ಸಿದ್ದರಾಮಯ್ಯ 
ರಾಜಕೀಯ

ಚಾಮುಂಡೇಶ್ವರಿ ಕೈಹಿಡಿಯಲಿಲ್ಲ, ಬದಾಮಿಯಲ್ಲಿ ಬನಶಂಕರಿಯ ಶಾಪ; ಪಾಪದ ಕೊಡ ತುಂಬಿದೆ, ಸವದತ್ತಿ ಎಲ್ಲಮ್ಮನೂ ಕಾಪಾಡಲಾರಳು!

ಚಾಮುಂಡೇಶ್ವರಿಯಲ್ಲಿ ದೇವಿ ಕೈಹಿಡಿಯಲಿಲ್ಲ, ಬದಾಮಿಯಲ್ಲೂ ಬನಶಂಕರಿಯ ಶಾಪ, ಸವದತ್ತಿ ಎಲ್ಲಮ್ಮನೂ ನಿಮ್ಮನ್ನು ಕಾಪಾಡಲಾರಳು ಸಿದ್ದರಾಮಯ್ಯರ ಪಾಪದ ಕೊಡ ತುಂಬಿದೆ!

ಬೆಂಗಳೂರು: ಆ ಧರ್ಮರಾಯನ ಹಿಂದೆಯೇ ಯಾರೂ ಬರಲಿಲ್ಲ, ನಿಮ್ಮಂತಹ ಅಧರ್ಮರಾಯನ ಹಿಂದೆ ಯಾರು ತಾನೇ ನಿಲ್ಲಬಲ್ಲರು, ನಿಮ್ಮ ಉತ್ಸವ ನಾಲ್ಕು ಕುರ್ಚಿಗಳನ್ನು ತುಂಬಬಹುದೇ ಹೊರತು, ನಾಲ್ಕು ಸೀಟುಗಳನ್ನು ಗಳಿಸಿ ಕೊಡದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಚಾಮುಂಡೇಶ್ವರಿಯಲ್ಲಿ ದೇವಿ ಕೈಹಿಡಿಯಲಿಲ್ಲ, ಬದಾಮಿಯಲ್ಲೂ ಬನಶಂಕರಿಯ ಶಾಪ, ಸವದತ್ತಿ ಎಲ್ಲಮ್ಮನೂ ನಿಮ್ಮನ್ನು ಕಾಪಾಡಲಾರಳು ಸಿದ್ದರಾಮಯ್ಯರ ಪಾಪದ ಕೊಡ ತುಂಬಿದೆ! ಸಿದ್ದರಾಮಯ್ಯನವರೇ, ಮೂಲ ಕಾಂಗ್ರೆಸ್ಸಿಗರು ನಿಮ್ಮಿಂದಾಗಿಯೇ ಪಕ್ಷ ತೊರೆಯುತ್ತಿರುವುದು ನಿಜವಲ್ಲವೇ? ಎಂದು ಪ್ರಶ್ನಿಸಿದೆ.

ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಮತ್ತಷ್ಟು  ಖಾಲಿಯಾಗಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಸಿದ್ದರಾಮಯ್ಯ ನಾಂದಿ ಹಾಡುತ್ತಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಹೆಸರು ಘೋಷಿಸದೇ ಇದ್ದಲ್ಲಿ, ಆರು ಪಕ್ಷ ಬಿಟ್ಟು ಬಂದಿರುವ ಸಿದ್ದರಾಮಯ್ಯ ಅವರಿಗೆ ಏಳನೇ ಬಾರಿ ಪಕ್ಷಾಂತರ ಮಾಡುವುದು ಕಷ್ಟವೇ?

ಆ ಭಾಗ್ಯ, ಈ ಭಾಗ್ಯ ಎಂದು ಘೋಷಣೆ ಮಾಡಿದ್ದೇ ಬಂತು, ಜನಪ್ರಿಯತೆ, ಪ್ರಚಾರಕ್ಕಾಗಿ ಮಾಡಿದ ಯಾವ ಕಾರ್ಯವೂ ಈಗ ಸಿದ್ದರಾಮಯ್ಯ ಸಹಾಯಕ್ಕೆ ಬರುತ್ತಿಲ್ಲ. ಹಲವು ಬಿಟ್ಟಿ ಭಾಗ್ಯ ನೀಡಿದ ಸಿದ್ದರಾಮಯ್ಯಗೆ ಈಗ ಕ್ಷೇತ್ರ ಭಾಗ್ಯದ ಫಲಾನುಭವಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿದೆಯೇ?

ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳಲು ತನ್ನದೇ ಪಟಾಲಂ ಜೊತೆಗೂಡಿ ವ್ಯಕ್ತಿ ಪೂಜೋತ್ಸವ ಮಾಡಿದರೆ ಅದನ್ನು ಶಕ್ತಿ ಪ್ರದರ್ಶನ ಎನ್ನುವುದಿಲ್ಲ, ಅದು ಉತ್ತರಕುಮಾರನ ಪೌರುಷ ಅಷ್ಟೇ. ತಾಕತ್ತು ಅನ್ನುವುದಿದ್ದರೆ ಈಗಲೇ ಡಿಕೆಶಿ ವಿರುದ್ಧ ಸೆಟೆದು ನಿಲ್ಲಿ, ರಾಜಕೀಯ ಸಂದಿಗ್ಧತೆ ತಂದಿಡುವುದು ಸಾಮರ್ಥ್ಯವೇ? ತಳಹದಿಯಿಲ್ಲದೆ ಮಹಡಿ ಮನೆ ಕಟ್ಟಲು ಸಿದ್ದರಾಮಯ್ಯ ಹೊರಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಸಿಗಲಾರದ ಪರಿಸ್ಥಿತಿ ಯಾವ ನಾಯಕರಿಗೂ ಬರಬಾರದು. ಸಿದ್ದರಾಮಯ್ಯನವರೇ, ಇದಕ್ಕಾಗಿ ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT