ರಾಜಕೀಯ

ಮಹಾತ್ಮ ಗಾಂಧಿ ಮಹಾನ್ ವ್ಯಕ್ತಿ,  ನನ್ನನ್ನು ಅವರ ಜೊತೆಗೆ ಹೋಲಿಕೆ ಮಾಡಬೇಡಿ: ಕಾಂಗ್ರೆಸ್ ನಾಯಕರಿಗೆ ರಾಹುಲ್ ಖಡಕ್ ಸೂಚನೆ

Shilpa D

ಜೈಪುರ: ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ನಡೆಸುತ್ತಿರುವ ಸಂಸದ ರಾಹುಲ್ ಗಾಂಧಿ, ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಮಹತ್ವದ ಸಂದೇಶವನ್ನು ನೀಡಿದ್ದಾರೆ. ತಮ್ಮನ್ನು ಮಹಾತ್ಮ ಗಾಂಧಿಗೆ ಹೋಲಿಸಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ.

ಭಾರತ್ ಜೋಡೋ ಯಾತ್ರೆಯು ಪ್ರಸ್ತುತ ರಾಜಸ್ಥಾನದ ಮೂಲಕ ಹಾದುಹೋಗುತ್ತಿದ್ದು ಇನ್ನು ಮುಂದೆ ಸಹಾನುಭೂತಿ ಅಥವಾ ಹಿಂದಿನ ಸಮ್ಮಾನಗಳನ್ನು ಆಧರಿಸಿ ತಾನು ವಿಶ್ರಾಂತಿ ಪಡೆಯುವುದಿಲ್ಲ ರಾಹುಲ್ ಹೇಳಿದ್ದಾರೆ.

ಇದೇ ವೇಳೆ ತನ್ನನ್ನು ಮಹಾತ್ಮ ಗಾಂಧಿಗೆ ಹೋಲಿಸಬೇಡಿ ಎಂದು ಅವರು ಹೇಳಿದ್ದಾರೆ. ಇದು ಸಂಪೂರ್ಣವಾಗಿ ತಪ್ಪು, ನಾವು ಒಂದೇ ರೀತಿಯಲ್ಲಿ ಇಲ್ಲ. ಹೋಲಿಕೆ ಮಾಡಬಾರದು. ಅವರು ಒಬ್ಬ ಮಹಾನ್ ವ್ಯಕ್ತಿ, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು, 10-12 ವರ್ಷಗಳ ಕಾಲ ಜೈಲಿನಲ್ಲಿ ಇದ್ದರು, ಅವರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ.

ಯಾರಿಗೂ ಅವರಂತೆ ಆಗಲು ಸಾಧ್ಯವಿಲ್ಲ. ನನ್ನ ಹೆಸರನ್ನು ಅವರ ಜೊತೆಗೆ ಹೋಲಿಸಬಾರದು ಎಂದಿದ್ದಾರೆ ರಾಹುಲ್. ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಏನು ಮಾಡಿದರು, ಅವರು ಹುತಾತ್ಮರಾದರು. ಅವರು ಚೆನ್ನಾಗಿ ಕೆಲಸ ಮಾಡಿದ್ದರು. ಆದರೆ ಕಾಂಗ್ರೆಸ್ ಪ್ರತಿ ಸಭೆಯಲ್ಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು.

ಇಂದಿರಾಗಾಂಧಿ, ರಾಜೀವ್ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ, ಅವರು ಎಲ್ಲವನ್ನೂ ಮಾಡಿದರು. ಅವರು ತಮ್ಮ ಪಾಲನ್ನು ಮಾಡಿದ್ದಾರೆ. ನಾವು ಏನು ಮಾಡಲಿದ್ದೇವೆ ಎಂಬುದರ ಮೇಲೆ ನಾವು ಗಮನಹರಿಸಬೇಕು. ನಾವು ಜನರಿಗೆ ಏನು ಮಾಡುತ್ತಿದ್ದೇವೆ ಎಂಬುದರ ಕುರಿತು ಯೋಚಿಸುವುದು ಉತ್ತಮ ಎಂದು ರಾಹುಲ್ ಹೇಳಿದ್ದಾರೆ.

SCROLL FOR NEXT