ಭವಾನಿ, ಪ್ರಜ್ವಲ್ ಮತ್ತು ಪ್ರೀತಂ ಗೌಡ 
ರಾಜಕೀಯ

ಅನಿತಕ್ಕ ಸುಸಂಸ್ಕೃತೆ: ಭವಾನಿ ಸಂಸ್ಕಾರವಿಲ್ಲದ ಮಹಿಳೆ; ಅಮ್ಮ-ಮಗ ರಾತ್ರಿಯೆಲ್ಲಾ ಫುಲ್ ಟೈಟ್, ಬೆಳಗ್ಗೆ ನಶೆಯಲ್ಲಿ ಮಾತು; ದೊಡ್ಡಗೌಡರ ಸೊಸೆಗೆ 'ಪ್ರೀತಂ' ಟಾಂಗ್

ಬಿಬಿಎಂಪಿಯಲ್ಲಿ ಏನಾದರೂ ನಮ್ ತಂದೆ ಕೆಲಸ ಮಾಡಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಶಾಸಕ ಪ್ರೀತಂ ಗೌಡ ಅವರು ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್​ ರೇವಣ್ಣ ಅವರಿಗೆ ಸವಾಲು ಹಾಕಿದ್ದಾರೆ.

ಹಾಸನ: ಬಿಬಿಎಂಪಿಯಲ್ಲಿ ಏನಾದರೂ ನಮ್ ತಂದೆ ಕೆಲಸ ಮಾಡಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಶಾಸಕ ಪ್ರೀತಂ ಗೌಡ ಅವರು ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್​ ರೇವಣ್ಣ ಅವರಿಗೆ ಸವಾಲು ಹಾಕಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯವರು ತಮ್ಮ ಇಡೀ ವೃತ್ತಿ ಜೀವನದಲ್ಲಿ ಒಂದೇ ಒಂದು ದಿನ ಬಿಬಿಎಂಪಿ ಕೆಲಸ ಮಾಡಿದ್ರೆ, ಅವರು ಶಿಫಾರಸು ಮಾಡಿದ್ದನ್ನು ತೋರಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ನಾನು ಏಕೆ 5ನೇ ಕ್ಲಾಸ್, 7ನೇ ಕ್ಲಾಸ್ ಅಂತಿನಿ ಅನ್ನೋದು ಇದಕ್ಕೆ. ಅವರಿಗೆ ವಿಷಯ, ವಿಚಾರ ಗೊತ್ತಿಲ್ಲದೆ ಮಾತನಾಡುತ್ತಾರೆ ಎಂದರು.

ನಮ್ಮ ತಂದೆ ಒಂದೇ ಒಂದು ದಿನ ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದರೆ, ಅದಕ್ಕೆ ಹೆಚ್​ ಡಿ ರೇವಣ್ಣನವರು ಶಿಫಾರಸು ಮಾಡಿದ್ದರೆ, ಇದಕ್ಕೆ ದಾಖಲೆ ನೀಡಲಿ. ನಮ್ಮಕ್ಕ ಭವಾನಿ ರೇವಣ್ಣ ನಶೆ ಪ್ರಭಾವದಿಂದ ಆ ರೀತಿ ನಮ್ಮ ತಂದೆ ಬಗ್ಗೆ ಮಾತನಾಡಿರಬಹುದು ಎಂದು ಟೀಕಿಸಿದರು.

ಅಮ್ಮ ಮಗ ರಾತ್ರಿಯೆಲ್ಲಾ  ಕುಡಿದು ಬೆಳಗ್ಗೆ ಎದ್ದು ಮಾತನಾಡುತ್ತಾರೆ, ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಬೇಕಾದ ತಾಯಿ ಮಗನ ಜೊತೆ ರಾತ್ರಿ 2 ಗಂಟೆ ವರೆಗೂ ಕುಡಿದು ನಶೆಯಲ್ಲಿ ತೇಲಾಡುತ್ತಾರೆ, ಬೆಳಗ್ಗೆ ಎದ್ದು ನಶೆಯಲ್ಲಿಯೇ ಮಾತನಾಡುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

ಹೆಂಡತಿ ಮಕ್ಕಳನ್ನು ಸಾಕೋಕಾಗ್ತಿಲ್ಲ ಅಂತಾ ಹಳ್ಳಿ ಮೈಸೂರಿನ ಇಂಜಿನಿಯರ್ ನಮ್ಮ ಬಳಿ ಗೋಗರೆದು ಬಿಬಿಎಂಪಿಗೆ ವರ್ಗಾವಣೆ ಮಾಡಿಸಿಕೊಂಡು ಬದುಕು ಕಟ್ಟಿಕೊಂಡ ವ್ಯಕ್ತಿಯ ಮಗ ಈಗ ನಮ್ಮ ಕುಟುಂಬದ ಬಗ್ಗೆ ಮಾತಾಡ್ತಾನೆ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹೇಳಿದ್ದರು. ಭವಾನಿ ರೇವಣ್ಣ ಅವರು ತಮ್ಮ ಹೇಳಿಕೆಗೆ ಸಾಬೀತು ಪಡಿಸಿದರೇ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದಾರೆ.

ರೇವಣ್ಣ ಅವರು ಮಾತನಾಡಿಲ್ಲ, ಅವರು ಬಹಳ ಸಂಸ್ಕಾರವಂತರು. ದೇವೇಗೌಡರು, ಚನ್ನಮ್ಮ ಅವರಿಗೆ ಸಂಸ್ಕಾರ ಕೊಟ್ಟಿದ್ದಾರೆ. ಇವರಿಗೆ ಸಂಸ್ಕಾರ ಇದೆಯೋ, ಇಲ್ಲವೋ ಗೊತ್ತಿಲ್ಲ. ಸಂಸದರಿಗೆ ಸಂಸ್ಕಾರ ಕಲಿಸಬೇಕಿರುವವರು ತಾಯಿ. ತಾಯಿನೇ ಆ ರೀತಿ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದರು.    

ಅನಿತಾ ಅಕ್ಕನನ್ನು ನೋಡಿದರೆ ಎರಡು ಕೈ ಮುಗಿದು ಬನ್ನಿ ಅಕ್ಕ ಅಂತಾ ಕರಿಬೇಕು ಅನಿಸುತ್ತದೆ. ತುಂಬಿದ ಕೊಡ ತುಳುಕುವುದಿಲ್ಲ. ಅನಿತಾ ಅಕ್ಕನ ಬಗ್ಗೆ ಮಾತನಾಡಲು ಆಗುತ್ತದೆಯಾ? ಅವರು ಸಂಸ್ಕಾರವಂತರಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿಗಳು, ಅವರ ಸೊಸೆ ನಾನೇ ಮಾಜಿ ಪ್ರಧಾನಿ ಅಂತಾ ತಲೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಮೊಮ್ಮಗ ನಾನೇ ಮಾಜಿ ಪ್ರಧಾನಿ ಎನ್ನುವ ರೀತಿ ಮಾತನಾಡುತ್ತಾರೆ" ಎಂದು ವ್ಯಂಗ್ಯವಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel