ಸಿದ್ದರಾಮಯ್ಯ 
ರಾಜಕೀಯ

ಒಮ್ಮೆ ದಕ್ಷಿಣ, ಮತ್ತೊಮ್ಮೆ ಉತ್ತರ! ಗೋಲು ಹೊಡೆಯಲಾರಿರಿ, ಗುರಿಯ ಮುಟ್ಟಲಾರಿರಿ, ನಿವೃತ್ತಿ ಘೋಷಣೆ ಮಾಡಬಾರದೇಕೆ?

ಓಲೈಕೆಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಮಾಸ್ಟರ್‌ ಡಿಗ್ರಿ ಪಡೆದಿದ್ದಾರೆ. ಎಷ್ಟು ಓಲೈಕೆ ಮಾಡಿದರೇನು ಫಲ, ಸಿದ್ದರಾಮಯ್ಯ ಅಲೆಯೂ ಇಲ್ಲ, ಒಂದು ಗಟ್ಟಿಯಾದ ನೆಲೆಯೂ ಇಲ್ಲ! ಎಂದು ಬಿಜೆಪಿ ಲೇವಡಿ ಮಾಡಿದೆ.

ಬೆಂಗಳೂರು: 2023 ರ ವಿಧಾನಸಭೆ ಚುನಾವಣೆಗೆ ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಓಲೈಕೆಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಮಾಸ್ಟರ್‌ ಡಿಗ್ರಿ ಪಡೆದಿದ್ದಾರೆ. ಎಷ್ಟು ಓಲೈಕೆ ಮಾಡಿದರೇನು ಫಲ, ಸಿದ್ದರಾಮಯ್ಯ ಅಲೆಯೂ ಇಲ್ಲ, ಒಂದು ಗಟ್ಟಿಯಾದ ನೆಲೆಯೂ ಇಲ್ಲ! ಎಂದು ಬಿಜೆಪಿ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಬಾದಾಮಿ ಕ್ಷೇತ್ರಕ್ಕೆ ಹೋಗಿ ಬರಲು ವಯಸ್ಸಿನ ಸಮಸ್ಯೆ ಕಾಡುತ್ತದೆ. ಆದರೆ ಮುಖ್ಯಮಂತ್ರಿಯಾಗಲು ಯಾವುದೇ ಸಮಸ್ಯೆ ಕಾಡುವುದಿಲ್ಲ! ವಿಪರ್ಯಾಸವಲ್ಲದೆ ಮತ್ತೇನು? ಸಿದ್ದು ಟೂರಿಂಗ್‌ ಟಾಕೀಸ್ ಎಂದು ಕಾಲೆಳೆದಿದೆ.

ಸಿದ್ದರಾಮಯ್ಯ ಸರ್ಕಾರಿ ನೌಕರರಲ್ಲ, ಆದರೂ ವರ್ಗಾವಣೆಯಾಗುತ್ತಲೇ ಇದ್ದಾರೆ. ಅಧಿಕಾರದ ಮೋಹಕ್ಕಾಗಿ, ಸುರಕ್ಷಿತ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಅವರೇ, ಸ್ಪರ್ಧಿಸಲು ಒಂದು ಕ್ಷೇತ್ರ ಸಿಗುತ್ತಿಲ್ಲವೆಂದಾದರೇ ನಿಮ್ಮನ್ನು ಜನರು ತಿರಸ್ಕರಿಸಿದ್ದಾರೆ ಎಂದರ್ಥವಲ್ಲವೇ? ಎಂದು ಪ್ರಶ್ನಿಸಿದೆ.

ಪ್ರತಿ ಬಾರಿಯೂ ಸಿದ್ದರಾಮಯ್ಯ  ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುವುದರ ಅರ್ಥವೇ ಬೇರೆಯಿದೆ. ಒಮ್ಮೆ ವರುಣ, ಮತ್ತೊಮ್ಮೆ ಚಾಮುಂಡೇಶ್ವರಿ, ಮಗದೊಮ್ಮೆ ಬಾದಾಮಿ ಈ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಕೊನೆಯ ಚುನಾವಣೆ ಎಂಬ ಅರ್ಥದಲ್ಲಿ ಸಿದ್ದರಾಮಯ್ಯ ಹೇಳುತ್ತಿರುವುದು, ರಾಜಕೀಯ ನಿವೃತ್ತಿಯ ಕೊನೆಯ ಚುನಾವಣೆಯೆಂದಲ್ಲ!

ಒಮ್ಮೆ ದಕ್ಷಿಣ, ಮತ್ತೊಮ್ಮೆ ಉತ್ತರ! ಮುಂದಿನ ಚುನಾವಣೆಗೆ ಸುರಕ್ಷಿತ ಕ್ಷೇತ್ರ ಹುಡುಕುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮದು ರಾಜಕೀಯ ಆಟವೋ ಅಥವಾ ಫುಟ್ಬಾಲ್ ಆಟವೊ? ಗೋಲು ಹೊಡೆಯಲಾರಿರಿ, ಗುರಿಯ ಮುಟ್ಟಲಾರಿರಿ, ನಿವೃತ್ತಿ ಘೋಷಣೆ ಮಾಡಬಾರದೇಕೆ? ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ ಕಾರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?