ನಿಖಿಲ್ ಕುಮಾರಸ್ವಾಮಿ 
ರಾಜಕೀಯ

ಜನರು ಆಶೀರ್ವಾದ ಮಾಡುವವರೆಗೂ ನಾನು 'ಗುದ್ದಲಿ ಪೂಜೆ' ಮಾಡುವುದಿಲ್ಲ: ಮಂಡ್ಯದಲ್ಲೇ ಮತ್ತೆ ಸ್ಪರ್ಧಿಸುವ ಸುಳಿವು ನೀಡಿದ ನಿಖಿಲ್!

ಜನರು ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿದ ಬಳಿಕ ನಾನು ಗುದ್ದಲಿ ಪೂಜೆ ಮಾಡುತ್ತೇನೆ, ಅಲ್ಲಿಯವರೆಗೂ ಗುದ್ದಲಿ ಪೂಜೆ ಮಾಡುವುದಿಲ್ಲ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ: ಜನರು ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿದ ಬಳಿಕ ನಾನು ಗುದ್ದಲಿ ಪೂಜೆ ಮಾಡುತ್ತೇನೆ, ಅಲ್ಲಿಯವರೆಗೂ ಗುದ್ದಲಿ ಪೂಜೆ ಮಾಡುವುದಿಲ್ಲ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಪ್ರವಾಸ ಸಂದರ್ಭದಲ್ಲಿ ಮಾತನಾಡಿದ ಅವರು, ಜನರು ನನಗೊಂದು ಅವಕಾಶ ನೀಡುತ್ತಾರೆ. ಆಗ ಬಂದು ನಾನು ಮಂಡ್ಯದಲ್ಲಿ ಗುದ್ದಲಿ ಪೂಜೆ ಮಾಡುತ್ತೇನೆ. ಅಲ್ಲಿಯವರೆಗೆ ನಾನು ಯಾವುದೇ ಕಾಮಗಾರಿಗೂ ಗುದ್ದಲಿ ಪೂಜೆ ಮಾಡುವುದಿಲ್ಲ ಎಂದರು.

ಮಂಡ್ಯ ಜನರ ಪ್ರೀತಿ ನನ್ನ ಇದೆ. ಅವರು ಎಂದಿಗೂ ನಮ್ಮನ್ನು ಕೈಬಿಡಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‍ ಗೆಲ್ಲಿಸಿ ಎನ್ನುವ ಮೂಲಕ ಮಂಡ್ಯದಲ್ಲಿ ಮತ್ತೊಂದು ಚುನಾವಣೆ ಎದುರಿಸಲು ನಿಖಿಲ್ ಕುಮಾರಸ್ವಾಮಿ ಸಿದ್ಧರಾಗುತ್ತಿರುವುದಾಗಿ ಹೇಳಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಸಂಬಂಧ ಕುಮಾರಣ್ಣ ಹಾಗೂ ಪಕ್ಷದ  ತೀರ್ಮಾನವೇ ಅಂತಿಮ. ನಾನಿನ್ನು ಪಕ್ಷ ಕಟ್ಟುವ ಸಂಘಟನೆಯಲ್ಲಿ ತೊಡಗಿದ್ದೇನೆ. ಪಕ್ಷದ ವರಿಷ್ಠರ 123 ಗುರಿಯನ್ನು ಮುಟ್ಟಲವ ಶಕ್ತಿಯನ್ನು ಒಗ್ಗೂಡಿಸುವ ಕೆಲಸದಲ್ಲಿದ್ದೇನೆ ಎಂದರು.

ರಾಜ್ಯದ ಜನರು ಅನುಭವಿಸುತ್ತಿರುವ ಕಷ್ಣಗಳನ್ನು ಮನಗಂಡು ಮಾಜಿ ಸಿಎಂ ಕುಮಾರಣ್ಣ ರವರ ನೇತೃತ್ವದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿ ಸೇರಿದಂತೆ ಪಂಚರತ್ನ ಯೋಜನೆ ಮೂಲಕ ರಾಜ್ಯಾದ್ಯಂತ ಜೆಡಿಎಸ್‌ ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jamui harassment: ಮೂವರ ಬಂಧನ, 7 ಮಂದಿ ಗುರುತು ಪತ್ತೆ.. ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಪೊಲೀಸ್ ಶೋಧ!

Bihar horror:ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧ್ರಭಕ್ತರೇ ಹೊಣೆ - ರಾಹುಲ್ ಗಾಂಧಿ

ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಸಿಕ್ಕ ಸಿಕ್ಕವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ನಾಲ್ವರಿಗೆ ಗಂಭೀರ ಗಾಯ

ChatGPT ಬಳಕೆಯಿಂದ IIT ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಶಂಕೆ: ಪ್ರೊಫೆಸರ್ ಅಮಾನತು, SC, ST ಕಾಯ್ದೆಯಡಿ ಬಂಧನಕ್ಕೆ ಪೋಷಕರ ಒತ್ತಾಯ!

ಕೇರಳದಲ್ಲಿ ದಿಢೀರ್ ಪ್ರವಾಹ: ಈಜಲು ಹೋದವರು ನೀರುಪಾಲು, 5 ಸಾವು, ಓರ್ವ ನಾಪತ್ತೆ! Video