ಸಿದ್ದರಾಮಯ್ಯ 
ರಾಜಕೀಯ

ರಾಶಿ ರಾಶಿ ಹಗರಣಗಳ ಅನಭಿಷಿಕ್ತ ದೊರೆ ರೀಡುರಾಮಯ್ಯ: ಬಿಜೆಪಿ ಕಿಡಿ

ಕಾಂಗ್ರೆಸ್ ಸರ್ಕಾರ ಹಗರಣ ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದೋ ಎಂಬ ರೀತಿಯಲ್ಲಿ ಭ್ರಷ್ಟ ರಾಮಯ್ಯ ಸರ್ಕಾರ ಆಡಳಿತ ನಡೆಸಿತ್ತು. ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಹಾಕಿ ಓಡಾಡಿದ ಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ಕಿಡಿಕಾರಿದೆ.

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹಗರಣ ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದೋ ಎಂಬ ರೀತಿಯಲ್ಲಿ ಭ್ರಷ್ಟ ರಾಮಯ್ಯ ಸರ್ಕಾರ ಆಡಳಿತ ನಡೆಸಿತ್ತು. ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಹಾಕಿ ಓಡಾಡಿದ ಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ಕಿಡಿಕಾರಿದೆ.

ಸರಣಿ ಟ್ವೀಟ್ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿರುವ ಬಿಜೆಪಿ, ರಾಶಿ ರಾಶಿ ಹಗರಣಗಳ ಅನಭಿಷಿಕ್ತ ದೊರೆ ಎಂದರೆ ಅದು ರೀಡು ರಾಮಯ್ಯ. ಅನ್ನಭಾಗ್ಯ ಅಕ್ಕಿ ಕಳವು, ಅರ್ಕಾವತಿ ರೀಡೂ ಹಗರಣ, ಹಾಸಿಗೆ ತಲೆದಿಂಬು ಖರೀದಿ ಹಗರಣ, ಕಲ್ಲು ಗಣಿಗಾರಿಕೆ, ಮರಳು ದಂಧೆ, ಟ್ರಾನ್ಸ್ ಫರ್ ದಂದೆ, ಭ್ರಷ್ಟರಾಮಯ್ಯ ಇದಕ್ಕೆಲ್ಲಾ ಪಡೆದ ಕಮೀಷನ್ ಎಷ್ಟು? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯನ್ನು ತಮ್ಮ ಎಟಿಎಂ ರೀತಿ ಬಳಸಿದ್ದ ಕೆ.ಜೆ. ಜಾರ್ಜ್ ಸಿದ್ದರಾಮಯ್ಯ ಪಾಲಿನ ಎಟಿಎಂ ಆಗಿದ್ದರು. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1,400 ಕೋಟಿ ಹಗರಣ ನಡೆದಿತ್ತು. ಈ ಎಲ್ಲಾ ಹಗರಣಗಳಿಗೂ ಕಾವಲುಗಾರನಾಗಿದ್ದು ಭ್ರಷ್ಟರಾಮಯ್ಯ, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು ಖಾತೆ ನಿರ್ವಹಣೆ ಮಾಡುವ ಬದಲು ತಮ್ಮ ಖಾತೆ ಭರ್ತಿ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಸತ್ ನಲ್ಲಿ ನಿರ್ಬಂಧಿಸಿದ್ದ AAP ಗೆ ಶಾಕ್! ರಾಘವ್ ಚಡ್ಡಾ ಸೇರಿ 7 ಸಂಸದರು ಬಿಜೆಪಿ ಸೇರ್ಪಡೆ; ಸರ್ಕಾರಕ್ಕೆ ಮತ್ತಷ್ಟು ಬಲ!

CET ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ: ಮೂವರು ಸಿಬ್ಬಂದಿ ಅಮಾನತು, ತನಿಖೆಗೆ ಆದೇಶ

ಹೋಗಿ ಎದ್ದು ಹೋಗಿ, ಇವರು ಗೆಲ್ಲಲ್ಲ: ಆಟದ ಮಧ್ಯದಲ್ಲೇ ಸ್ಟೇಡಿಯಂನಿಂದ ಹೊರಹೋದ MI ಮಾಲೀಕ ಆಕಾಶ್ ಅಂಬಾನಿ, Video!

'ಮಹಾ ಜಂಗಲ್ ರಾಜ್'ಗೆ ಮರಣ ಶಾಸನ': ಮೊದಲ ಹಂತದ ದಾಖಲೆಯ ಮತದಾನದಿಂದ TMC ಬೆಚ್ಚಿಬಿದ್ದಿದೆ

ಬಿಹಾರ: ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದು ಬೀಗಿದ ಸಾಮ್ರಾಟ್ ಚೌಧರಿ

SCROLL FOR NEXT