ರಾಜಕೀಯ

4 ದಶಕಗಳ ಸಂಬಂಧಕ್ಕೆ ಎಳ್ಳುನೀರು; ಟಿಕೆಟ್ ನೀಡದ್ದಕ್ಕೆ ಸೊಗಡು ಶಿವಣ್ಣ ಕಣ್ಣೀರು; ಬಿಜೆಪಿ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ!

Shilpa D

ತುಮಕೂರು: ಕೊರಳಿಗೆ ಎರಡು ಗೋಣಿಚೀಲ ನೇತು ಹಾಕಿಕೊಂಡು ಮತ ಭಿಕ್ಷೆ ಕೇಳುವ ಮೂಲಕ ಸುದ್ದಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಬಿಜೆಪಿ ಜತೆಗಿನ ನಾಲ್ಕು ದಶಕಗಳ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾರೆ.

ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಏಪ್ರಿಲ್‌ 17 ರಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸೊಗಡು ಶಿವಣ್ಣ ತಯಾರಿ ನಡೆಸಿದ್ದಾರೆ. ಪಕ್ಷ ನನ್ನನ್ನು ಕಾಪಾಡುತ್ತದೆ ಎಂದುಕೊಂಡಿದ್ದೆ ಆದರೆ ನನಗೆ ನಂಬಿಕೆ ದ್ರೋಹ ಮಾಡಿದೆ. ಬಿಜೆಪಿಯ ಎಲ್ಲಾ ಸಾಮಗ್ರಿಗಳನ್ನು ನನ್ನ ಮನೆ ಹಾಗೂ ಕಚೇರಿಯ ಹೊರಗೆ ಎಸೆಯುತ್ತೇನೆ ಎಂದು ಬುಧವಾರ ನಡೆದ ಬೆಂಬಲಿಗರ ಸಭೆಯಲ್ಲಿ ಹೇಳಿದರು.

74 ವರ್ಷ ವಯಸ್ಸಿನ ಆರ್‌ಎಸ್‌ಎಸ್ ನಾಯಕ  ತುಮಕೂರಿನಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2018 ರಲ್ಲಿ ಸಂಸದ ಜಿ ಎಸ್ ಬಸವರಾಜು ಅವರ ಪುತ್ರ ಹಾಲಿ ಶಾಸಕ ಜಿ ಬಿ ಜ್ಯೋತಿಗಣೇಶ್ ಅವರಿಗಾಗಿ ಟಿಕೆಟ್ ತ್ಯಾಗ ಮಾಡಿದ್ದರು.

ಇಬ್ಬರೂ ಮೂಲತಃ ಕಾಂಗ್ರೆಸ್ಸಿನವರು, ಆರಂಭದಿಂದದೂ ಕಷ್ಟ ಪಟ್ಟು ನಾವು ಕಟ್ಟಿದ ಪಕ್ಷದಲ್ಲಿ ಅಧಿಕಾರ ಅನುಭವಿಸಿದರು ಎಂದು ಶಿವಣ್ಣ ಆರೋಪಿಸಿದ್ದಾರೆ. ಸೊಗಡು ಶಿವಣ್ಣ 1975 ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿಗೂ ಹೋಗಿದ್ದರು.

SCROLL FOR NEXT