ಭಾರತ್ ಜೋಡೋ ಯಾತ್ರೆ ತಯಾರಿ ಕಾರ್ಯಕ್ರಮದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಡಿ ಕೆ ಶಿವಕುಮಾರ್, ಜೈರಾಮ್ ರಮೇಶ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ದಿಗ್ವಿಜಯ್ ಸಿಂಗ್ 
ರಾಜಕೀಯ

ಕಾಂಗ್ರೆಸ್ ನಿಂದ 'ಭಾರತ್ ಜೋಡೋ ಯಾತ್ರೆ': ಪಾದಯಾತ್ರಿಗಳ ಪಟ್ಟಿ ಬಿಡುಗಡೆ, ಪ್ರತಿ ಶಾಸಕರಿಗೆ 5 ಸಾವಿರ ಜನ ಸೇರಿಸುವ ಗುರಿ!

ಕಾಂಗ್ರೆಸ್ ನಲ್ಲೀಗ ಭಾರತ್ ಜೋಡೋ ಯಾತ್ರೆಗೆ ಭರದ ಸಿದ್ದತೆ ನಡೆಯುತ್ತಿದೆ. 117 ಮಂದಿ ಕಾಂಗ್ರೆಸ್ ನಾಯಕರ ಪೈಕಿ 9 ಮಂದಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜಸ್ತಾನದಿಂದ ಯಾತ್ರೆ ಪ್ರಾರಂಭಿಸಲಿದ್ದಾರೆ.

ಜೈಪುರ: ಕಾಂಗ್ರೆಸ್ ನಲ್ಲೀಗ ಭಾರತ್ ಜೋಡೋ ಯಾತ್ರೆಗೆ ಭರದ ಸಿದ್ದತೆ ನಡೆಯುತ್ತಿದೆ. 117 ಮಂದಿ ಕಾಂಗ್ರೆಸ್ ನಾಯಕರ ಪೈಕಿ 9 ಮಂದಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜಸ್ತಾನದಿಂದ ಯಾತ್ರೆ ಪ್ರಾರಂಭಿಸಲಿದ್ದಾರೆ.

ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗವಹಿಸುವ ನಾಯಕರ ಪಟ್ಟಿಯನ್ನು ಕಾಂಗ್ರೆಸ್ ನಿನ್ನೆ ಬಿಡುಗಡೆ ಮಾಡಿದೆ. ಯಾತ್ರೆಯು ಇದೇ ಸೆಪ್ಟೆಂಬರ್ 7ರಂದು ಆರಂಭವಾಗಲಿದ್ದು, ರಾಜಸ್ತಾನದ ಜಲವಾರ್, ಕೋಟ, ಡೌಸ ಮತ್ತು ಅಲ್ವರ್ ಜಿಲ್ಲೆಗಳ ಮೂಲಕ ಸಾಗಲಿದೆ. ರಾಜಸ್ತಾನದಿಂದ ಪ್ರಾತಿನಿಧ್ಯವನ್ನು ಶ್ರವಣ್ ಕುಮಾರ್ ಗುರ್ಜಾರ್, ಜಬರ್ ಶೆರಾವಟ್, ಸೀತಾರಾಮ್ ಲಂಬ, ಯೋಗೇಶ್ ಕುಮಾರ್ ಮೀನಾ, ರೂಬಿ ಖಾನ್, ವಿವೇಕ್ ಭಟ್ನಾಗರ್, ಜಗದೀಶ್ ಬಿಶ್ನೊಯ್ ಮತ್ತು ಶತ್ರುಘನ್ ಶರ್ಮ ವಹಿಸಲಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ರಾಜ್ಯಾಧ್ಯಕ್ಷ ದೊತಸಾರ ಅವರು ಸಹ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ಜೊತೆಯಾಗಲಿದ್ದಾರೆ.

ಕರ್ನಾಟಕದಿಂದ ಯಾತ್ರೆಯ ಬಗ್ಗೆ ವಿವರ ನೀಡಿದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯದಿಂದ ಪಕ್ಷದ ಪ್ರತಿಯೊಬ್ಬ ಶಾಸಕರು 5 ಸಾವಿರ ಜನರನ್ನು ಸೇರಿಸುವಂತೆ ಕೇಳಿಕೊಳ್ಳಲಾಗಿದ್ದು ರಾಜ್ಯದಲ್ಲಿ 21 ದಿನಗಳ ಕಾಲ ಯಾತ್ರೆ ನಡೆಯಲಿದೆ ಎಂದರು.

ಸಮಾಜದ ಎಲ್ಲಾ ವರ್ಗದ ಜನರು, ಕನ್ನಡಪರ ಸಂಘಟನೆಗಳು, ಚಲನಚಿತ್ರ ನಟರು, ರೈತರು ಮತ್ತು ಇತರ ವರ್ಗದವರು ಯಾತ್ರೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ನಾಗರಿಕರು ಸಹ ನೋಂದಣಿ ಮಾಡಿಕೊಳ್ಳಬಹುದು ಎಂದರು.

ನಿನ್ನೆ ಬೆಂಗಳೂರಿನಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಜೈರಾಮ್ ರಮೇಶ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಇತರರು ಭಾಗವಹಿಸಿದ್ದರು. ಭಾರತ್ ಜೋಡೋ ಯಾತ್ರೆ ದೇಶದ 12 ರಾಜ್ಯಗಳಲ್ಲಿ ಸೆಪ್ಟೆಂಬರ್ 7ರಂದು ಆರಂಭವಾಗಿ 3,570 ಕಿಲೋ ಮೀಟರ್ ಸಂಚರಿಸಲಿದೆ. 

ಇದು ಜನರ ಚಿಂತನ ಯಾತ್ರೆ. ಪ್ರಧಾನಿಯವರ ವಿರುದ್ಧ ಘೋಷಣೆ ಕೂಗುವುದು, ಭಾಷಣ ಮಾಡುವುದು ಇರುವುದಿಲ್ಲ, ಜನರ ಕಷ್ಟಗಳನ್ನು ತಿಳಿಯಲು ಮೌನ ಮೆರವಣಿಗೆಯಾಗಿದೆ ಎಂದರು.

ಪಕ್ಷವನ್ನು ತೊರೆಯುವವರು ಹೋಗಬಹುದು. ಕೆಲವರು ಈಗಾಗಲೇ ತೊರೆಯುವ ಕಾತರದಲ್ಲಿದ್ದಾರೆ, ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ತೊರೆಯುವವರು ಹೋಗಬಹುದು, ಮಾತನಾಡುವವರು ಮಾತನಾಡಬಹುದು. ಆದರೆ ಭಾರತ್ ಜೋಡೋ ಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ನ ತತ್ವ, ಸಿದ್ಧಾಂತಗಳ ಆಧಾರದ ಮೇಲೆ ಈ ಮೆರವಣಿಗೆಯಾಗಿದ್ದು, ಬಿಜೆಪಿಯು ಕೋಮು ರಾಜಕೀಯದಲ್ಲಿ ತೊಡಗಿದೆ ಎಂದು ಭಾರತ್ ಜೋಡೋ ಯಾತ್ರೆಯ ಯೋಜನಾ ತಂಡದ ಮುಖ್ಯಸ್ಥ ದಿಗ್ವಿಜಯ್ ಸಿಂಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT