಳಿದಿದ್ದ ಜನಾರ್ಧನ ರೆಡ್ಡಿ ಅವರು,  ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಲಿದ್ದಾರೆ ಎನ್ನುವ ಮಾತುಗಳೂ ಕೇಳಿ ಬಂದಿವ.

ಮುಂಬರುವ ವಿಧಾನಸಭಾ ಚುನಾವಣೆ ವೇಳೆ ರಾಜ್ಯ ರಾಜಕಾರಣದಲ್ಲಿ ತಮ್ಮ ಸಾಮರ್ಥ್ಯ ತೋರಿಸಲೇ ಬೇಕು ಎಂದು ಜಿದ್ದಿಗೆ ಬಿದ್ದಿರುವ ರೆಡ್ಡಿಯವರು, ಬಿಜೆಪಿಯಲ್ಲೇ ಮುಂದುವರೀತಾರಾ ಅಥವಾ ಸ್ವಂತ ಪ್ರಾದೇಶಿಕ ಪಕ್ಷ ಸ್ಥಾಪನೆ‌ ಮಾಡುತ್ತಾರ ಎಂಬುದು ಹಲವರಲ್ಲಿ ಕುತೂಹಲ ಕೆರಳಿಸಿದೆ.

ಹನುಮ ಮಾಲಾಧಾರಣೆ ಕಾರ್ಯಕ್ರಮದಲ್ಲಿ ಜನಾರ್ಧನ್ ರೆಡ್ಡಿಯವರಿಗೆ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.

SCROLL FOR NEXT