ರಾಜಕೀಯ

ಕರ್ನಾಟಕ ವಿಧಾನಸಭೆ ಚುನಾವಣೆ: ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲು ಕಾಂಗ್ರೆಸ್ ನಿರ್ಧಾರ

Shilpa D

ಬೆಂಗಳೂರು: ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಸ್ಥಳೀಯ ಮತ್ತು ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆಗಳೊಂದಿಗೆ ಕಾಂಗ್ರೆಸ್ ನಾಯಕರು ಸ್ಪೇಡ್ ವರ್ಕ್ ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

225 ಬಲದ ವಿಧಾನಸಭೆಯಲ್ಲಿ 69 ಶಾಸಕರನ್ನು ಹೊಂದಿರುವ ಕಾಂಗ್ರೆಸ್ 150 ಸ್ಥಾನಗಳ ಗುರಿಯನ್ನು ಹೊಂದಿದೆ.  ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ  ಖಾಸಗಿ ಏಜೆನ್ಸಿಗಳ ಮೂಲಕ ಪ್ರತ್ಯೇಕ ಸ್ಥಳೀಯ ಸಮೀಕ್ಷೆಗೆ  ಸಿದ್ದರಾಗಿದ್ದಾರೆ.  ಶಾಸಕರು ಮತ್ತು ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲು ಸೂಚಿಸಲಾಗಿದೆ. ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಸಿದ್ದರಾಮೋತ್ಸವ ಆಚರಿಸಲು ಸಜ್ಜಾಗುತ್ತಿದ್ದಾರೆ.

ಒಂದು ಸಮೀಕ್ಷೆಯು ಕಾಂಗ್ರೆಸ್ಸೇತರ ಕ್ಷೇತ್ರಗಳನ್ನು ಒಳಗೊಂಡಿದೆ. ಅವರು ಕಾಂಗ್ರೆಸ್ ಶಾಸಕರ ಕ್ಷೇತ್ರಗಳು ಮತ್ತು ಪಕ್ಷದ ಪ್ರಬಲ ಅಭ್ಯರ್ಥಿಯನ್ನು ಹೊಂದಿರುವ ಕ್ಷೇತ್ರಗಳ ಸಮೀಕ್ಷೆಯನ್ನು ಸಹ ಯೋಜಿಸುತ್ತಿದ್ದಾರೆ. ಇದರ ಜೊತೆಗೆ ಜನಸಂಖ್ಯಾ ಆಧರಿಸಿ ಬೂತ್‌ವಾರು ಮತ್ತು ಜಾತಿವಾರು ಸಮೀಕ್ಷೆ, ಅಭ್ಯರ್ಥಿಗಳನ್ನು ಗೆಲ್ಲಲು ಸಹಾಯ ಮಾಡುವ ಇತರ ಸಮಸ್ಯೆಗಳನ್ನು ನಿರ್ಣಯಿಸಲಾಗುತ್ತದೆ.

ಚುನಾವಣೆಯು ಇತ್ತೀಚಿನ ವರ್ಷಗಳಲ್ಲಿ ಬದಲಾಗಿದೆ. ತಳ ಮಟ್ಟದಲ್ಲಿ ಏನಾಗುತ್ತಿದೆ ಎಂಬುದರ ಕುರಿತು ನಾವು ಅಪ್‌ಡೇಟ್ ಆಗಿರಬೇಕು ಮತ್ತು ಅದಕ್ಕೆ ಅನುಗುಣವಾಗಿ ಸಮೀಕ್ಷೆಗಳನ್ನು ನಡೆಸಲಾಗುವುದು. ಹಾಲಿ ಶಾಸಕರು ಸೇರಿದಂತೆ ಅಭ್ಯರ್ಥಿಗಳಿಗೆ ಏಜೆನ್ಸಿಗಳ ಮೂಲಕ ಅಧ್ಯಯನ ಮಾಡಲು ನಾವು ಪತ್ರ ಬರೆದಿದ್ದೇವೆ. ಇದಕ್ಕೆ 35 ಕ್ಕೂ ಹೆಚ್ಚು ಶಾಸಕರು ಮತ್ತು ಅಭ್ಯರ್ಥಿಗಳು ಒಪ್ಪಿಗೆ ನೀಡಿದ್ದಾರೆ.

ಇದು ಪೂರ್ಣಗೊಳ್ಳಲು ಮೂರು ತಿಂಗಳು ತೆಗೆದುಕೊಳ್ಳುತ್ತದೆ ಮತ್ತು ಅದರ ಆಧಾರದ ಮೇಲೆ, ನಾವು ಚುನಾವಣೆಗೆ ನಮ್ಮನ್ನು ಸಜ್ಜುಗೊಳಿಸಬಹುದು ಎಂದು ಹೆಸರು ಹೇಳಲು ಇಚ್ಚಿಸದ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ, ಅಂತಹ ಸಮೀಕ್ಷೆಗಳನ್ನು ನಡೆಸುವ ಕೆಲವು ವಿಶ್ವಾಸಾರ್ಹ ಏಜೆನ್ಸಿಗಳಿವೆ, ಅವುಗಳಿಗೆ ಆಯ್ಕೆ ಮಾಡಲು ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಾಗುವುದು ಎಂದು ನಾಯಕರೊಬ್ಬರು ಹೇಳಿದರು.

SCROLL FOR NEXT