ರಮೇಶ್ ಜಾರಕಿಹೊಳಿ 
ರಾಜಕೀಯ

ಅಥಣಿಗಾಗಿ ಲಕ್ಷ್ಮಣ ಸವದಿ ಫೈಟ್; ಕುಮಟಳ್ಳಿ ಸೇರಿದಂತೆ ಬಿಜೆಪಿ ಸೇರಿದ ಎಲ್ಲ 17 ಶಾಸಕರಿಗೂ ಟಿಕೆಟ್: ರಮೇಶ್ ಜಾರಕಿಹೊಳಿ ಬಾಂಬ್

ಅಥಣಿಯ ಮಹೇಶ ಕುಮಟಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ ಸೇರಿದಂತೆ 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಎಲ್ಲ 17 ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಬೆಳಗಾವಿ: ಅಥಣಿಯ ಮಹೇಶ ಕುಮಟಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ ಸೇರಿದಂತೆ 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಎಲ್ಲ 17 ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಶಿನ್ನೋಳಿ ಗ್ರಾಮದ ಕಾರ್ಖಾನೆ ಕಟ್ಟಡದಲ್ಲಿ ಜಾರಕಿಹೊಳಿ ತಮ್ಮ ಅನುಯಾಯಿಗಳ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೆಲವು ಮಾಹಿತಿ ಬಹಿರಂಗ ಪಡಿಸುವುದು ಕಷ್ಟ, ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಸೋಲು-ಗೆಲುವು ದೇವರ ಆಶಯವಾಗಿದ್ದು, ಲಕ್ಷ್ಮಣ ಸವದಿ ಯಾಕೆ ಹತಾಶರಾಗುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಪಕ್ಷದಲ್ಲಿ ವರಿಷ್ಠರಿದ್ದಾರೆ, ಅವರೇ ತೀರ್ಮಾನ ಮಾಡುತ್ತಾರೆ, ಸವದಿ ಅವರಿಗೆ ಸುಮ್ಮನಿರಲು ಸೂಚಿಸುತ್ತೇನೆ ಎಂದು ಜಾರಕಿಹೊಳಿ ಹೇಳಿದರು.

ಅಥಣಿ ಕ್ಷೇತ್ರದ ಟಿಕೆಟ್ ವಿಚಾರವಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ನಡುವೆ ಮಾತಿನ ಪರಸ್ಪರ ವಾಗ್ದಾಳಿ ನಡೆಯುತ್ತಿದೆ. 2020ರಲ್ಲಿ ಜಾರಕಿಹೊಳಿ ಜೊತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಜಾರಕಿಹೊಳಿ ಬೆಂಬಲ ನೀಡಿದ್ದಾರೆ. ಆದರೆ, 2018ರ ಚುನಾವಣೆಯಲ್ಲಿ ಕುಮಟಳ್ಳಿಯಿಂದ ಸ್ಪರ್ಧಿಸಿ ಸೋತಿದ್ದ ಎಂಎಲ್‌ಸಿ ಲಕ್ಷ್ಮಣ ಸವದಿ ಟಿಕೆಟ್ ಗಾಗಿ ಉನ್ನತ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಡಿಕೆ ಶಿವಕುಮಾರ್ ಪತ್ರ!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video