ರಾಜಕೀಯ

ಭಾರತ್ ಜೋಡೋ ಯಾತ್ರೆ: ರಾಯಚೂರಿನಲ್ಲಿ ರಾಹುಲ್ ಗೆ ಸಾಥ್ ನೀಡಲಿದ್ದಾರೆ ಪ್ರಿಯಾಂಕಾ!

Shilpa D

ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅಕ್ಟೋಬರ್ 22 ರಂದು ರಾಯಚೂರಿನ ಭಾರತ್ ಜೋಡೋ ಯಾತ್ರೆಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಸೇರುವ ನಿರೀಕ್ಷೆಯಿದೆ.

ಶನಿವಾರ ಬಳ್ಳಾರಿಯಲ್ಲಿ ನಡೆಯಲಿರುವ ಸಮಾವೇಶದ ನಂತರ ಯಾತ್ರೆಯು ಆಂಧ್ರ ಪ್ರದೇಶದ ಮೂಲಕ ಎರಡು ದಿನಗಳ ಕಾಲ ಸಂಚರಿಸಿ ನಂತರ ಕರ್ನಾಟಕದ ರಾಯಚೂರಿಗೆ ಮರಳಲಿದೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೈಸೂರಿನಲ್ಲಿ ನಡೆದ ಯಾತ್ರೆಯಲ್ಲಿ ಭಾಗವಹಿಸಿದ್ದು, ಪ್ರಿಯಾಂಕಾ ಅವರ ಎಂಟ್ರಿ ಪಕ್ಷಕ್ಕೆ ಮತ್ತಷ್ಟು ಬೂಸ್ಟ್ ನೀಡಲಿದೆ.

SCROLL FOR NEXT