ರಾಜಕೀಯ

ಗೋರಕ್ಷಕರಿಂದ ವ್ಯಕ್ತಿಯ ಹತ್ಯೆ: ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

Ramyashree GN

ಬೆಂಗಳೂರು: ಮಂಡ್ಯದ ವ್ಯಕ್ತಿಯೊಬ್ಬನನ್ನು ಗೋರಕ್ಷಕರ ಗುಂಪೊಂದು ಶುಕ್ರವಾರ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜೀನಾಮೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸಂತ್ರಸ್ತ ಇದ್ರೀಸ್ ಪಾಷಾ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಪುನೀತ್ ಕೆರೆಹಳ್ಳಿ ನೇತೃತ್ವದ ಗೋರಕ್ಷಕರ ಗುಂಪೊಂದು ಆತನನ್ನು ಕೊಂದು ಹಾಕಿತ್ತು.

ಘಟನೆಯನ್ನು ಖಂಡಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿದ್ದು, ಆರಗ ಅವರಿಗೆ ಗೃಹ ಸಚಿವರಾಗಿ ಉಳಿಯುವ ನೈತಿಕ ಹಕ್ಕು ಇಲ್ಲ ಎಂದರು. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಅಸಮರ್ಥ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಈ ಸಾವಿಗೆ ನೇರ ಹೊಣೆ. ಈ ಅಸಮರ್ಥ ಸರ್ಕಾರದ ಅಡಿಯಲ್ಲಿ ಜನರು ಸುರಕ್ಷತೆ ಮತ್ತು ಭದ್ರತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅವರನ್ನು ಮೊದಲು ಸಚಿವ ಸಂಪುಟದಿಂದ ಹೊರಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುನೀತ್ ಕೆರೆಹಳ್ಳಿ ಅವರೊಂದಿಗೆ ಅನೇಕ ಬಿಜೆಪಿ ನಾಯಕರು ಮತ್ತು ಸಚಿವರಿರುವ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. 

'ಇದು [ಕೊಲೆ] ಕೋಮು ಉದ್ವಿಗ್ನತೆಯನ್ನು ಉಲ್ಬಣಗೊಳಿಸಲು ಮತ್ತು ಮತದಾರರನ್ನು ಧ್ರುವೀಕರಣಗೊಳಿಸಲು ಒಂದು ಸಂಯೋಜಿತ ಕೃತ್ಯದಂತೆ ತೋರುತ್ತಿದೆ' ಎಂದು ಹೇಳಿದರು.

SCROLL FOR NEXT