ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ, ಆದರೆ ಅಭ್ಯರ್ಥಿಗಳ ಪಟ್ಟಿ ನೋಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಇನ್ನೂ ಜಾತಿ ಸಮೀಕರಣ ಮತ್ತು ಲಿಂಗಾಯತ ಮತಗಳ ಮಹತ್ವವನ್ನು ಅರ್ಥಮಾಡಿಕೊಂಡಿಲ್ಲ ಎಂದು ಸಮುದಾಯದ ಮುಖಂಡರು ಪ್ರತಿಪಾದಿಸಿದ್ದಾರೆ.
ಜಾತಿವಾರು ಅಭ್ಯರ್ಥಿಗಳ ವಿಭಜನೆಯು ಜನಸಂಖ್ಯೆಯಲ್ಲಿ ಶೇ.17-20 ರಷ್ಟಿರುವ ಲಿಂಗಾಯತರು ಹೆಚ್ಚು ಕ್ಷೇತ್ರ ಕೇಳಿದರೂ ಕೇವಲ 37 ಸ್ಥಾನಗಳನ್ನು ಪಡೆದಿದ್ದಾರೆ ಎಂದು ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಹೇಳಿದ್ದಾರೆ. ಮೂರನೇ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದವರು ಸುಮಾರು 16 ಸ್ಥಾನಗಳನ್ನು ಕೇಳಿದ್ದಾರೆ ಎಂದು ಹೇಳಿದ್ದಾರೆ.
ಮೊದಲ 124 ಕ್ಷೇತ್ರಗಳನ್ನು ಘೋಷಿಸಿದ ನಂತರ 100 ಸ್ಥಾನಗಳಲ್ಲಿ ಲಿಂಗಾಯತರು ಸುಮಾರು 16 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರು. 55 ಸಾವಿರಕ್ಕೂ ಅಧಿಕ ಲಿಂಗಾಯತರನ್ನು ಹೊಂದಿರುವ ಹೊಸದುರ್ಗದಲ್ಲಿ ಹಾಗೂ 60-65 ಸಾವಿರ ಲಿಂಗಾಯತರು ವಾಸಿಸುವ ಕಡೂರು ಮತ್ತು ತರೀಕೆರೆಯಲ್ಲಿ ಲಿಂಗಾಯತೇತರ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಹರಿಹರದಲ್ಲಿ ಹೆಚ್ಚಿನ ಲಿಂಗಾಯತ ಜನಸಂಖ್ಯೆ ಇದ್ದರೂ, ಪಕ್ಷವು ಲಿಂಗಾಯತೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ.
ಇದನ್ನೂ ಓದಿ: ಬಿಜೆಪಿಯಿಂದ ವಲಸೆ ಬಂದ ಪುಟ್ಟಣ್ಣಗೆ ರಾಜಾಜಿನಗರ 'ಕೈ' ಟಿಕೆಟ್: ಬಂಡಾಯ ಸಾರಿದ ಲಿಂಗಾಯತ ನಾಯಕ ಬಿ.ಎಸ್ ಪುಟ್ಟರಾಜು!
ಶಿಕಾರಿಪುರ, ಶಿವಮೊಗ್ಗ, ಹೊನ್ನಾಳಿ, ಬ್ಯಾಡಗಿ ಮತ್ತು ರಾಣೇಬೆನ್ನೂರಿನಲ್ಲಿ ಲಿಂಗಾಯತ ಜನಸಂಖ್ಯೆ ಹೆಚ್ಚಿರುವುದನ್ನು ಗಮನಿಸಿದರೆ, ಈ ಸ್ಥಾನಗಳನ್ನು ಲಿಂಗಾಯತೇತರರ ಮೇಲೆ ಕಾಂಗ್ರೆಸ್ ಭರವಸೆ ಇಟ್ಟು ಟಿಕೆಟ್ ನೀಡಿದೆ, ಅವರು ಮಾಡುತ್ತಿರುವ ಕೆಲಸ ಸರಿಯೇ ಎಂದು ಸಮುದಾಯದ ಮುಖಂಡರು ಪ್ರಶ್ನಿಸುತ್ತಾರೆ.
ತರೀಕೆರೆಯಲ್ಲಿ ಕುರುಬರನ್ನು ಬಿಟ್ಟು ಸಣ್ಣ ಮಡಿವಾಳ ಸಮುದಾಯಕ್ಕೆ ಟಿಕೆಟ್ ನೀಡಲು ಪಕ್ಷ ಯೋಚಿಸಿ ಹಿಂದುಳಿದ ಸಮುದಾಯಗಳನ್ನು ಗೆಲ್ಲಿಸಬಹುದಿತ್ತು. ಹಿಂದುಳಿದವರು ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದು ಸ್ಥಾನ ಬಯಸಿದ್ದರು. ಎಂ.ಸಿ.ಮನಗೂಳಿ ಅವರು ನಿಧನರಾದ ನಂತರ ಅವರ ಸ್ಥಾನಕ್ಕೆ ಬೇರೊಬ್ಬ ಸಮುದಾಯದ ನಾಯಕರನ್ನು ಲಿಂಗಾಯತರು ಬಯಸಿದ್ದರು.
ಅದೇ ರೀತಿ ಚಿಕ್ಕಪೇಟೆ ಟಿಕೆಟ್ ಲಿಂಗಾಯತ ನಾಯಕಿಗಂಗಾಂಬಿಕೆಗೆ ನೀಡಬೇಕು ಎಂದು ಕೇಳುತ್ತಿದ್ದಾರೆ. ಮೈಸೂರಿನ ಕೃಷ್ಣರಾಜ ಕ್ಷೇತ್ರ ಕೂಡ ಹೆಚ್ಚಿನ ಸಂಖ್ಯೆಯ ಲಿಂಗಾಯತರನ್ನು ಹೊಂದಿದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಪರಿಗಣಿಸುವಾಗ ಸಾಮಾಜಿಕ ನ್ಯಾಯದ ಜೊತೆಗೆ ಗೆಲುವನ್ನು ಪರಿಗಣಿಸಬೇಕು" ಎಂದು ಪ್ರಸನ್ನ ಹೇಳಿದರು.