ರಾಜಕೀಯ

ಕಾಂಗ್ರೆಸ್ ನಲ್ಲಿ ತಗ್ಗಿದ ಭಿನ್ನಮತ; ಅಭ್ಯರ್ಥಿಗಳ ಆಯ್ಕೆಗೆ ಮೂಡದ ಒಮ್ಮತ; ಒಕ್ಕಲಿಗ-ಕುರುಬ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಇಬ್ಬರ ಹರಸಾಹಸ!

Shilpa D

ಬೆಂಗಳೂರು: ಕಾಂಗ್ರೆಸ್ ನೊಳಗಿನ ಭಿನ್ನಾಭಿಪ್ರಾಯಗಳು ಸದ್ಯಕ್ಕೆ ಶಮನಗೊಂಡಿರುವಂತೆ ತೋರುತ್ತಿದೆ. ಆದರೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರು ತಮ್ಮ ಬೆಂಬಲಿಗರ ಹಿತಾಸಕ್ತಿ ಕಾಪಾಡಲು ಹೋರಾಟ ನಡೆಸುತ್ತಿದ್ದಾರೆ.

ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮ ಬೆಂಬಲಿತ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿರಬೇಕು ಎಂಬುದು ಇಬ್ಬರು ನಾಯಕರ ಇಚ್ಚೆಯಾಗಿದೆ.

ಅಭ್ಯರ್ಥಿಗಳ ಆಯ್ಕೆಯ ಸಮಯದಲ್ಲಿ ಶಿವಕುಮಾರ್ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಅವರ ಉಮೇದುವಾರಿಕೆಗೆ ಒಲವು ತೋರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಮೂಲಕ ಸಿದ್ದರಾಮಯ್ಯ ಪಾಳಯಕ್ಕೆ ಹಿನ್ನಡೆಯಾಗುವಂತೆ ಮಾಡಿದ್ದಾರೆ ಎನ್ನಲಾಗಿದೆ.

ಆದರೆ ಕೆಲವು ಸ್ಥಾನಗಳನ್ನು ಹೊರತುಪಡಿಸಿ ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ ಒಕ್ಕಲಿಗ ಕ್ಷೇತ್ರಗಳನ್ನು ಸಿದ್ದರಾಮಯ್ಯ ಟಚ್ ಮಾಡದಿರುವಂತೆ ವಂತೆ ಉಭಯ ನಾಯಕರ ನಡುವೆ  ಒಪ್ಪಂದವಾಗಿರುವಂತೆ ಕಂಡು ಬರುತ್ತಿದೆ.

ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳು ಅಂದರೆ ವಿಶೇಷವಾಗಿ ಮಧ್ಯ ಕರ್ನಾಟಕ ಪ್ರದೇಶದಲ್ಲಿ ಸಿದ್ದರಾಮಯ್ಯನವರ ಸಮುದಾಯದ ಕುರುಬರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆ ಭಾಗದ ಟಿಕೆಟ್ ಹಂಚಿಕೆ ವಿಚಾರವಾಗಿ ಡಿಕೆ ಶಿವಕುಮಾರ್ ತಲೆ ಹಾಕದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ,  ಆದರೆ ಈ ಶಾಂತಿ ಅಲ್ಪಾವಧಿಯದ್ದಾಗಿರಬಹುದು ಎಂದು ಹೇಳಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಚ್ಚಾಗಿ ಪಕ್ಷದ ಸಮೀಕ್ಷೆಗಳನ್ನು ಅನುಸರಿಸಿದ್ದಾರೆ. ಶಿವಕುಮಾರ್, ಸಿದ್ದರಾಮಯ್ಯ ಮತ್ತು ಇತರ ನಾಯಕರನ್ನು ತಮ್ಮನ್ನು ತಾವು ಸ್ವಲ್ಪ ವರ್ಚಸ್ಸು ಹೊಂದಿರುವ ಪ್ರದೇಶಗಳಿಗೆ ಸೀಮಿತಗೊಳಿಸುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಕ್ಕಲಿಗ ಮುಖಂಡ ಪುಟ್ಟಣ್ಣ ಅವರಿಗೆ ರಾಜಾಜಿನಗರ ಕ್ಷೇತ್ರ ಹಾಗೂ ಸಿದ್ದರಾಮಯ್ಯ ಅವರ ಅನುಯಾಯಿ ಎನ್‌ವೈ ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಟಿಕೆಟ್‌ ಖಚಿತವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಕಿಮ್ಮನೆ ರತ್ನಾಕರ್, ಬೈರತಿ ಸುರೇಶ್, ಅಖಂಡ ಶ್ರೀನಿವಾಸಮೂರ್ತಿ, ಸಂತೋಷ್ ಲಾಡ್ ಸೇರಿದಂತೆ ಇತರರನ್ನು ಸಿದ್ದರಾಮಯ್ಯ ಬೆಂಬಲಿಸಿದ್ದಾರೆ ಎನ್ನಲಾಗಿದೆ. ಒಕ್ಕಲಿಗರಾದ ಬೊಮ್ಮನಹಳ್ಳಿ, ಕೇಶವ ರಾಜಣ್ಣ (ಯಲಹಂಕ) ಮತ್ತು ಧನಂಜಯ್ (ದಾಸರಹಳ್ಳಿ) ಪರ ಉಮಾಪತಿ ಗೌಡ ಪರ ಶಿವಕುಮಾರ್  ಬ್ಯಾಟಿಂಗ್ ಮಾಡಿದ್ದಾರೆ.

ಆನೇಕಲ್ ಕ್ಷೇತ್ರದ ಜಿಗಣಿಯಿಂದ ಕಣಕ್ಕಿಳಿದಿರುವ ಮುರಳಿಮೋಹನ್ ಅವರಿಗೆ ಶಿವಕುಮಾರ್ ಹೊಸಬರನ್ನು ಬೆಂಬಲಿಸುತ್ತಿರುವುದರಿಂದ ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಗೊಂದಲ ಉಂಟಾಗಿದೆ.

ಎಂ.ವೀರಪ್ಪ ಮೊಯ್ಲಿ, ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ ಸೇರಿದಂತೆ ದಿಗ್ಗಜರು ತಮ್ಮ ಅಭಿಪ್ರಾಯ ಹೇಳಲು ಯತ್ನಿಸಿದರೂ ಖರ್ಗೆ, ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದರಿಂದ ವಿಫಲವಾಯಿತು ಎಂದು ಮೂಲಗಳು ತಿಳಿಸಿವೆ.

ಆದರೆ ಯಾರ ಬಣ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹಳೇ ಮೈಸೂರಿನಲ್ಲಿ ಜೆಡಿಎಸ್ ಇನ್ನೂ ಪ್ರಬಲ ಶಕ್ತಿಯಾಗಿರುವುದರಿಂದ ಶಿವಕುಮಾರ್ ಅವರಿಗೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.

SCROLL FOR NEXT