ರಾಜಕೀಯ

ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿಗೆ ಬಿಜೆಪಿ ಹುನ್ನಾರ: ಡಿ ಕೆ ಶಿವಕುಮಾರ್ ಹೊಸ ಬಾಂಬ್

Sumana Upadhyaya

ಬೆಂಗಳೂರು: ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸುವ ಮೂಲಕ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರನ್ನು ಮತ್ತು ಇತರೆ ಉದ್ಯಮಿಗಳನ್ನು ಹೆದರಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ ಕೆ ಶಿವಕುಮಾರ್, ಐಟಿ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿಯಾಗಿಸುತ್ತಿಲ್ಲ. ಜೊತೆಗೆ ನಮ್ಮ ನಾಯಕರ ಜೊತೆಗಿರುವ ಉದ್ದಿಮೆದಾರರನ್ನೂ ಸಹ ಗುರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ಮನೆಗೆ ಬಂದು ಹೋಗುವ ‘ಬ್ಯುಸಿನೆಸ್‌ ಮನ್‌’ಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಐಟಿ ಅಧಿಕಾರಿಗಳ ದಾಳಿ ಕುರಿತು ಅವರೆಲ್ಲ ಭಯಬಿದ್ದಿದ್ದಾರೆ. ಆ ಕಾರಣದಿಂದ ಅವರು ನಮ್ಮ ಕರೆಗಳನ್ನೂ ಸ್ವೀಕರಿಸುತ್ತಿಲ್ಲ” ಎಂದು ಹೇಳಿದರು. 

“ಐಟಿ ಅಧಿಕಾರಿಗಳು ನಮ್ಮ ಮೇಲಷ್ಟೆ ದಾಳಿ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಇರುವವರೆಲ್ಲ ಸತ್ಯ ಹರಿಶ್ಚಂದ್ರರೇ. ರಾಜಕೀಯ ಪ್ರೇರಿತ ದಾಳಿಗಳನ್ನು ನಾವು ಹೆದರಿಸುತ್ತೇವೆ” ಎಂದು ಹೇಳಿದರು.

ಶೆಟ್ಟರ್, ಸವದಿ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್, “ಈ ಮೊದಲು ನಮ್ಮ ಗುರಿ 140 ಸ್ಥಾನಗಳಾಗಿತ್ತು. ಆದರೆ, ಸವದಿ ಮತ್ತು ಶೆಟ್ಟರ್ ಆಗಮನದಿಂದ ನಾವು 150 ಸ್ಥಾನಗಳನ್ನು ಗೆಲ್ಲಲಿದ್ದೇವೆ. ಲಿಂಗಾಯತ ಮತ್ತು ವಿರಶೈವ ಮತಗಳು ಈ ಚುನಾವಣೆಯಲ್ಲಿ ನಮಗೆ ಬರುತ್ತವೆ ಎಂದು ಹೇಳಿದರು.

SCROLL FOR NEXT